ದೇವೇಗೌಡರ ಕುಟುಂಬದ ರಾಜಕಾರಣದ ವಿರುದ್ಧ ನನ್ನ ಹೋರಾಟ: ಎ.ಮಂಜು

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣದಿಂದ ಹಾಸನ ಜನತೆ ಬೇಸತ್ತಿದ್ದಾರೆ, ಹೀಗಾಗಿ ಜನ ನನಗೆ ಈ ಬಾರಿ ಆಶೀರ್ವದಿಸಲಿದ್ದಾರೆ ಎಂದು ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಸಚಿವ
ಎ.ಮಂಜು
ಎ.ಮಂಜು
Updated on
ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣದಿಂದ ಹಾಸನ ಜನತೆ ಬೇಸತ್ತಿದ್ದಾರೆ, ಹೀಗಾಗಿ ಜನ ನನಗೆ ಈ ಬಾರಿ ಆಶೀರ್ವದಿಸಲಿದ್ದಾರೆ ಎಂದು ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಸಚಿವ ಎಂ.ಮಂಜು ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ತಮ್ಮ ಹೋರಾಟ ಎಂದು ಹೇಳಿದ್ದಾರೆ.
ಪ್ರ: ನಿಮ್ಮ ಗೆಲುವಿಗೆ ಕಾರಣವಾಗಿರುವ ಅಂಶಗಳೇನು?
ಹಾಸನದ ಶೇ,70 ರಷ್ಟು ಮತದಾರರು ದೇವೇಗೌಡರ ಕುಟುಂಬದ ವಿರೋಧಿಯಾಗಿದ್ದಾರೆ, 2014 ರಲ್ಲಿ ನಾನು ದೇವೇಗೌಡರ ವಿರುದ್ಧ ಸ್ಪರ್ಧಿಸಿದಾಗ 1ಲಕ್ಷ ಮತಗಳಿಂದ ಸೋತಿದ್ದೆ, 2009 ರಲ್ಲಿ 3.5 ಲಕ್ಷ ಮತಗಳಿಸಿದ್ದೆ, ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಜನತೆ ನೋಡಲು ಬಯಸಿದ್ದಾರೆ, ಹೀಗಾಗಿ ನಾನು ಗೆಲ್ಲುವ ವಿಶ್ವಾಸವಿದೆ.
ಪ್ರ: ಸ್ಥಳೀಯ ಕಾಂಗ್ರೆಸ್ ನಾಯಕರು ನಿಮಗೆ ಬೆಂಬಲ ನೀಡುತ್ತಾರಾ?
ಕಾಂಗ್ರೆಸ್ ನಿಂದ ನನಗೆ ಶೇ.70 ರಷ್ಟು ಮತ ದೊರೆಯುತ್ತದೆ, 2014ರ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದಾಗ ನಾನು ಕೇವಲ ಶಾಸಕನಾಗಿದ್ದೆ, ಅದಾದ ನಂತರ ಸಚಿವನಾಗಿ ನಾನು ಮಾಡಿದ ಜನಪರ ಕೆಲಸದಿಂದಾಗಿ ಇಬ್ಬರಿಂದ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ 16 ಕ್ಕೇರಿದೆ, ಸದ್ಯ ಹಾಸನ ಜಿಲ್ಲಾ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ನಿಯಂತ್ರಣದಲ್ಲಿದೆ.
ಪ್ರ: ಒಕ್ಕಲಿಗರ ಸಮುದಾಯ ನಿಮ್ಮನ್ನು ಬೆಂಬಲಿಸುತ್ತದೆಯೆ?
ದೇವೇಗೌಡರ ಕುಟುಂಬಸ್ಥರು ತಾವು ಮಾತ್ರ ಒಕ್ಕಲಿಗರ ನಾಯಕರು ಎಂದು ಘೋಷಿಸಿಕೊಂಡಿದ್ದಾರೆ,  ನಾನು ಜಾತ್ಯಾತೀತ ನಾಯಕ, ನಾನೊಬ್ಬ ಒಕ್ಕಲಿಗರ ಮುಖಂಡ ಎಂದು ಹೇಳಿಕೊಳ್ಳಲು ಬಯಸುವುದಿಲ್ಲ,  ನನಗೆ ನಂಬಿಕೆಯಿದೆ, ಸಮುದಾಯ ನನ್ನನ್ನು ಬೆಂಬಲಿಸಲಿದೆ.ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಕಲ್ಲೂ ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾತನಾಡಿದ, ಮಂಜು ಚುನಾಯಿತ ಪ್ರತಿನಿಧಿಗೆ ಭದ್ರತೆ ಇಲ್ಲ ಎಂದ ಮೇಲೆ ಸಾಮಾನ್ಯ ಜನ ಪಾಡೇನು ಎಂಬ ಬಗ್ಗೆ ಊಹಿಸಿಕೊಳ್ಳಿ,
ಪ್ರ: ಈ ಚುನಾವಣೆಯಲ್ಲಿ ಮೋದಿ ಫ್ಯಾಕ್ಟರ್ ಎಷ್ಟು ಮಹತ್ವ ಪಡೆದಿದೆ?
ಭಾರತದಲ್ಲಿ ಮೋದಿ ಬಹುದೊಡ್ಡ  ವಿಷಯವಾಗಿದೆ, ನಾನು ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಕಾಂಗ್ರೆಸ್ ಮತದಾರರು ನನಗೆ ಮತಹಾಕುತ್ತಾರೆ, ನಾನು ಈ ಮೊದಲು ಕಾಂಗ್ರೆಸ್ ನಲ್ಲಿದ್ದೆ ಎಂಬುದನ್ನು ಅವರು ಪರಿಗಣಿಸುತ್ತಾರೆ. ನಾನು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಜನರ ಅಭಿಪ್ರಾಯ ಪಡೆದಿದ್ದೇನೆ, ಬಿಜೆಪಿ ಸೇರಿ ಚುನಾವಣೆಗೆ ನಿಲ್ಲುವ ಬಗ್ಗೆ ಅವರ ಸಲಹೆ ಪಡೆದಿದ್ದೇನೆ, ತಮ್ಮ ಬೆಂಬಲ ನೀಡುವುದಾಗಿ ಜನ ನನಗೆ ತಿಳಿಸಿದ್ದಾರೆ, ಮಂಡ್ಯ ಉಪ ಚುನಾವಣೆಯಿಂದಲೇ ನಾನು ಕೆಲಸ ಆರಂಭಿಸಿದ್ದೇನೆ, ಕಾಂಗ್ರೆಸ್ ಅಂತಿಮವಾಗಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟು ಕೊಡುತ್ತದೆ ಎಂದು ನನಗೆ ಗೊತ್ತಿತ್ತು. 
ಪ್ರ; ಬಿಜೆಪಿ ತತ್ವ ಸಿದ್ಧಾಂತ ನೀವು ಒಪ್ಪಿಕೊಂಡಿದ್ದೀರಾ?
ದೇಶದ ಹಿತಾಸಕ್ತಿ ಬಿಜೆಪಿಗೆ ಪ್ರಮುಖ ವಿಷಯವಾಗಿದೆ, ಕಾಂಗ್ರೆಸ್ ಪಕ್ಷ ಕೂಡ ದೇಶಕ್ಕಾಗಿಯೇ ಕೆಲಸ ಮಾಡುತ್ತಿತ್ತು, ಆದರೆ ಜೆಡಿಎಸ್ ಮಾತ್ರ ಯಾವುದೇ ತತ್ವ ಸಿದ್ಧಾಂತಗಳಿಲ್ಲದ ಕುಟುಂಬ ಪಕ್ಷವಾಗಿದೆ. 
ಪ್ರ: ಅವಕಾಶಕ್ಕಾಗಿ ನೀವು ಪಕ್ಷ ಬದಲಾಯಿಸುತ್ತೀರಿ ಎಂಬ ಆರೋಪವಿದೆಯಲ್ಲಾ?
ಪಕ್ಷ ನನಗೆ ಎಲ್ಲಾವನ್ನು ನೀಡಿತ್ತು, ಆದರೆ ಸದ್ಯದ ಸ್ಥಿತಿಯಲ್ಲಿ ಇದನ್ನು ಮಾಡುವ ಅಗತ್ಯವಿತ್ತು, ಮುಂದಿನ ದಿನಗಳಲ್ಲಿ ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಹೋದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಭವಿಷ್ಯವಿಲ್ಲ,
ಪ್ರ: ಸಿದ್ದರಾಮಯ್ಯ ನಿಮ್ಮನ್ನು ಕಡೆಗಣಿಸಿದರೇ?
ಸಿದ್ದರಾಮಯ್ಯ ಸಿಎಲ್ ಪಿ ನಾಯಕ, ನಾನು ಅವರಿಗೆ ಆಭಾರಿಯಾಗಿದ್ದೇನೆ, ನನ್ನನ್ನು ಸಚಿವನನ್ನಾಗಿ ಮಾಡುವ ಮೂಲಕ ಅವರು ನನಗೆ ನ್ಯಾಯ ನೀಡಿದರು. ಜೆಡಿಎಸ್ ನವರು ಸಾಲಮನ್ನಾ ಮಾಡುವ ಭರವಸೆ ನೀಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ನಾವು ಸೋತೆವು,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com