ನಿಷೇಧದ ಹೊರತಾಗಿಯೂ ಪ್ರಚಾರ ಮಾಡಿದ ಸಾದ್ವಿ ಪ್ರಗ್ಯಾ ಠಾಕೂರ್ ಗೆ ಚುನಾವಣಾ ಆಯೋಗದಿಂದ ನೋಟಿಸ್

ಮೂರು ದಿನ ಪ್ರಚಾರ ನಡೆಸದಂತೆ ಚುನಾವಣಾ ಆಯೋಗದ ನಿರ್ಬಂಧದ ನಡುವೆಯೂ ಪ್ರಚಾರ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಭೂಪಾಲ್ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್
ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್

ಭೂಪಾಲ್ : ಮೂರು ದಿನ ಪ್ರಚಾರ ನಡೆಸದಂತೆ ಚುನಾವಣಾ ಆಯೋಗದ ನಿರ್ಬಂಧದ ನಡುವೆಯೂ ಪ್ರಚಾರ ನಡೆಸಿದ  ದೂರಿನ ಹಿನ್ನೆಲೆಯಲ್ಲಿ ಭೂಪಾಲ್ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಜಿಲ್ಲಾ ಚುನಾವಣಾ  ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಈ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ  ಪ್ರಗ್ಯಾ ಸಿಂಗ್  ಠಾಕೂರ್, ನಾನೊಬ್ಬಳು ಸನ್ಯಾಸಿನಿ,  ಆಧ್ಯಾತ್ಮಿಕತೆ, ಭಾರತದ ಸಂಸ್ಕೃತಿಯ ಸಂಕೇತ ಹಾಗೂ ಮೌಲ್ಯಗಳಿಂದ ನನ್ನ ಜೀವನ ಕೂಡಿದೆ. ಇವುಗಳನ್ನು ತಡೆಯಲು ಕೆಲವರು ಪ್ರಯತ್ನಿಸಿದರೆ, ನಾನು ಅವರ ಬುದ್ದಿವಂತಿಕೆಗೆ ಇದನ್ನು ಬಿಡುತ್ತೇನೆ ಎಂದು ಹೇಳಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ನೀಡಿದ್ದ ಹೇಳಿಕೆ ಸಂಬಂಧ  ಪ್ರಗ್ಯಾ ಸಿಂಗ್ ಠಾಕೂರ್,  ಮೂರು ದಿನಗಳ ಕಾಲ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ಬುಧವಾರ ನಿಷೇಧ ಹೇರಿತ್ತು.
ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿತ್ತು. ಈಗ ನಿರ್ಬಂಧದ ನಡುವೆಯೂ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ಆಯೋಗ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಠಾಕೂರ್ ಅವರಿಗೆ ತಿಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com