• Tag results for ಕಲಬುರಗಿ

ಕಲಬುರಗಿ: ಶಂಕಿತ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ; 2 ಖಾಸಗಿ ಆಸ್ಪತ್ರೆಗಳು ಬಂದ್

ಕೊರೋನಾ ಸೋಂಕು ಇರುವ ವ್ಯಕ್ತಿಗಳ ಬಗ್ಗೆ ಖಾಸಗಿ ಆಸ್ಪತ್ರೆ ಸರಿಯಾದ ಸಮಯಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.

published on : 9th April 2020

ಕಲಬುರಗಿ: ರೈತ ಚಂದ್ರಕಾಂತ್ ಬಿರಾದಾರ್ ನಿವಾಸಕ್ಕೆ ಕೃಷಿ ಸಚಿವ ಭೇಟಿ, 5 ಲಕ್ಷ ರೂ. ಪರಿಹಾರ ವಿತರಣೆ

ಸಾವು ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಬದುಕಿ ಸಾಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರೇರಣಾದಾಯಕ ಮಾತುಗಳನ್ನಾಡಿದ್ದಾರೆ.

published on : 7th April 2020

ಕೋರೋನಾ ವೈರಸ್: ಗ್ರಾಮೀಣ ಭಾಗದ ರೋಗಿಳಿಗೆ ಚಿಕಿತ್ಸೆ ಒದಗಿಸಲು ರೈಲ್ವೆ ಸಿದ್ಧ: ಸುರೇಶ್ ಅಂಗಡಿ

ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಾಗೂ ರೈಲು ಸಂಪರ್ಕವಿರುವ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಒದಗಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.

published on : 5th April 2020

ನಿಜಾಮುದ್ದೀನ್ ಮರ್ಕಜ್ ಮಸೀದಿಗೆ ತೆರಳಿದ್ದ ಕಲಬುರಗಿಯ 26 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕಿಲ್ಲ: ಜಿಲ್ಲಾಧಿಕಾರಿ ಶರತ್

ಇತ್ತೀಚೆಗೆ ದೆಹಲಿಯ ನಿಜಾಮುದ್ದೀನ್‍ನಲ್ಲಿ ಜರುಗಿದ ತಬ್ಲೀಗ್ ಜಮಾತ್ ನ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ್ದ 26 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಹೇಳಿದ್ದಾರೆ.

published on : 3rd April 2020

ಕಲಬುರಗಿ: ಲಾಕ್‌ಡೌನ್ ನಿಂದ ಹಣ್ಣು ಮಾರಾಟ ಮಾಡಲಾಗದೆ ರೈತ ಆತ್ಮಹತ್ಯೆ

ಕೊರೊನಾ ಸೋಂಕು ತಡೆಗಟ್ಟಲು ದೇಶವನ್ನೇ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಹಣ್ಣು ಸರಬರಾಜು ಮಾಡಲಾಗದೆ ರೈತನೋರ್ವ ಆತ್ಮಹತ್ಯೆ ಗೆ ಶರಣಾಗಿದ್ದಾರೆ.

published on : 31st March 2020

ಕಲಬುರಗಿ: ಮೃತ ವೃದ್ಧನ ಮಗಳು ಕೊರೋನಾ ವೈರಸ್ ನಿಂದ ಗುಣಮುಖ, ವೈದ್ಯಕೀಯ ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ವರದಿ!

ರಾಜ್ಯಾದ್ಯಂತ ತೀವ್ರ ಭೀತಿಗೆ ಕಾರಣವಾಗಿದ್ದ ಕಲಬುರಗಿ ಕೊರೋನಾ ವೈರಸ್ ಪ್ರಕರಣಕ್ಕೆ ಸಂಬಂಧಿಸದಂತೆ ಸಕಾರಾತ್ಮಕ ಸುದ್ದಿಯೊಂದು ಹೊರಬಿದ್ದಿದ್ದು, ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮಗಳು ಇದೀಗ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂದು  ತಿಳಿದುಬಂದಿದೆ.

published on : 30th March 2020

ಕಲಬುರಗಿ: ನಿರ್ಬಂಧದ ನಡುವೆಯೂ ಹೊರಬಂದ ಯುವಕರಿಗೆ ಖಾಕಿ ಪಾಠ, ವಿಡಿಯೋ ವೈರಲ್!

ದೇಶವನ್ನೇ ಲಾಕ್ ಡೌನ್ ಮಾಡಿದ್ದರೂ ಇದನ್ನು ಪಾಲಿಸದೆ ಹೊರಬಂದವರಿಗೆ ಕರ್ನಾಟಕ ಪೊಲೀಸರು ರಸ್ತೆ ಗುಡಿಸುವ ಶಿಕ್ಷೆ ನೀಡಿದ್ದಾರೆ.

published on : 26th March 2020

ಕಲಬುರಗಿ: ಮಾಸ್ಕ್ ,ಸ್ಯಾನಿಟೈಸರ್ ಗಳು ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲ; ಜಿಲ್ಲಾಧಿಕಾರಿ ಎಚ್ಚರಿಕೆ

ಕೊರೋನಾ ಸೊಂಕಿನಿಂದ‌ ಪಾರಾಗಲು ಜನರು ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳ‌ ಮೊರೆ ಹೋಗುತ್ತಿದ್ದು, ಔಷಧಿ ವ್ಯಾಪಾರಿಗಳು ಮತ್ತು ಮಾರಾಟಗಾರರು ಯಾವುದೇ ಕಾರಣಕ್ಕೂ ನಿಗದಿತ ಎಂ.ಆರ್.ಪಿ.ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಎಂದು  ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.

published on : 26th March 2020

ಕೊರೋನಾ ವೈರಸ್: ಬಯೋಮೆಟ್ರಿಕ್ ಬದಲು ಮೊಬೈಲ್ ಓ.ಟಿ.ಪಿ ಮೂಲಕ ಪಡಿತರ ವಿತರಣೆ

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಬಯೋ ಮೆಟ್ರಿಕ್ ಬದಲು ಮೊಬೈಲ್ ಓಟಿಪಿ ಆಧಾರದ ಮೇಲೆ ಪಡಿತರ ವಿತರಿಸಲು ತೀರ್ಮಾನಿಸಲಾಗಿದೆ.

published on : 26th March 2020

ಕಲಬುರಗಿಯಲ್ಲಿ ಮತ್ತೆ ಮೂರು ದಿನ 144 ನಿಷೇಧಾಜ್ಞೆ: ಜಿಲ್ಲಾಧಿಕಾರಿ  ಶರತ್. ಬಿ

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ವೃದ್ಧರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಇದೇ ತಿಂಗಳ 19ರಂದು ರಾತ್ರಿಯಿಂದ ಭಾನುವಾರ ರಾತ್ರಿ 8ಗಂಟೆವರೆಗೆ ಒಟ್ಟು ಮೂರು ದಿನಗಳ ಕಾಲ 144 ನಿಷೇಧಾಜ್ಞೆ ಹೇರಲಾಗಿತ್ತು ಎಂದು ಹೇಳಿದ್ದಾರೆ. 

published on : 22nd March 2020

ಹೊರದೇಶದಿಂದ ಬಂದು ಮಾಹಿತಿ ನೀಡದಿದ್ದರೆ ಕಾನೂನು ಕ್ರಮ: ಡಿಸಿ ಶರತ್ 

ಎಲ್ಲೆಡೆ‌ ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಹೊರದೇಶದಿಂದ ಬಂದವರು ತಪಾಸಣೆಗೆ ಒಳಪಡದೆ‌ ಮನೆಯಲ್ಲಿ ಗೌಪ್ಯವಾಗಿದ್ದರೇ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್.ಬಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

published on : 19th March 2020

ಕೊರೋನಾ ಸೋಂಕಿತ ವೈದ್ಯ ಸಾವು ವದಂತಿ: ಸ್ಪಷ್ಟನೆ ನೀಡಿದ ಕಲಬುರಗಿ ವೈದ್ಯ; ಸಂಪರ್ಕದಲ್ಲಿದ್ದವರ ಮೇಲೆ ತೀವ್ರ ನಿಗಾ!

ಕಲಬುರಗಿಯಲ್ಲಿ ಕೊರೋನಾದಿಂದ ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದೆ. 

published on : 18th March 2020

ಕೊರೋನಾ ವೈರಸ್ ಎಫೆಕ್ಟ್: ವುಹಾನ್ ರೀತಿ ಕಲಬುರಗಿಗೂ ದಿಗ್ಭಂಧನ!

ಮಹಾಮಾರಿ ಕೊರೋನಾಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. 

published on : 18th March 2020

ಕಲಬುರಗಿ: ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು

ಬಿಸಿಲು ನಗರಿ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ ತುತ್ತಾಗಿದ್ದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ಹತ್ತಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.  

published on : 17th March 2020

ಕೊರೋನಾ ವೈರಸ್: ಕಲಬುರಗಿಯಲ್ಲಿ ಮತ್ತೆ 4 ಶಂಕಿತರು, ಹೆಚ್ಚಿದ ಆತಂಕ

ಈಗಾಗಲೇ ಕೊರೋನಾ ಆತಂಕದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಿಂದ ಸೋಮವಾರ ಮತ್ತೆ ನಾಲ್ವರು ಶಂಕಿತ ಕೊರೋನಾ ಪೀಡಿತರ ಗಂಟಲು ದ್ರವದ ಮಾದರಿಯ್ನು ಬೆಂಗಳೂರು ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಕೊರೋನಾ ಸೋಂಕಿಗೆ ದೇಶದಲ್ಲೇ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಜಿಲ್ಲೆಯಲ್ಲಿ ಈಗ ಮತ್ತಷ್ಟು ಆತಂಕ ಹೆಚ್ಚಿದೆ. 

published on : 17th March 2020
1 2 3 4 5 6 >