ಬಿಜೆಪಿ ಗೂಂಡಾಗಳಿಂದ ವಿದ್ಯಾಸಾಗರ್ ಪ್ರತಿಮೆ ಧ್ವಂಸ: ಚು.ಆಯೋಗಕ್ಕೆ ವಿಡಿಯೋ ಸಾಕ್ಷಿ ನೀಡಿದ ಟಿಎಂಸಿ

ಕೋಲ್ಕತ್ತಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ನಡೆದ ಹಿಂಸಾಚಾರಕ್ಕೆ ಬಿಜೆಪಿಯವರು ಕಾರಣ. ಈ ಸಂಬಂಧ ತಮ್ಮ ಬಳಿ ವಿಡಿಯೋ ಸಾಕ್ಷಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೋಲ್ಕತ್ತಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ನಡೆದ ಹಿಂಸಾಚಾರಕ್ಕೆ ಬಿಜೆಪಿಯವರು ಕಾರಣ. ಈ ಸಂಬಂಧ ತಮ್ಮ ಬಳಿ ವಿಡಿಯೋ ಸಾಕ್ಷಿಯಿದ್ದು ಅದನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ಟಿಎಂಸಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಬಿಜೆಪಿ ರೋಡ್ ಶೋ ವೇಳೆ ಹಿಂಸಾಚಾರ ನಡೆಸಿದ್ದು ಇದಕ್ಕೆ ಟಿಎಂಸಿ ಕಾರಣ ಎಂದು ಅಮಿತ್ ಶಾ ಆರೋಪಿಸಿದ್ದರೇ ಇತ್ತ ಟಿಎಂಸಿ ಬಿಜೆಪಿ ಗೂಂಡಾಗಳು ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸ ಮಾಡಿ ಹಿಂಸಾಚಾರ ನಡೆಸಿದ್ದರು ಎಂದು ಆರೋಪಿಸಿತ್ತು.
ಅಮಿತ್ ಶಾ ರೋಡ್ ಶೋ ವೇಳೆ ಕೋಲ್ಕತ್ತಾದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ಕೋಲ್ಕತ್ತಾದಲ್ಲಿ ನಡೆದ ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಬಿಜೆಪಿ ಗೂಂಡಾಗಳು ಧ್ವಂಸ ಮಾಡಿರುವುದಕ್ಕೆ ನಮ್ಮ ಬಳಿ ವಿಡಿಯೋ ಸಾಕ್ಷಿ ಇದೆ. ಇದನ್ನು ಚುನಾವಣಾ ಆಯೋಗಕ್ಕೆ ನೀಡುತ್ತೇವೆ ಎಂದು ಟಿಎಂಸಿ ಮುಖಂಡ ಡೇರೆಕ್ ಒ ಬ್ರೇನ್ ಹೇಳಿದ್ದರು.
ಹಿಂಸಾಚಾರಕ್ಕೆ ಬಿಜೆಪಿ ಗೂಂಡಾಗಳೇ ಕಾರಣವಾಗಿದ್ದು, ನಮ್ಮ ವಿರುದ್ಧ ಆರೋಪ ಮಾಡಿರುವ ಅಮಿತ್ ಶಾ ಸುಳ್ಳುಗಾರ ಎಂದು ಇದರಿಂದ ತಿಳಿಯುತ್ತದೆ ಎಂದೇ ಡೇರೆಕ್ ಹೇಳಿದ್ದಾರೆ.
ಇದೇ ವೇಳೆ ವಿಡಿಯೋ ಮತ್ತು ವಾಟ್ಸ್ ಆ್ಯಪ್ ಮೆಸೇಜ್ ತೋರಿಸಿದ್ದು ಈ ಸಂದೇಶದಲ್ಲಿ ಟಿಎಂಸಿ ಮತ್ತು ಪೊಲೀಸರ ವಿರುದ್ದ ಹೋರಾಡಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಅಮಿತ್ ಶಾ ಅವರ ರೋಡ್ ಶೋಗೆ ಬರುವಂತೆ ಕಾರ್ಯಕರ್ತರಿಗೆ ಸಂದೇಶ ರವಾನಿಸಲಾಗಿತ್ತು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com