ಏ. 9 ರಿಂದ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಚುನಾವಣಾ ಪ್ರಚಾರ

ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶಗಳ ದಿನಾಂಕಗಳು ಅಂತಿಮಗೊಂಡಿವೆ.ಏಪ್ರಿಲ್ 9 ರಿಂದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ
ಆರ್. ಅಶೋಕ್ ಮತ್ತಿತರರು
ಆರ್. ಅಶೋಕ್ ಮತ್ತಿತರರು
Updated on: 

ಬೆಂಗಳೂರು:  ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶಗಳ ದಿನಾಂಕಗಳು ಅಂತಿಮಗೊಂಡಿವೆ.ಮಾಜಿ ಉಪಮುಖ್ಯಮಂತ್ರಿ  ಆರ್. ಅಶೋಕ್  ನರೇಂದ್ರ ಮೋದಿ ಅವರ ಸಮಾವೇಶದ ಕುರಿತು ಮಾಹಿತಿ ನೀಡಿದರು.

ಏಪ್ರಿಲ್ 9 ರಂದು ಚಿತ್ರದುರ್ಗ, ಮೈಸೂರು,  ಏಪ್ರಿಲ್, 12 ರಂದು ಗಂಗಾವತಿ, ಏಪ್ರಿಲ್, 13 ರಂದು ಬೆಂಗಳೂರು, ಏಪ್ರಿಲ್ 18 ರಂದು  ಚಿಕ್ಕೋಡಿ, ಬಾಗಲಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಏಪ್ರಿಲ್ 13 ರಂದು ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ, ಬೆಂಗಳೂರು, ಉತ್ತರ ಉತ್ತರ, ಕೇಂದ್ರ ಹಾಗೂ ಗ್ರಾಮಾತರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿ ಈಗಾಗಲೇ ಹುಬ್ಭಳ್ಳಿ ಹಾಗೂ ಕಲಬುರಗಿಯಲ್ಲಿ ಎರಡು ಸಮಾವೇಶಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ಅಧ್ಯಕ್ಷ  ಅಮಿತ್ ಶಾ ಕೂಡಾ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com