ಬಿಹಾರ ರೈಲು ಅವಘಡ: ಕಪ್ಲಿಂಗ್ ತುಂಡಾಗಿ ಪ್ರತ್ಯೇಕಗೊಂಡ ಬೋಗಿಗಳು

ದೆಹಲಿಯಿಂದ ಇಸ್ಲಾಮ್ ಪುರಕ್ಕೆ ರೈಲು ಸಂಚಾರಿಸುತ್ತಿತ್ತು. ಟ್ವಿನಿ ಗಂಜ್ ಹಾಗೂ ರಘುನಾಥಾಪುರ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Magadh Express splits into two near Bihars Buxar
ಬಿಹಾರದಲ್ಲಿ ಮಗಧ ಎಕ್ಸ್ ಪ್ರೆಸ್ ರೈಲು ಅವಘಡ
Updated on

ಪಾಟ್ನಾ: ಬಿಹಾರದಲ್ಲಿ ಮಗಧ ಎಕ್ಸ್ ಪ್ರೆಸ್ ರೈಲು ಅವಘಡ ಸಂಭವಿಸಿದ್ದು ಕಪ್ ಲಿಂಗ್ ತುಂಡಾದ ಪರಿಣಾಮ ಬೋಗಿಗಳು ಪ್ರತ್ಯೇಕಗೊಂಡಿರುವ ಘಟನೆ ಭಾನುವಾರ ನಡೆದಿದೆ.

ದೆಹಲಿಯಿಂದ ಇಸ್ಲಾಮ್ ಪುರಕ್ಕೆ ರೈಲು ಸಂಚಾರಿಸುತ್ತಿತ್ತು. ಟ್ವಿನಿ ಗಂಜ್ ಹಾಗೂ ರಘುನಾಥಾಪುರ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಕೋಚ್ ನಂ. S-7 ಇಂಜಿನ್ ನಿಂದ 13ನೇ ಬೋಗಿ, s-16 14 ನೇ ಬೋಗಿಗಳು ಪ್ರತೇಕಗೊಂಡಿವೆ ಎಂದು ಹೇಳಿದ್ದಾರೆ.

Magadh Express splits into two near Bihars Buxar
ಉಪನಗರ ರೈಲು ಯೋಜನೆ: K-RIDE ಗೆ ಹೆಚ್ಚಿನ ತಾಂತ್ರಿಕ ಸಾಮರ್ಥ್ಯದ ಅಗತ್ಯವಿದೆ- ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಘಟನೆ ನಡೆದ ಕೂಡಲೇ ಸ್ಥಳಕ್ಕೆ ತಾಂತ್ರಿಕ ತಂಡಗಳು ಆಗಮಿಸಿ ದುರಸ್ತಿ ಕಾಮಗಾರಿಯಲ್ಲಿ ನಿರತವಾಗಿವೆ ಎಂದು cpro ತಿಳಿಸಿದ್ದಾರೆ.

ಈ ಅವಘಡ ರೈಲ್ವೆ ಟ್ರಾಫಿಕ್ ಮೇಲೆ ಪರಿಣಾಮ ಉಂಟು ಮಾಡಿದ್ದು ರೈಲುಗಳ ಸಂಚಾರ ವ್ಯತ್ಯಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com