ಗೋಡ್ಸೆಯ ಸಮರ್ಥಿಸಿಕೊಂಡ ಪ್ರಗ್ಯಾ ಠಾಕೂರ್ ರನ್ನು ಬಿಜೆಪಿಯಿಂದ ವಜಾಗೊಳಿಸಿ: ನಿತೀಶ್ ಕುಮಾರ್

ಪ್ರಗ್ಯಾ ಠಾಕೂರ್ ನಾಥೂರಾಮ್ ಗೋಡ್ಸೆ ಪರ ವಕಾಲತ್ತು ವಹಿಸಿದ್ದು ಆಕ್ಷೇಪಾರ್ಹ ಅಪರಾಧ. ಆಕೆಯನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ

Published: 19th May 2019 12:00 PM  |   Last Updated: 19th May 2019 11:13 AM   |  A+A-


Nitish Kumar

ನಿತೀಶ್ ಕುಮಾರ್

Posted By : RHN RHN
Source : The New Indian Express
ಪಟ್ಣಾ: ಪ್ರಗ್ಯಾ ಠಾಕೂರ್ ನಾಥೂರಾಮ್ ಗೋಡ್ಸೆ ಪರ ವಕಾಲತ್ತು ವಹಿಸಿದ್ದು ಆಕ್ಷೇಪಾರ್ಹ ಅಪರಾಧ. ಆಕೆಯನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.ಮಾದ್ಯಮದವರು ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿಹಾರ ಮುಖ್ಯಂತ್ರಿ ಈ ಅಭಿಪ್ರಾಯ ಕೊಟ್ಟಿದ್ದಾರೆ. 

ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥರಾದ ನಿತೀಶ್ ಕುಮಾರ್ ತಮ್ಮ ಪುತ್ರ ನಿಶಾಂತ್ ಜತೆ ಸೇರಿ ಪಟ್ನಾ ಸಾಹೇಬ್ ಲೋಕಸಭಾ ಕ್ಷೇತ್ರದ ದಿಘಾ ಅಸೆಂಬ್ಲಿ ವ್ಯಾಪ್ತಿಯ ರಾಜ್ ಭವನ್ ವಸತಿ ಪ್ರದೇಶದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದೇ ಮೊದಲ ಬಾರಿಗೆ ನಿತೀಶ್ ಕುಮಾರ್ ಪಟ್ನಾದಲ್ಲಿ ಪುತ್ರನೊಡನೆ ಮತ ಚಲಾಯಿಸಿದ್ದು 2014ರವರೆಗೂ ಅವರು ತಮ್ಮ ಹುಟ್ಟೂರಾದ ಭಕತಿಯಾರ್ ಪುರ್ ನಲ್ಲಿಯೇ ಮತದಾನ ಮಾಡುತ್ತಿದ್ದರು.

ಇಂದು ಅವರು ಮಧ್ಯ ವಿದ್ಯಾಲಯದ 326 ಸಂಖ್ಯೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ಮತದಾನದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಚುನಾವಣೆ ಅವಧಿ ಸುದೀರ್ಘವಾಗಿರಬಾರದು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಜನತೆ ದೇಶದ ಭವಿಷ್ಯವನ್ನು ಬುದ್ದಿವಂತಿಕೆಯಿಂದ ತೀರ್ಮಾನಿಸಲಿದ್ದಾರೆ ಎಂದೂ ಹೇಳಿದ್ದಾರೆ.

ಎರಡು ಹಂತಗಳ ನಡುವೆ ದೊಡ್ಡ ಅಂತರವಿರುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟ ಬಿಹಾರ ಸಿಎಂ ಮುಂದಿನ ದಿನದಲ್ಲಿ ಈ ರೀತಿಯಾಗದಂತೆ ಗಮನಿಸಬೇಕು. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಎಲ್ಲಾ ಪಕ್ಷಗಳೂ ಒಟ್ಟಾಗಿ ಮನವಿ ಪತ್ರ ಸಲ್ಲಿಸಲು ಕರೆ ನೀಡಿದ್ದಾರೆ. ,ಅತದಾರರ ಅನುಕೂಲಕ್ಕಾಗಿ ಚುನಾವಣೆಯನ್ನು ಶೀಘ್ರವೇ ಮುಗಿಸಬೇಕು ಎಂದು ಅವರು ಹೇಳಿದರು.

ಇನ್ನೊಂದೆಡೆ ಬಿಜೆಪಿ ನಾಯಕ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸಹ ರಾಜ್ಯದಲ್ಲಿನ ಎರಡು ಹಂತದ ಚುನಾವಣೆ ನಡುವೆ ಕಡಿಮೆ ಅಂತರವಿರಬೇಕು ಎಂದು ಸಲಹೆ ನಿಡಿದ್ದಾರೆ."ನಿಜ ಹೇಳಬೇಕೆಂದರೆ  ಬಿಹಾರ ಬಿಜೆಪಿ ಸಹ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ರಾಜ್ಯದಲ್ಲಿ ನಾಲ್ಕು ಹಂತಗಳ ಮತದಾನಕ್ಕೆ ಸೂಚಿಸಿದೆ. ಆದರೆ ಎಲ್ಲಾ ತೀರ್ಮಾನವನ್ನೂ ಭಾರತೀಯ ಚುನಾವಣಾ ಆಯೋಗ ತೆಗೆದುಕೊಳ್ಳಲಿದೆ." ಮೋದಿ ಹೇಳಿದ್ದಾರೆ.
Stay up to date on all the latest ದೇಶ news with The Kannadaprabha App. Download now
facebook twitter whatsapp