ಅಭ್ಯರ್ಥಿಯ ಮೇಲೆ ಉಮೇಶ್ ಜಾಧವ್ ಬೆಂಬಲಿಗರಿಂದ ಹಲ್ಲೆ, ಪ್ರಚಾರಕ್ಕೆ ಅಡ್ಡಿ; ಕಲಬುರಗಿ ಕಾಂಗ್ರೆಸ್ ಆರೋಪ

ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಉಮೇಶ್ ಜಾಧವ್ ಅವರ ಬೆಂಬಲಿಗರು ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಲಬುರಗಿ: ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಉಮೇಶ್ ಜಾಧವ್ ಅವರ ಬೆಂಬಲಿಗರು ಮತ್ತು ಆರ್ ಎಸ್ಎಸ್ ಕಾರ್ಯಕರ್ತರು ಜಿಲ್ಲೆಯಲ್ಲಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದು ತಮ್ಮ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವರುಗಳು ಮತ್ತು ಕಾಂಗ್ರೆಸ್ ನಾಯಕರಾದ ಪರಮೇಶ್ವರ ನಾಯ್ಕ, ಪ್ರಿಯಾಂಕ್ ಖರ್ಗೆ, ಬಂಜಾರ ಸಮುದಾಯದ ನಾಯಕರಾದ ಸುಭಾಷ್ ರಾಥೋಡ್ ಆರೋಪಿಸಿದ್ದಾರೆ.
ಅವರು ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಂಜಾರ ಸಮುದಾಯದ ಮುಖಂಡ ಸುಭಾಷ್ ರಾಥೋಡ್ ನಿನ್ನೆ ಚಿತ್ತಾಪುರ ತಾಲ್ಲೂಕಿನ ತಾಂಡಾದಲ್ಲಿ ಪರಮೇಶ್ವರ ನಾಯಕ್ ಅವರ ಜೊತೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮುಗಿಸಿಕೊಂಡು ಬರುತ್ತಿರುವಾಗ ಉಮೇಶ್ ಜಾಧವ್ ಅವರ ಅಭಿಮಾನಿಗಳು ಸಚಿವರ ಕಾರನ್ನು ತಡೆದು ನಿಲ್ಲಿಸಿ ಕಾರಿನಿಂದ ನನ್ನನ್ನು ಹೊರಹಾಕುವಂತೆ ಕೂಗಿದರು. ಇಲ್ಲದಿದ್ದರೆ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಅಂದರೆ ನನ್ನನ್ನು ಕೊಲೆ ಮಾಡಲು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದರು.
ಜಾಧವ್ ಅವರ ಅಭಿಮಾನಿಗಳು ತಮ್ಮ ಮೇಲೆ ಹಲ್ಲೆ ನಡೆಸಿ ಶರ್ಟ್ ನ್ನು ಹರಿದುಹಾಕಿದ್ದಾರೆ ಎಂದು ಕೂಡ ಸುಭಾಷ್ ರಾಥೋಡ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com