ಪ್ರಚಾರದ ವೇಳೆ ಕಲ್ಲು ಹೊಡೆಸಿಕೊಂಡು ಅನುಕಂಪ ಗಿಟ್ಟಿಸುವ ತಂತ್ರ ರೂಪಿಸಿದ್ದಾರೆಂದು ತಮ್ಮ ಬಗ್ಗೆ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಆರೋಪಕ್ಕೆ ಉತ್ತರ ಕೊಡಬೇಕಾಗಿಲ್ಲ ಎನ್ನಿಸುತ್ತಿದೆ. ಹೋದೆಡೆಯಲೆಲ್ಲಾ ಜನ ಪ್ರೀತಿಯಿಂದ ಸ್ವಾಗತ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಲ್ಲು ತೂರಾಟ ಮಾಡುವ, ದಬ್ಬಾಳಿಕೆಯ ಹಾಗೂ ಅಹಂಕಾರದ ಮಾತುಗಳು ಜೆಡಿಎಸ್ ಅವರ ಕಡೆಯಿಂದಲೇ ಬರುತ್ತಿವೆ ಎಂದರು.