ಸಾರ್ವತ್ರಿಕ ಚುನಾವಣೆ: ರಾಜ್ಯದ ಮಠಗಳ ಮೌನದ ಹಿಂದಿದೆ ಮಹಾ ಶಕ್ತಿ

ಈ ಮಹಾಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಮಠಮಾನ್ಯಗಳು ರಾಜಕೀಯ ವಲಯದಲ್ಲಿ ತಮ್ಮದೇ ಪ್ರಭಾವ ಬೀರುತ್ತಿವೆ. ಜಾತಿ ಅಥವಾ ಸಮುದಾಯದ ಬೆಂಬಲ ಗಳಿಸಲು ನಾನಾ ರಾಜಕೀಯ ಮುಖಂಡರು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಈ ಮಹಾಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಮಠಮಾನ್ಯಗಳು ರಾಜಕೀಯ ವಲಯದಲ್ಲಿ ತಮ್ಮದೇ ಪ್ರಭಾವ ಬೀರುತ್ತಿವೆ.  ಜಾತಿ ಅಥವಾ ಸಮುದಾಯದ ಬೆಂಬಲ ಗಳಿಸಲು ನಾನಾ ರಾಜಕೀಯ ಮುಖಂಡರು ಣಾನಾ ಮಠಗಳಿಗೆ ಭೇಟಿ ಕೊಡುವುದು ಸಾಮಾನ್ಯವಿದೆ. ಆದರೆ ಎಲ್ಲಾ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅನೇಕಮಠಾಧಿಪತ್ರಿಗಳ ಆಶೀರ್ವಾದ ಪಡೆಯಲು ಬಯಸುತ್ತಿದ್ದು ಮಠಗಳಿಗೆ ಆಗಮಿಸುತ್ತಾರೆ. ಹೀಗೆ ಮಠ ಹಾಗೂ ರಾಝಕೀಯದ ನಡುವೆ ರಾಜ್ಯದಲ್ಲಿ ಒಂದು ಮೂಕ, ತೆರೆಮರೆಯ ಸಂಬಂಧವಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಭಿನ್ನವಾಗಿ, ಅಮಿತ್ ಶಾ ಹಾಗೂ ರಾಹುಲ್ ಗಾಂಧಿ  ತಮ್ಮ ದೀರ್ಘ ಪ್ರಚಾರದ  ಜಂಜಡದ ನಡುವೆಯೇ ಒಂದಲ್ಲಾ ಒಂದು ಮಠಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಈ ಬಾರಿ ಅಂತಹಾ ಯಾವುದೇ ಮಠಗಳ ಭೇಟಿ ಅಥವಾ ಆಶೀರ್ವಾದ ಪಡೆಯುವ ಕ್ರಿಯೆ ಇದುವರೆಗೆ ಎಲ್ಲಿಯೂ ಕಾಣಿಸಿಲ್ಲ.ಕೆಲವು ಕೇಂದ್ರ ಮತ್ತು ರಾಜ್ಯ ನಾಯಕರು, ದಕ್ಷಿಣ ಕರ್ನಾಟಕದ ಮ್ರಾಜಕೀಯ ಮುಖಂಡರು ಶೃಂಗೇರಿ, ಪೇಜಾವರ, ತುಮಕೂರು, ಸುತ್ತೂರು, ಆದಿಚುಂಚುನಗಿರಿ, ಮುರುಗರಾಜೇಂದ್ರ ಮತ್ತು ಇತರೆ ಮಠಾಧಿಪತಿಗಳ ಆಶೀರ್ವಾದ ಕೋರಿದ್ದಾರೆ. ಆದರೆ ಇಲ್ಲೆಲ್ಲಾ ಯಾವುದೇ ಆಡಂಬರ, ಪ್ರಚಾರಗಳು ಕಾಣೆಸಿಲ್ಲ.
ಇತ್ತೀಚೆಗೆ, ಉಡುಪಿ ಜಿಲ್ಲೆಯ ಶ್ರೀಕೃಷ್ಣ ಮಠಕ್ಕೆ ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ನಾಯಕರೊಡನೆ  ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಭೇಟಿ ನಿಡಿದ್ದರು. ಚುನಾವಣೆ ವೇಳೆಯಲ್ಲಿ ಹಲವು ನಾಯಕರನ್ನು ಭೇಟಿಯಾಗಿರುವ ಮಠದ ಸ್ವಾಮೀಜಿಗಳು ಸಹ ಯಾವುದೇ  ಪಕ್ಷಕ್ಕೆ ತಮ್ಮ ಆದ್ಯತೆಯನ್ನು ಎಂದಿಗೂ ಬಹಿರಂಗವಾಗಿ ಪ್ರದರ್ಶಿಸಲಿಲ್ಲ.ಮಾಜಿ ಪ್ರಧಾನ ಮಂತ್ರಿ ದೇವೇಗೌಡ ನಿರಂತರವಾಗಿ ಶೃಂಗೇರಿ ಮಠದ ಆಶೀರ್ವಾದವನ್ನು ಬಯಸಿದರೆ, ಅವರ ಮಗ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ಮತ್ತು ತಮಿಳುನಾಡಿನದೇವಾಲಯಗಳು ಮತ್ತು ಮಠಗಳನ್ನು ಸಂದರ್ಶಿಸಿದ್ದಾರೆ.. ಅವರು ಆದಿಚುಂಚುಗಿರಿ ಮಠಕ್ಕೆ ಹೆಚ್ಚು ತೆರಳುತ್ತಾರೆ ಎಂದು ಮೂಲಗಳು ಹೇಳಿದೆ.
ಮಠಗಳ ಆಶೀರ್ವಾದ ಪಡೆಯಲು ಕೆಲವು ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ಮುಂದೆ ಬಿಟ್ಟಿದ್ದರೂ ಇದು ಮುಕ್ತ ವ್ಯ್ವಹಾರವಾಗಿಲ್ಲ.ಆದಾಗ್ಯೂ, ಕರ್ನಾಟಕದ ಯಾವುದೇ ಚುನಾವಣೆ ಸಮಯದಲ್ಲಿ ನಡೆಯುವ 'ನಾಟಕ' ಇದೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ ಧಾರ್ಮಿಕ ಮಠಗಳ ಪ್ರಭಾವದಿಂದ ಮುಕ್ತರಾಗಬಹುದು. , ವಿಶೇಷವಾಗಿ ಲಿಂಗಾಯತ ಪಂಗಡಕ್ಕೆ ಅವರ ಮಠಕ್ಕೆ ವಿಧೇಯತೆ  ತೋರುವ ಮೂಲಕ ಲಿಂಗಾಯತರ ಮತ ಗಳಿಕೆ ಸುಲಭವಾಗಲಿದೆ, ಅಂತೆಯೇ ಕುರುಬ ಹಾಗೂ ಇತರೆ ಮಠಗಳ ವಿಷಯದಲ್ಲಿ ಇದು ಸತ್ಯ.
ರಾಮಕೃಷ್ಣ ಹೆಗ್ಡೆ ಅವರ ಸಮಯದಿಂದ ಧಾರ್ಮಿಕ ಸಂಸ್ಥೆಗಳು ರಾಜಕೀಯದೊಡನೆ ಸಂಬಂಧ ಬೆಳೆಸಿಕೊಳ್ಳುವುದು ವ್ಯಾಪಕವಾಗಿದೆ. ಇದಲ್ಲದೆ, ಉನ್ನತ ಜಾತಿಗಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಮಠಗಳು ಮೌನವಾಗಿ ಸ್ಥಳೀಯ ನಾಯಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ.
"ಚುನಾವಣೆ ಘೋಷಿಸಲ್ಪಟ್ಟ ನಂತರ ಪಕ್ಷದ ಮುಖಂಡರು ಮತ್ತು ಸ್ವಾಮಿಗಳ ನಡುವೆ ಎಲ್ಲಾ ಸಭೆಗಳು  ಪ್ರಾರಂಬವಾಗಿದೆ.980 ರ ದಶಕದ ಆರಂಭದಿಂದಲೂ ಲಿಂಗಾಯತ ಮಠಗಳು ಜಾಗೃತ ಕೇಂದ್ರಗಳಾಗಿಹೊರಹೊಮ್ಮಿದೆ. ಇಲ್ಲಿ ಯಾವುದೇ ಅಸಹಜತೆ ಬಹಿರಂಗವಾಇಲ್ಲವಾದರೂ ನಿರ್ದಿಷ್ಟ ಪಕ್ಷಗಳ ಕಡೆಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಜೆಡಿಎಸ್ ಒಕ್ಕಲಿಗರು, ಬಿಜೆಪಿ ಲಿಂಗಾಯತ, ಕಾಂಗ್ರೆಸ್ ಜತೆ ಕುರುಬ  ಹಾಗೂ ಮತ್ತಿತರೆ ಸಮುದಾಯಗಳು ಗುರುತಿಸಿಕೊಂಡಿದೆ.ವಾಸ್ತವವಾಗಿ, ಕೆಲವು ರಾಜಕೀಯ ನಾಯಕರು ರಾಜಕೀಯ-ಧಾರ್ಮಿಕ ಸಂಬಂಧವನ್ನು ಬಹಿರಂಗವಾಗಿ ಪ್ರೋತ್ಸಾಹಿಸಿದ್ದಾರೆ. " ರಾಜಕೀಯ ವಿಶ್ಲೇಷಕ ರತ್ನಾಕರ್ ಜೋಶಿ ಹೇಳಿದ
ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಒಗ್ಗಟ್ಟನ್ನು ಹೊಂದಿರದಿದ್ದಾಗ ಹಿಂದೂ ಮತಗಳ ಏಕೀಕರಣದಲ್ಲಿ ಮಠಗಳು ಒಂದು ಪಾತ್ರವನ್ನು ವಹಿಸುವುದು ಅಗತ್ಯವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಉದ್ದೇಶಿಸದ ನಾಯಕರ್ತೊಬ್ಬರು ಹೇಳಿದ್ದಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಅವರು ಏಕೀಕೃತವಾಗಿ ಅವರ ಧಾರ್ಮಿಕ ಮುಖಂಡರ ಸೂಚನೆ ಅನುಸರಿಸುತ್ತಾರೆ.ಆದರೆ ನಮ್ಮಲ್ಲಿ ಹೆಚ್ಚಿನ ಮತಗಳು ವಿಂಗಡನೆಯಾಗುತ್ತದೆ. ಆ ಕಾರಣಕ್ಕೆ ಮಠ, ಪೀಠಗಳು ಮುಖ್ಯ ಪಾತ್ರ ವಹಿಸಿದರೆ ಈ ಮತ ಏಕೀಕರಣ ಸಾಧ್ಯವಿದೆ.ಎಂದು ಅವರು ಹೇಳಿದ್ದಾರೆ.
ಮಠಗಳು 8-10 ರಷ್ಟು ಜಾತಿ ಮತಗಳನ್ನು ಪ್ರಭಾವಿಸಬಲ್ಲವು ಎಂದು ರಾಜಕೀಯ ವಿಶ್ಲೇಷಕ ಮೋಹನ್ ರಾಮ್ ಹೇಳಿದ್ದಾರೆ. "ಈ ಬಾರಿ ಮುಖಂಡರಿಂದ ಸಾರ್ವಜನಿಕ ಪ್ರದರ್ಶನವಿಲ್ಲ. ಆದಾಗ್ಯೂ, 8-9 ಸೀಟುಗಳು ಪ್ರಮುಖ ಲಿಂಗಾಯತ  ಮತ ಹಂಚಿಕೆ ಮತ್ತು 6-7 ಸೀಟುಗಳು ಒಕ್ಕಲಿಗ ಮತ ಹಂಚಿಕೆ ಮತ್ತು ಕುರುಬ ಪ್ರಾವ್ಬಲ್ಯದ  ಮೂರು ಸೀಟುಗಳನ್ನು ಹೊಂದಿದ್ದು, ಮಠಗಳ ಪ್ರಭಾವವು ಶೇಕಡಾ 10 ಕ್ಕಿಂತಲೂ ಹೆಚ್ಚಾಗುವುದಿಲ್ಲ. ಪ್ರತಿ ರಾಜಕೀಯ ಪಕ್ಷವು ಪರಿಸ್ಥಿತಿಯ ಲಾಭ ಪಡೆಯಲು ಬಯಸುತ್ತದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com