ಮಂಡ್ಯದಲ್ಲಿ ಸುಮಲತಾ-ಚೆಲುವರಾಯಸ್ವಾಮಿ ಚರ್ಚೆ: ಯುದ್ಧ ಮುಗಿದ ಬಳಿಕ ಹೊಸ ಲೆಕ್ಕಾಚಾರ

ಮಂಡ್ಯದಲ್ಲಿ ಲೋಕಸಭೆ ಮತದಾನ ಮುಗಿದಿದೆ ಆದರೆ ಚುನಾವಣೆ ಕಾವು ಮಾತ್ರ ಇನ್ನೂ ಆರಿಲ್ಲ. ಭಾನುವಾರ ಕಾಂಗ್ರೆಸ್ ಭಿನ್ನಮತೀಯ ನಾಯಕರಾದ ಚೆಲುವರಾಯ ಸ್ವಾಮಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ....
ಮಂಡ್ಯದಲ್ಲಿ ಸುಮಲತಾ-ಚೆಲುವರಾಯಸ್ವಾಮಿ ಚರ್ಚೆ
ಮಂಡ್ಯದಲ್ಲಿ ಸುಮಲತಾ-ಚೆಲುವರಾಯಸ್ವಾಮಿ ಚರ್ಚೆ
ಮಂಡ್ಯ: ಮಂಡ್ಯದಲ್ಲಿ ಲೋಕಸಭೆ ಮತದಾನ ಮುಗಿದಿದೆ ಆದರೆ ಚುನಾವಣೆ ಕಾವು ಮಾತ್ರ ಇನ್ನೂ ಆರಿಲ್ಲ. ಭಾನುವಾರ ಕಾಂಗ್ರೆಸ್ ಭಿನ್ನಮತೀಯ ನಾಯಕರಾದ ಚೆಲುವರಾಯ ಸ್ವಾಮಿ ಮತ್ತು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಚೆಲುವರಾಯ ಸ್ವಾಮಿ ಜತೆಗೆನಿನ ಚರ್ಚೆ ಬಗೆಗೆ ಸುಮಲತಾ ಹೆಚ್ಚು ಮಾತನಾಡಲು ನಿರಾಕರಿಸಿದ್ದಾರೆ. ಆದರೆ ಸ್ವಾಮಿ ತಾವು ಅಂಬರೀಶ್ ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಳ್ಳುವುದಕ್ಕಿದ್ದ ಅವಕಾಶವನ್ನು ಬಹಳ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅಲ್ಲದೆ ಸುಮಲತಾ ಅಂಬರಿಶ್ ಅವರ ಭೇಟಿ ಬಳಿಕ ಮಾತನಾಡಿದ ಚೆಲುವರಾಯ ಸ್ವಾಮಿ ತಾವು ಸುಮಲತಾ ಅವರಿಗೆ ಬೆಂಬಲವಾಗಿರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಸುಮಲತಾ "ನಾವೇನೂ ರಾಜಕೀಯದ ಕುರಿತು ಚರ್ಚೆ ನಡೆಸಿಲ್ಲ,ಚುನಾವಣೆ ಪ್ರಚಾರ ಕಾರ್ಯ ಹಾಗೂ ಇತರೆ ಒತ್ತಡಗಳಿಂಡ ನನಗೆ ಬಹಳ ಆಯಾಸವಾ ಇದ್ದು ನಾನು ವಿಶ್ರಾಂತಿ ಪಡೆದುಕೊಳ್ಳಲು ಅವರು ಸೂಚಿಸಿದ್ದಾರೆ" ಎಂದಷ್ಟೇ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧೆಗಿಳಿದಿರುವ ಸುಮಲತಾ ಅವರಿಗೆ  ಮೇ 23 ರವರೆಗೆ ಕಾಯಿರಿ ಎಂದು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರಿಗೆ ಬಿಜೆಪಿ ಬೇಷರತ್ ಬೆಂಬಲ ಸೂಚಿಸಿದೆ.
ಮದುವೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಮಲತಾ "ನಾನು ಎಕ್ಸಿಟ್ ಪೋಲ್ ಗಳ ಬಗೆಗೆ ಹೆಚ್ಚು ನಿರೀಕ್ಷೆ ಇರಿಸುವುದಿಲ್ಲ. ನಾನು ಅಂತಹ ಸಮೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇದು ಯಾವುದೇ ಫಲಿತಾಂಶವಾಗಲಿ, ಮೇ 23 ರವರೆಗೆ ನಾನು ಕಾಯುತ್ತೇನೆ. ಆದರೆ, ಯಾವುದೇ ಸಮೀಕ್ಷೆಗಾಗಿ ನಾನು ರಾಜಕೀಯ ಪ್ರಾರಂಭಿಸಿಲ್ಲ.  ಅಂತಹ ಭವಿಷ್ಯವಾಣಿಗಳ ಬಗ್ಗೆಯೂ ಯೋಚಿಸುವುದಿಲ್ಲ. ಆದರೆ ಜನರ ಬಗೆಗೆ ನನಗೆ ವಿಶ್ವಾಸವಿದೆ" ಹೇಳಿದ್ದಾರೆ.
ಇನ್ನೊಂದೆಡೆ ಮಾದ್ಯಮದವರೊಡನೆ ಮಾತನಾಡಿದ ಚೆಲುವರಾಯ ಸ್ವಾಮಿ , "ಜನತೆ ಮತ್ತು ನಾಯಕರು ಸಮಾನವಾಗಿ ಚುನಾವಣೆ ನಂತರ ಫಲಿತಾಂಶದ ಬಗೆಗೆ ಕುತೂಹಲಗೊಳ್ಳುವುದು ಸಾಮಾನ್ಯವಾಗಿದೆ.ಇದು ಸ್ವಾಭಾವಿಕವಾಗಿದೆ. ಅಭ್ಯರ್ಥಿಗಳ ಭವಿಷ್ಯವು ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಲ್ಲಿ (ಇವಿಎಂ) ಮೊಹರು ಹಾಕಲ್ಪಟ್ಟಿದೆ ಮತ್ತು ಸ್ವತಂತ್ರ ಅಭ್ಯರ್ಥಿಸುಮಲತಾ  ಅವರ ಅಬ್ಗೆಗೆ ಜನರಲ್ಲಿ ಸ್ವಯಂ ಗೌರವವಿದೆ.ಈ ಮಧ್ಯೆ, ಎಲ್ಲಾ ವರದಿಗಳು ನಮ್ಮ ಪರವಾಗಿವೆ ಎಂದು ನಾವು ಕೇಳಿದ್ದೇವೆ" ಎಂದರು.
ಕೃಷಿ ಸಾಲಮನ್ನಾ ಕುರಿತು ದರ್ಶನ್ ಹೇಳಿದ್ದು ಸರಿ: ಸುಮಲತಾ
ಕೃಷಿ ಉತ್ಪನ್ನಗಳಿಗೆ ಸಾಕಷ್ಟು ಬೆಂಬಲ ಬೆಲೆ ಕೊಡಿರಿ, ಸಾಲಮನ್ನಾದ ಅಗತ್ಯವಿಲ್ಲ ಎಂದು ನಟ ದರ್ಶನ್ ತೂಗುದೀಪ್ ಮುಖ್ಯಮಂತ್ರಿ ಕುಮಾರಸ್ವ್ಮಿಯವರಿಗೆ ನೀಡಿದ್ದ ಸಲಹೆಯನ್ನು ಸುಮಲತಾ ಸಮರ್ಥಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ದರ್ಶನ್, "ಕೃಷಿ ಸಾಲಗಳನ್ನು ಮನ್ನಾ ಮಾಡುವ ಬದಲು ಕೃಷಿ ಉತ್ಪನ್ನಗಳಿಗೆ  ಯೋಗ್ಯ ಬೆಂಬಲ ಬೆಲೆ ನೀಡಿ.  ಆಗ ರೈತರು ತಮ್ಮ ಸಾಲವನ್ನು  ತಾವೇ ತೀರಿಸುತ್ತಾರೆ. " ಎಂದಿದ್ದರು.  ಭಾನುವಾರ ಮಾದ್ಯಮದವ್ರೆದುರು ದರ್ಶನ್ ಹೇಳಿಕೆ ಬಗೆಗೆ ಪ್ರಸ್ತಾಪಿಸಿದ ಸುಮಲತಾ "ನಾನು ಸಹ ಇದೇ ಅಭಿಪ್ರಾಯ ಹೊಂದಿದ್ದೇನೆ. ದರ್ಶನ್ ಹೇಳಿಕೆಗೆ ನನ್ನ ಸಮರ್ಥನೆ ಇದೆ. ಅದು ಯಾವುದೇ ಸರ್ಕಾರ ಮಾಡಬೇಕಾದ ಕೆಲಸವೇ ಆಗಿದೆ." ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com