ಸುಮಲತಾ ಅಂಬರೀಷ್
ಕರ್ನಾಟಕ
ಸಚಿವ ಸಿ.ಎಸ್ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ: ಸುಮಲತಾ ಹೇಳಿದ್ದೇನು?
ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಮತ್ತು ಅವರ ಆಪ್ತ ಸಂಬಂಧಿಕರ ಮೇಲೆ ನಡೆದ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ...
ಬೆಂಗಳೂರು: ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಮತ್ತು ಅವರ ಆಪ್ತ ಸಂಬಂಧಿಕರ ಮೇಲೆ ನಡೆದ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಸ್ಪಷ್ಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ದಾಳಿಗೂ ನನಗು ಸಂಬಂಧವಿಲ್ಲ, ನನದೆ ಅಷ್ಟೊಂದು ಪವರ್ ಇದೆ ಎಂದು ತಿಳಿದುಕೊಂಡರೆ ನನಗೆ ತುಂಬಾ ಸಂತೋಷ, ಪುಟ್ಟರಾಜು ಅವರು ಆಡುವ ಒಂದು ಮಾತನ್ನು ದೇವರು ಮೆಚ್ಚುವುದಿಲ್ಲ ಎಂದು ತಿಳಿಸಿದ್ದಾರೆ,
ನಿನ್ನೆ, ಮೊನ್ನೆಯವರೆಗೂ ಅಕ್ಕ ಎಂದು ಕರೆಯುತ್ತಿದ್ದರು, ಆದರೆ ಈಗ ನನ್ನ ಬಗ್ಗೆ ಹೀಗೆ ಮಾತನಾಡುತ್ತಿದ್ದಾರೆ, ಪುಟ್ಟರಾಜು ಅವರು ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದರು. ನಾನು ಎಲ್ಲಿಯೂ ಪುಟ್ಟರಾಜು ಅವರ ಹೆಸರನ್ನು ಪ್ರಸ್ತಾಪಿಸಿಲ್ಲ, ನನಗೇನು ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಜನರ ಮೇಲೆ ಗೂಂಡಾಗಿರಿ ಮಾಡಲಾಗುತ್ತಿದೆ, ಹೋಟೆಲ್ ರೆಸ್ಚೊರೆಂಟ್ ಗಳಿಗೆ ಅಬಕಾರಿ ಇಲಾಖೆ ಮೂಲಕ ಬೆದರಿಕೆ ಹಾಕಿಸಲಾಗುತ್ತಿದೆ, ನನಗೆ ಬೆಂಬಲ ನೀಡದಂತೆ ಬೆದರಿಕೆ ಹಾಕಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಸುಮಲತಾ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ