ಮತದಾರರ ಕಟ್ಟಿಹಾಕಲು ಮಂಡ್ಯದಲ್ಲಿ ಮಂಜುನಾಥ ಸ್ವಾಮಿ ಮೇಲೆ ಆಣೆ ಪ್ರಮಾಣದ ರಾಜಕೀಯ? ಫೋಟೋ ವೈರಲ್
ಹಾಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಚರ್ತೆಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಆಣೆ ಪ್ರಮಾಣದ ರಾಜಕೀಯ ವೈರಲ್ ಆಗಿದ್ದು, ಮತದಾರರಿಗೆ ಹಣದ ಆಮಿಷವಲ್ಲದೇ ಆಣೆ ಪ್ರಮಾಣದ ಮೂಲಕ ಮತದಾರರನ್ನು ಕಟ್ಟಿಹಾಕುವ ಪ್ರಯತ್ನ ಕೂಡ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಚರ್ತೆಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಆಣೆ ಪ್ರಮಾಣದ ರಾಜಕೀಯ ವೈರಲ್ ಆಗಿದ್ದು, ಮತದಾರರಿಗೆ ಹಣದ ಆಮಿಷವಲ್ಲದೇ ಆಣೆ ಪ್ರಮಾಣದ ಮೂಲಕ ಮತದಾರರನ್ನು ಕಟ್ಟಿಹಾಕುವ ಪ್ರಯತ್ನ ಕೂಡ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ವಿಡಿಯೋ ವೈರಲ್ ಆಗುತ್ತಿದ್ದು. ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾದರಿ ಬ್ಯಾಲೆಟ್ ಪೇಪರ್ ಜತೆ ಮಂಜುನಾಥಸ್ವಾಮಿ ಫೋಟೋ ಜತೆಗೆ 1000 ರೂ. ಇಟ್ಟಿರುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಕೇವಲ ನಿಖಿಲ್ ಮಾತ್ರವಲ್ಲದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ, ಅಂಬರೀಶ್ ಭಾವಚಿತ್ರಕ್ಕೆ ಹೊಂದಿಕೊಂಡಂತೆ ಶ್ರೀ ಮಂಜುನಾಥಸ್ವಾಮಿ ಫೋಟೋ ಅಳವಡಿಸಿ 500 ರೂ. ಹಂಚುತ್ತಿರುವ ಫೋಟೋಗಳೂ ವೈರಲ್ ಆಗಿವೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಂತೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಫೇಸ್ ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಉದ್ದೇಶದಿಂದ ಈ ಫೋಟೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆಯೇ ಎನ್ನುವ ಪ್ರಶ್ನೆ ಕೂಡ ಉದ್ಭವವಾಗಿದೆ.