ಕೊಲ್ಕತ್ತಾದ ಮತಗಟ್ಟೆಯೊಂದರಲ್ಲಿ ಮರು ಮತದಾನಕ್ಕೆ ಆಯೋಗ ಆದೇಶ

ಉತ್ತರ ಕೊಲ್ಕತ್ತಾ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಇಂದು ಆದೇಶ ಹೊರಡಿಸಿದೆ.

Published: 21st May 2019 12:00 PM  |   Last Updated: 21st May 2019 11:43 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : PTI
ನವದೆಹಲಿ: ಉತ್ತರ ಕೊಲ್ಕತ್ತಾ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಇಂದು ಆದೇಶ ಹೊರಡಿಸಿದೆ.  

ಉತ್ತರ ಕೊಲ್ಕತ್ತಾದ ನಂಬರ್ 200 ಮತಗಟ್ಟೆಯಲ್ಲಿ ಮೇ 19 ರಂದು ನಡೆದ ಚುನಾವಣೆಯನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿದ್ದು, ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೂ ಮರು ಮತದಾನ ನಡೆಯಲಿದೆ ಎಂದು ತಿಳಿಸಿದೆ.

ಈ ಕ್ಷೇತ್ರದಿಂದ ಬಿಜೆಪಿಯ ರಾಹುಲ್ ಸಿನ್ಹಾ, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಹಾಗೂ ಸಿಪಿಐ (ಎಂ) ಪಕ್ಷದ ಕಾನ್ನಿನಿಕಾ ಬೊಸ್ ಘೋಷ್ ಸ್ಪರ್ಧಿಸಿದ್ದಾರೆ.

ಮೇ 19 ರಂದು ನಡೆದ ಚುನಾವಣೆಯ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿದ್ದ ಈ ಮತಗಟ್ಟೆಯಲ್ಲಿ  ಮರು ಮತದಾನ ನಡೆಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೊಳಗೊಂಡ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ವಜಾಗೊಳಿಸುವಂತೆಯೂ ಈ ಆಯೋಗ ಮನವಿ ಮಾಡಿತ್ತು.
Stay up to date on all the latest ದೇಶ news with The Kannadaprabha App. Download now
facebook twitter whatsapp