ಕರ್ನಾಟಕ ರಾಜಕಾರಣದಲ್ಲಿ ಜಾತಿಯದ್ದೇ ಕಾರುಬಾರು: ಭವಿಷ್ಯ ನಿರ್ಧರಿಸುತ್ತಾರೆ ಈ 2 ಸಮುದಾಯಗಳ ಪ್ರಬಲರು!

ಕರ್ನಾಟಕ ರಾಜಕೀಯ ಕೂಡ ಜಾತಿ ರಾಜಕಾರಣದಿಂದ ಹೊರತಾಗಿಲ್ಲ, ಕಳೆದ ಮೂರು ದಶಕಗಳಿಂದ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಈ ಎರಡು ಪ್ರಬಲ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಕರ್ನಾಟಕ ರಾಜಕೀಯ ಕೂಡ ಜಾತಿ ರಾಜಕಾರಣದಿಂದ ಹೊರತಾಗಿಲ್ಲ, ಕಳೆದ ಮೂರು ದಶಕಗಳಿಂದ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಈ ಎರಡು ಪ್ರಬಲ ಸಮುದಾಯಗಳು ಅಭ್ಯರ್ಥಿಗಳ ಹಣೆ ಬರಹ ನಿರ್ದರಿಸಿದ್ದಾರೆ.
ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಅಭ್ಯರ್ಥಿಗಳ ಸೋಲು ಗೆಲುವು ನಿರ್ಧರಿಸುತ್ತಿವೆ, ಅರ್ಹತೆ, ಸಾಮರ್ಥ್ಯ, ನಾಯಕತ್ವ, ಕ್ಷೇತ್ರದ ಪಾಲನೆ ಪೋಷಣೆ, ಎಲ್ಲದಕ್ಕಿಂತ ಮುಖ್ಯವಾಗಿ ಜಾತಿ ಮುಖ್ಯವಾಗಿದೆ, 
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ಕರ್ನಾಟಕದ ಜಾತಿ ಸಂಪ್ರದಾಯಕ್ಕೆ ಮಣೆ ಹಾಕಿವೆ, ಜೆಡಿಎಸ್ ಒಕ್ಕಲಿಗರ ಪಕ್ಷ ಎಂದೇ ಗುರುತಿಸಿಕೊಂಡಿದೆ, ಹೀಗಾಗಿ ಎಲ್ಲಾ ಚುನಾವಣೆಗಳಲ್ಲೂ ಕ್ಯಾಸ್ಟ್ ಕಾರ್ಡ್ ಅನ್ನು ಬುದ್ದಿವಂತಿಕೆಯಿಂದ ಬಳಸಿಕೊಳ್ಳುತ್ತಿದೆ. 
ಲೋಕಸಭೆ ಅಥವಾ ವಿಧಾನಸಭೆ  ಚುನಾವಣೆ ಯಾವುದೇ ಆಗಲಿ ಅಭ್ಯರ್ಥಿ ನಿರ್ಧಾರವಾಗುವು ಜಾತಿ ಆಧಾರದಲ್ಲಿ, ಒಕ್ಕಲಿಗರು ಎಷ್ಟು ಲಿಂಗಾಯತರು ಎಷ್ಚು ಪ್ರಮಾಣದಲ್ಲಿದ್ದಾರೆ ಎಂಬುದು ಪ್ರಮುಖವಾಗುತ್ತದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್  100 ಸೀಟು ಪಡೆದಿತ್ತು, ಅದಕ್ಕೆ ಕಾರಣ ಒಕ್ಕಲಿಗ, ಲಿಂಗಾಯತ ಮತ್ತು ಕುರುಬರು, ಆದರೆ ಬಿಜೆಪಿ ಪಡೆದ 75 ಸೀಟುಗಳಲ್ಲಿ ಲಿಂಗಾಯತ ಮತಗಳು ಅಧಿಕವಿತ್ತು, ಶೇ,20 ರಷ್ಚು ಮಾತ್ರ ಒಕ್ಕಲಿಗರ ಮತ ಚಲಾವಣೆಯಾಗಿತ್ತು.
ಲಿಂಗಾಯತರ ಹಾರ್ಟ್ ಲ್ಯಾಂಡ್ ಎಂದೇ ಉತ್ತರ ಕರ್ನಾಟಕ  ಬಿಂಬಿತವಾಗಿದೆ, ಹಾಗೂ ಹೇಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ, ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಭಾಗಗಳಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಅಭ್ಯರ್ಥಿಗಳನ್ನೆ ಕಣಕ್ಕಿಳಿಸಿದ್ದರು. 1971 ರಿಂದ 1983 ರವರೆಗೆ ಅಧಿಕಾರದಿಂದ ದೂರ ಉಳಿದಿದ್ದ  ಲಿಂಗಾಯತ ಸಮುದಾಯ ಜಾತಿ ರಾಜಕೀಯ ಆರಂಭಿಸಿತು, 
ದೇವರಾಜ್ ಅರಸ್ ಅವರ ದಬ್ಬಾಳಿಕೆ ಸಹಿಸದೇ 1980ರಲ್ಲಿ ಕರ್ನಾಟಕ ಚುನಾವಣೆಯಲ್ಲಿ ಜಾತಿ ರಾಜಕಾರಣ ಆರಂಭವಾಯಿತು ಎಂದು ರಾಜಕೀಯ ವಿಶ್ಲೇಷಕ ರಾಮ್ ಮೋಹನ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಜಾತಿ ರಾದಕಾರಣ ಪ್ರಬಲವಾಗಿದೆ, ಇದರಿಂದಾಗಿ ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ, ಇದು ಹೀಗೆಯೆ ಮುಂದುವರಿದರೇ ನೆರೆ ರಾಜ್ಯದಂತೆ ನಮ್ಮ ಕರ್ನಾಟಕ ಕೂಡ ಜಾತಿ ಆಧಾರದ ಮೇಲೆ 2 ಭಾಗವಾಗುವುದರಲ್ಲಿ ಸಂಶಯವಿಲ್ಲ, ಜಾತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ, ನಾವು ಕಠಿಣವೂ ಅಲ್ಲದ, ಮೃದುವೂ ಅಲ್ಲದ ಮಧ್ಯಪಥದಲ್ಲಿ ಸಾಗುತ್ತಿದ್ದೇವೆ, ಹೀಗಾಗಿ ಚುನಾವಣೆಯಲ್ಲಿ ಮಾತ್ರ ಜಾತಿ ಪ್ರಧಾನ ಪಾತ್ರ ವಹಿಸುತ್ತಿದೆ, 
ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಜಾತಿ ರಾಜಕಾರಣ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ, ಮೋದಿ ಪರ ಮತ್ತು ವಿರೋಧ ಮಾತ್ರ ಇಲ್ಲಿ ಕೆಲಸ ಮಾಡುತ್ತಿದೆ, ರಾಹುಲ್ ಗಾಂಧಿ ಕೂಡ ಯಾವುದೇ ಜಾತಿ ಅಥವಾ ಸಿದ್ಧಾಂತದ ಅಡಿಯಲ್ಲಿ  ಚುನಾವಣೆ ಎದುರಿಸುತ್ತಿಲ್ಲ, ಆದರೆ ಮೋದಿ ವಿರೋಧ ಮಾತ್ರ ರಾಹುಲ್ ಪ್ರಮುಖ ಅಸ್ತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com