ಹೌದು.. ಮತದಾನ ಮುಕ್ತಾಯವಾಗಿ ಫಲಿತಾಂಶ ಪ್ರಕಟಗೊಂಡಿದ್ದರೂ, ಮಂಡ್ಯ ಮತದಾರಲ್ಲಿ ಇಂತಹುದೊಂದು ಪ್ರಶ್ನೆ ಕಾಡುತ್ತಿದ್ದು ಇದಕ್ಕೆ ಉತ್ತರ ಇಲ್ಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಒಟ್ಟು ಮೂರು ಮಂದಿ ಸುಮಲತಾ ಹೆಸರಿನ ಮಹಿಳೆಯರು ಸ್ಪರ್ಧಿಸಿದ್ದರು. ಸುಮಲತಾ (ಕ್ರಮ ಸಂಖ್ಯೆ 19), ಎಂ ಸುಮಲತಾ (ಕ್ರಮ ಸಂಖ್ಯೆ 21) ಮತ್ತು ಸುಮಲತಾ (ಕ್ರಮ ಸಂಖ್ಯೆ 22) ಎಂಬುವವರು ಸ್ಪರ್ಧಿಸಿದ್ದರು. ಈ ಪೈಕಿ ಸುಮಲತಾ (ಕ್ರಮ ಸಂಖ್ಯೆ 19) ಅವರಿಗೆ ಒಟ್ಟು 8902 ಮತಗಳು ಬಿದ್ದಿದ್ದು, ಎಂ ಸುಮಲತಾ (ಕ್ರಮ ಸಂಖ್ಯೆ 21) ಅವರಿಗೆ 8542 ಮತಗಳು ಬಿದ್ದಿವೆ. ಅಂತೆಯೇ ಸುಮಲತಾ (ಕ್ರಮ ಸಂಖ್ಯೆ 22) ಅವರಿಗೆ 3119 ಮತಗಳು ಬಿದ್ದಿವೆ. ಆ ಮೂಲಕ ಮೂವರು ಸುಮಲತಾ ಎಂಬ ಅಭ್ಯರ್ಥಿಗಳಿಗೆ ಒಟ್ಟು 20,563 ಮತಗಳು ಬಿದ್ದಂತಾಗಿದೆ.