ಮೋದಿ ಸುನಾಮಿಯಲ್ಲಿ ನಲುಗಿದ ಮೈತ್ರಿ: ರಾಜ್ಯದಲ್ಲಿ ಭಾರೀ ಬದಲಾವಣೆ; ಪರಮೇಶ್ವರ್ ಸಿಎಂ, ರೇವಣ್ಣ ಡಿಸಿಎಂ?

ಕರ್ನಾಟಕದಲ್ಲಿ ಬಿಜೆಪಿ 27 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಅದರಲ್ಲಿ 25 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ, 15 ರಿಂದ 18 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ..
ಪರಮೇಶ್ವರ್ ಮತ್ತು ಎಚ್.ಡಿ ರೇವಣ್ಣ
ಪರಮೇಶ್ವರ್ ಮತ್ತು ಎಚ್.ಡಿ ರೇವಣ್ಣ
Updated on
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ 27 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಅದರಲ್ಲಿ 25 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ, 15 ರಿಂದ 18 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಮಕಾಡೆ ಮಲಗಿವೆ.
ಬೆಂಗಳೂರು ಗ್ರಾಮಾಂತರ ದಲ್ಲಿ ಕಾಂಗ್ರೆಸ್ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ,. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಂಪುಟ ಸಹೋದ್ಯೋಗಿಗಳ ಸಭೆ ಕರೆದಿದ್ದಾರೆ. 
ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಜನಾದೇಶ ಸಿಕ್ಕಿದೆ, ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಘಟಾನುಘಟಿ ನಾಯಕರು ಸೋತಿದ್ದಾರೆ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್ ಮುನಿಯಪ್ಪ,ಮತ್ತು ಎಚ್.ಡಿ ದೇವೇಗೌಡ ಸೇರಿದಂತೆ ಹಲವು ಸೋತಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆ ತರುವ ಸಾಧ್ಯತೆಗಳಿದೆ.
ಬಿಜೆಪಿ ಎಷ್ಟು ಸೀಟು ಪಡೆದಿದೆ ಎಂಬುದು ಮುಖ್ಯವಲ್ಲ, ಆದರೆ ಗೆದ್ದ ಪರಿ ಎಂತದ್ದು ಎಂಬುದೇ ಮುಖ್ಯ, ಫಲಿತಾಂಶ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ, ಅನಂತ್ ಕುಮಾರ್ ಹೆಗೆಡೆ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಸಿಎಂ ಕುಮಾರಸ್ವಾಮಿ ತಮ್ಮ ಎಲ್ಲಾ ಸಮಯ ಅಲ್ಲೇ ಕಳೆದರು, ಆದರೆ ಐವತ್ತು ವರ್ಷಗಳ ಇತಿಹಾಸ ಮುರಿದಿರುವ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಸುಮಾರು 1,25,876 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ವಿಷಯ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಮೂಡಿಸುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸಲಿದೆ. ಬಿಜೆಪಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಲಿದೆ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಬಿಟ್ಟುಹೊಸದಾಗಿ ಚುನಾವಣೆಗೆ ಹೋಗುವುದೇ ಉತ್ತಮ ಎಂದು ರಾಜಕೀಯೇ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ, ಸರ್ಕಾರ ಬೀಳಿಸುವುದು ಎರಡು ಪಕ್ಷಗಳಿಗೂ ಒಳ್ಳೆಯದಲ್ಲ.
ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ಫಲಿತಾಂಶಕ್ಕೆ ಜೆಡಿಎಸ್ ಹೊಣೆಯಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು, ಆದರೆ ಸದ್ಯ ಕಾಂಗ್ರೆಸ್ ಜೆಡಿಎಸ್ ಬೈಯ್ಯುವುದನ್ನು ಬಿಟ್ಟಿದೆ, ಸಮ್ಮಿಶ್ರ ಸರ್ಕಾರದ ನಾಯಕತ್ವ ಬದಲಿಸುವುದೇ ಉತ್ತಮ ಎಂದು ಕಾಂಗ್ರೆಸ್ ನೆ ಕೆಲ ಮುಖಂಡರು ಸಲಹೆ ನೀಡಿದ್ದಾರೆ, ಪರಮೇಶ್ವರ್ ಅವರನ್ನು ಸಿಎಂ ಮಾಡಿ ರೇವಣ್ಣ ಅವರನ್ನು ಡಿಸಿಎಂ ಮಾಡಬೇಕು, ಆ ಮೂಲಕ ಸರ್ಕಾರ ರಕ್ಷಿಸಬೇಕೆಂದು ಸಲಹೆ ನೀಡಲಾಗಿದೆ. 
ಆದರೆ ಸದ್ಯ 104ಶಾಸಕರನ್ನು ಹೊಂದಿರುವ ಬಿಜೆಪಿಗೆ ಚಿಂಚೋಳಿ ಗೆಲುವು ಸೇರಿ 105 ಶಾಸಕರಾಗಿದ್ದಾರೆ, ಪಕ್ಷೇತರರ ಬೆಂಬಲ ಸೇರಿ ಒಟ್ಟು 107 ಆಗುತ್ತೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಸರ್ಕಾರ ರಚಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ, ಇದು ಕಾಂಗ್ರೆಸ್ ಗೆ ಆಘಾತ ನೀಡಿದೆ, ಇಂದು ಮದ್ಯಾಹ್ನ ನಡೆಯಲಿರುವ ಸಭೆಯಲ್ಲಿ ಮುಂದಿನದರ ಬಗ್ಗೆ ಎಲ್ಲಾ ನಿರ್ಧಾರವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com