ತ್ರೇತಾಯುಗದಲ್ಲಿ ರಾವಣ, ದ್ವಾಪರದಲ್ಲಿ ದುರ್ಯೋದನ, ಕಲಿಯುಗದಲ್ಲಿ ಮೋದಿ: ಸಿ.ಎಂ ಇಬ್ರಾಹಿಂ

ಮಾಜಿ ಸಚಿವ ಸಿ ಎಂ ಇಬ್ರಾಹೀಂ ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ತೇತ್ರಾ ಯುಗದಲ್ಲಿ ರಾವಣ, ದ್ವಾಪರ ಯುಗದಲ್ಲಿ ದುರ್ಯೋಧನ, ಕಲಿಯುಗದಲ್ಲಿ ಈಗ ಮೋದಿ ಎಂದು ವಾಗ್ದಾಳಿ ನಡೆಸಿದ್ದಾರೆ
ಸಿಎಂ ಇಬ್ರಾಹೀಂ, ಪ್ರಧಾನಿ ಮೋದಿ
ಸಿಎಂ ಇಬ್ರಾಹೀಂ, ಪ್ರಧಾನಿ ಮೋದಿ

ಹಾಸನ: ಮಾಜಿ ಸಚಿವ ಸಿ ಎಂ ಇಬ್ರಾಹೀಂ ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ತೇತ್ರಾ ಯುಗದಲ್ಲಿ ರಾವಣ, ದ್ವಾಪರ ಯುಗದಲ್ಲಿ ದುರ್ಯೋಧನ, ಕಲಿಯುಗದಲ್ಲಿ ಈಗ ಮೋದಿ ಎನ್ನುವ ಮೂಲಕ ವಾಗ್ದಾಳಿ ನಡೆಸಿದ್ದು,  ಬಿಜೆಪಿ ಧರ್ಮವನ್ನು ವ್ಯಾಪಾರ ಹಾಗೂ ಮತಗಳ ಆಸ್ತ್ರವನ್ನಾಗಿ ಮಾಡಿಕೊಂಡಿದೆ ಎಂದಿದ್ದಾರೆ.

ಮೋದಿ ಐವತ್ತಾರು ಇಂಚಿನ ಎದೆ  ನನ್ನದು ಅಂತಾರೆ, ಆದ್ರೆ, ಅದರಲ್ಲಿ ದಯೆಯೇ ಇಲ್ಲಾ, ರಾವಣ, ದುರ್ಯೋದನ ಮಾಡಿದ ಕೆಲಸವನ್ನೇ ಮೋದಿ ಮಾಡ್ತಾ ಇದ್ದಾರೆ. ನಾನು ಬಿಜೆಪಿ ನಾಯಕರನ್ನು ಕೇಳುತ್ತೇನೆ  ಮೋದಿ ದೇಶಕ್ಕೆ ಮಾಡಿರುವ ಒಂದು ಒಳ್ಳೆಯ ಕೆಲಸ ತೋರಿಸಿ ನೋಡೋಣ ಎಂದು ಇಬ್ರಾಹೀಂ ಸವಾಲು ಹಾಕಿದರು.

ಈ ಹಿಂದೆ ಇಂದಿರಾಗಾಂಧಿ, ದೇವೇಗೌಡ ಸೇರಿ ಹಲವರು ಪ್ರಧಾನಿಗಳಾಗಿದ್ದರು. ಅವರನ್ನು ಎಲ್ಲರೂ ಟೀಕಿಸುತ್ತಿದ್ದರು.ಆದರೆ, ಇವತ್ತು ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದವರನ್ನ ರಾಷ್ಟ್ರದ್ರೋಹಿಗಳು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ ಎಂಬಂತಾಗಿದೆ ಎಂದು  ಸಿಎಂ ಇಬ್ರಾಹೀಂ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com