ಗೆಜ್ಜಲಗೆರೆಯಲ್ಲಿ ಸುಮಲತಾ ಅಂಬರೀಶ್ ಬಗ್ಗೆ ಕುಮಾರಸ್ವಾಮಿ ನೀಡಿದ ಕುತಂತ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು , ತಮಗೆ ನಾಟಕ ಮಾಡಿ ಏನೂ ಆಗಬೇಕಾಗಿಲ್ಲ. ಏ.16 ರಂದು ಜೆಡಿಎಸ್ ನಾಯಕರೇ ಹಲ್ಲೆ ಮಾಡಲು ಯೋಜನೆ ರೂಪಿಸಿರಬಹುದು. ಏಕೆಂದರೆ ಅವರೇ ಡೇಟ್, ಟೈಮ್ ಎಲ್ಲವನ್ನು ಹೇಳಿದ್ದಾರೆ. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಅವರ ಕೈಯಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.