ಉತ್ತರ ಕರ್ನಾಟಕದ ಪ್ರಭಾವಿ ಕುಟುಂಬಗಳಿಗೆ ಸ್ವಪಕ್ಷದಲ್ಲೇ ಬೆಲೆ ಇಲ್ಲ!

ಉತ್ತರ ಕರ್ನಾಟಕ ಭಾಗದಲ್ಲಿ ಕಳೆದೆರಡು ದಶಕಗಳಿಂದ ಪ್ರಭಾವಿಗಳಾಗಿದ್ದ ಕತ್ತಿ ಹಾಗೂ ಜಾರಕಿಹೋಳಿ ಕುಟುಂಬಗಳು ತಮ್ಮದೇ ಪ್ರಾಂತದಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ.ಕಳೆದ ಹಲವು ಪ್ರಮುಖ ಚುನಾವಣೆಗಳಲ್ಲಿ ....
ಉತ್ತರ ಕರ್ನಾಟಕದ ಪ್ರಭಾವಿ ಕುಟುಂಬಗಳಿಗೆ ಸ್ವಪಕ್ಷದಲ್ಲೇ ಬೆಲೆ ಇಲ್ಲ!
ಉತ್ತರ ಕರ್ನಾಟಕದ ಪ್ರಭಾವಿ ಕುಟುಂಬಗಳಿಗೆ ಸ್ವಪಕ್ಷದಲ್ಲೇ ಬೆಲೆ ಇಲ್ಲ!
ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಕಳೆದೆರಡು ದಶಕಗಳಿಂದ ಪ್ರಭಾವಿಗಳಾಗಿದ್ದ ಕತ್ತಿ ಹಾಗೂ ಜಾರಕಿಹೋಳಿ ಕುಟುಂಬಗಳು ತಮ್ಮದೇ ಪ್ರಾಂತದಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ.ಕಳೆದ ಹಲವು ಪ್ರಮುಖ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಈ ಕುಟುಂಬಗಳು ಸ್ವಪಕ್ಷದವರಿಂದಲೇ ನಿರ್ಲಕ್ಷಕ್ಕೆ ಒಳಗಾಗಿವೆ.
1985ರಲ್ಲಿ ವಿಶೇಶ್ವರಯ್ಯ ಕತ್ತಿ ವಿಧಾನಸಭೆಗೆ ಆಯ್ಕೆಯಾದಂದಿನಿಂದ ಇಂದಿನವರೆಗೆ ಹುಕ್ಕೇರಿಯ ಕತ್ತಿ ಕುಟುಂಬ ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಪ್ರಾಬಲ್ಯವಿರುವ ಕುಟುಂಬ ಎನಿಸಿದೆ. ಈ ಭಾಗದ ರಾಜಕೀಯದ ಮೇಲೆ ಬಲವಾದ ಹಿಡಿತ ಹ್ಪ್ಂದಿರುವ ಇವರ ಕುಟುಂಬದ ಉಮೇಶ್ ಕತ್ತಿ ಕಳೆದ ಸಾಲಿನಲ್ಲಿ ಎಂಟನೆಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು 2009 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಮೇಶ್ ಕತ್ತಿ ಜಯ ಸಾಧಿಸಿದ್ದರು. ಆದರೆ ಈ ಬಾರಿ ಕತ್ತಿ ಕುಟುಂಬದವರನ್ನು ಬಿಜೆಪಿ ಚುನಾವಣೆಗೆ ಪರಿಗಣಿಸಿಲ್ಲ. ಬಹು ದೊಡ್ಡ ಪ್ರಮಾಣದ ಲಾಬಿಯ ಹೊರತಾಗಿಯೂ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ನೀಡಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಇತ್ತೀಚೆಗೆ ಉಮೇಶ್ ಕತ್ತಿ ಇಟ್ಟಿದ್ದ ಬೇಡಿಕೆ ರಾಜ್ಯ ರಾಜಕೀಯ ವಲಯದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿದೆ. ಅವರ ಬೇಡಿಕೆಯು ರಾಜ್ಯದ ಉದ್ದಗಲಕ್ಕೂ ಮಿಶ್ರ ಪ್ರತಿಕ್ರಿಯೆಯನ್ನು ಕಂಡಿತ್ತು., ಅನೇಕ ಉನ್ನತ ರಾಜಕಾರಣಿಗಳು ಮತ್ತು ನಾಯಕರು ಅವರ ಬೆನ್ನಹಿಂದೆ ನಿಂತರು. ಕತ್ತಿ ಸೋದರರಾದ ಉಮೇಶ್ ಹಾಗೂ ರಮೇಶ್ ಕತ್ತಿ ಅವರ ಪ್ರಭಾವದಿಂದ ಬಿಜೆಪಿಗೆ ಈ ಭಾಗದಲ್ಲಿ ಹಲವು ಚುನಾವಣೆಗಳಲ್ಲಿ ಜಯ ಸಾಧಿಸಲು ಸಾಧ್ಯವಾಗಿದೆ. ಬೆಳಗಾವಿಯಲ್ಲಿ ಪಕ್ಷ 18 ಕ್ಕೂ ಹೆಚ್ಚು ಅಸೆಂಬ್ಲಿ ವಿಭಾಗಗಳನ್ನು ಗೆಲ್ಲಲು ಇವರ ಕುಟುಂಬದ ಪ್ರಭಾವ ಮುಖ್ಯ ಹಿನ್ನೆಲೆಯಾಗಿದೆ.
ಹಲವಾರು ಸಕ್ಕರೆ ಕಾರ್ಖಾನೆಗಳು, ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮೇಲೆ ತಮ್ಮ ಹಸ್ತದ ಹೊರತಾಗಿಯೂ , ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿಡದೆ ಕತ್ತಿ ಕುಟುಂಬವನ್ನು ಕೈಬಿಟ್ಟಿದೆ.ಈ ಹಿನ್ನೆಲೆಯಲ್ಲಿ ಕತ್ತಿ ಸೋದರರು ತಾವು ಕಳೆದುಕೊಂಡ ಸ್ಥಾನವನ್ನು ಮರಳಿ ಗಳಿಸಲು ಕಾಂಗ್ರೆಸ್ ಅಥವಾ ಜೆಡಿಎಸ್ ಜತೆ ಕೈಜೋಡಿಸಬಹುದು, ಜೆಡಿಎಸ್ ನ ಹಿಂದುಳಿದ ನಾಯಕ ಕೋನಾರೆಡ್ಡಿ ಉಮೇಶ್ ಕತ್ತಿ ಮುಂದಿನ ಕೆಲ ದಿನಗಳಲ್ಲಿ ಜೆಡಿಎಸ್ ಗೆ ಸೇರಲಿದ್ದಾರೆ ಎಂದು ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಇನ್ನು ಈ ಭಾಗದ ಕಾಂಗ್ರೆಸ್ ಶಕ್ತಿಯಾಗಿದ್ದ ಜಾರಕಿಹೋಳಿ ಬ್ರದರ್ಸ್ ಸಹ ಈಗ ಕಣದ ತೆರೆಮರೆಗೆ ಸರಿದಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಬೆಂಬಲ ಬದಲಿಸಿ ಯಡಿಯೂರಪ್ಪ ಅವರ ಆಪರೇಷನ್ ಕಮಲ ಬಹುತೇಕ ಯಶಸ್ವಿಯಾಗಲು ಕಾರಣವಾಗಿದ್ದ ಜಾರಕಿಹೋಳಿ ಕುಟುಂಬ ಈಗ ಪ್ರಭಾವೀ ರಾಜಕೀಯದಿಂಡ ದೂರಾಗಿದೆ. ಸತೀಶ್, ರಮೇಶ್ ಜಾರಕಿಹೋಳಿ ಸಿದ್ದರಾಮಯ್ಯ ಪರವಾಗಿ ಕೆಲಸ ಮಾಡಿ ಅವರು ಬಾದಾಮಿಯಲ್ಲಿ ಗೆಲ್ಲುವುದಕ್ಕೆ ಕಾರಣವಾಗಿದ್ದರು. ಇನ್ನು ಬಾಲಚಂದ್ರ ಜಾರಕಿಹೋಳಿ ಸಹ ರಾಜಕೀಯ ಪ್ರಭಾವದಿಂದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈಗ ಜಾರಕಿಹೋಳಿ ಕುಟುಂಬ ತಮ್ಮ ಮರೆಯಾಗುತ್ತಿರುವ ಜನಪ್ರಿಯತೆಯ ಕಾರಣ ಕಾಂಗ್ರೆಸ್ ಹೈಕಮಾಂಡ್ ನೊಡನಿದ್ದ ಮುನ್ನಿನ ಸಂಬಂಧ ಕಡಿದುಕೊಂಡಿದ್ದಾರೆ.ಕಾಂಗ್ರೆಸ್ ಕೆಲ ದಿನಗಳಿಂದೀಚೆಗೆ ಸತೀಶ್ ಹಾಗೂ ರಮೇಶ್ ಜಾರಕಿಹೋಳಿಯವರುಗಳನ್ನು ಸಂಪುಟದಿಂದ ಕೈಬಿಟ್ಟ ಬಳೀಕ ಪಕ್ಷದಿಂದ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ
ಲೋಕಸಭೆ ಚುನಾವಣೆಯಲ್ಲಿ ಸಹ ಸತೀಶ್ ಅಥವಾ ರಮೇಶ್ ಜಾರಕಿಹೋಳಿಯಲ್ಲಿ ಒಬ್ಬರಿಗೆ  ಬೆಳಗಾವಿ ಅಥವಾ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವುದು ಎಂದು ಭಾವಿಸಿಅಲಾಗಿತ್ತು. ಆದರೆ ಪಕ್ಷ ಅವರನ್ನು ನಿರ್ಲಕ್ಷಿಸಿ ಬೇರೆಯವರಿಗೆ ಟಿಕೆಟ್ ಮಂಜೂರು ಮಾಡಿದೆ. ಹೀಗೆ ಸತೀಶ್ ಜಾರಕಿಹೋಳಿ, ರಮ್ಶ್ ಕ್ಜಾರಕಿಹೋಳಿ ಹಾಗೂ ಉಮೇಶ್ ಕತ್ತಿಯಂತಹಾ ಪ್ರಭಾವಿಗಳು ಇತ್ತೀಚಿನ ಚುನಾವಣೆಗಳಲ್ಲಿ ಸಾಕಷ್ಟು ಅಂತರದಿಂದ ಗೆದ್ದಿದ್ದರೂ ಅವರನ್ನು ರ್ಜಕೀಯ ಪಕ್ಷಗಳ ಮುಖಂಡರು ಸೈಡ್ ಅಲೈನ್ ಮಾಡುತ್ತಿದ್ದಾರೆ.
ಬಿಜೆಪಿಗೆ ಆರ್ ಎಸ್ ಎಸ್  ಆಯ್ಕೆಯೇ ಮುಖ
ಬಿಜೆಪಿ ಜೊಲ್ಲೆಯವರಿಗೆ ಚಿಕ್ಕೋಡಿಯ ಟಿಕೆಟ್ ನೀಡುವುದರ ಹಿಂದೆ ಆರ್ ಎಸ್ ಎಸ್ ಕಾರ್ಯತಂತ್ರವಿದೆ ಎಂದು ರಮೇಶ್ ಕತ್ತಿ ಟೀಕಿಸಿದ್ದಾರೆ. ಜೆಪಿ ಸಮೀಕ್ಷೆಯೊಂದರಲ್ಲಿ ನಾನು 97% ಜನಪ್ರಿಯತೆ ಗಳಿಸಿದ್ದರೆ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಜೊಲ್ಲೆ ಕೇವಲ 3%  ಜನಪ್ರಿಯತೆ ಗಳಿಸಿದ್ದರು" ಅವರು ಹೇಳಿದ್ದಾರೆ.
ಇನ್ನು ಅಣ್ಣ ತಮ್ಮಂದಿರ ನಡುವಿನ ಬಿರುಕು ಕಾಂಗ್ರೆಸ್ ನಾಯಕರ ನಿರಲಕ್ಷಕ್ಕೆ ಕಾರಣ ಎಂದು ಜಾರಕಿಹೋಳಿ ಕುಟುಂಬದ ಆಪ್ತರು ಹೇಳಿದ್ದಾರೆ. ರಮೇಶ್ ಜಾರಕಿಹೋಳಿಗೆ ಲೋಕಸಭೆ ಟಿಕೆಟ್ ನೀಡುವ;ಲ್ಲಿ ಪಕ್ಷ ನಿರಕ್ಷ ತಾಳಲು ಇದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com