ಪ್ರಧಾನಿ ಮೋದಿಯೊಡನೆ ಸೆಲ್ಫಿ ಬೇಕೆ? ಮೈಸೂರಿನ ಬಿಜೆಪಿ ರ್ಯಾಲಿಯಲ್ಲಿದು ಸಾಧ್ಯ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಮೈಸೂರು ಹಾಗೂ ಚಿತ್ರದುರ್ಗಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೃಹತ್ ರ್ಯಾಲಿಗಳು ನಡೆಯಲಿದೆ.
ಪ್ರಧಾನಿ ಮೋದಿಯೊಡನೆ ಸೆಲ್ಫಿ ಬೇಕೆ? ಮೈಸೂರಿನ ಬಿಜೆಪಿ ರ್ಯಾಲಿಯಲ್ಲಿದು ಸಾಧ್ಯ
ಪ್ರಧಾನಿ ಮೋದಿಯೊಡನೆ ಸೆಲ್ಫಿ ಬೇಕೆ? ಮೈಸೂರಿನ ಬಿಜೆಪಿ ರ್ಯಾಲಿಯಲ್ಲಿದು ಸಾಧ್ಯ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಮೈಸೂರು ಹಾಗೂ ಚಿತ್ರದುರ್ಗಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೃಹತ್ ರ್ಯಾಲಿಗಳು ನಡೆಯಲಿದೆ. ಮೋದಿ ಸಮಾವೇಶಕ್ಕೆ ಜನರು ಸಾಗರೋಪಾದಿಯಲ್ಲಿ ಸೇರಲಿದ್ದಾರೆ ಎನ್ನುವುದು ರಾಜ್ಯ ಬಿಜೆಪಿಗೆ ಖಚಿತವಾಗಿ ತಿಳಿದಿದೆ.ಚಿತ್ರದುರ್ಗದಲ್ಲಿ 2 ಲಕ್ಷ ಸಂಖ್ಯೆಯ ಕಾರ್ಯಕರ್ತರು ಜಮಾಯಿಸುವ ನಿರೀಕ್ಷೆ ಇದೆ.ಇನ್ನು ಮೋದಿ ಪ್ರಚಾರ ಹಾಗೂ ಬಿಜೆಪಿಗೆ ಗೆಲುವನ್ನು ಖಚಿತಪಡಿಸಲು ಮೈಸೂರು ಬಿಜೆಪಿ ಕಾರ್ಯಕರ್ತರು ಹೊಸದೊಂದು ತಂತ್ರಕ್ಕೆ ಮೊರೆ ಹೋಗಿದ್ದಾರೆ. ಪ್ರಧಾನಿಗಳೊಡನೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶಕ್ಕೆ ಸೆಲ್ಫಿ ಝೋನ್ ತಯಾರು ಮಾಡಿದ್ದಾರೆ. 
"ಪ್ರಧಾನ ಮಂತ್ರಿಯೊಂದಿಗೆ ಸೆಲ್ಫಿಗೆ ಬಯಸುವ ಯುವಕರಿಗೆ ಸಂತಸಪಡಿಸಲು ಮುಖ್ಯ ವೇದಿಕೆಯ ಸಮೀಪವೇ ಒಂದು ಸೆಲ್ಫಿ ಝೋನ್ ವಲಯವನ್ನು ಸ್ಥಾಪಿಸಲಾಗಿದೆ ಎಂದು "ಶಾಸಕ ಎಸ್.ಎ. ರಾಮದಾಸ್  ಹೇಳಿದ್ದಾರೆ.
ಚಿತ್ರದುರ್ಗ ಸಮಾವೇಶಕ್ಕಾಗಿ ಬಳ್ಳಾರಿ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಆಸುಪಾಸಿನ ಎರಡು ಲಕ್ಷ ಕಾರ್ಯಕರ್ತರು ಸೇರಲಿದ್ದಾರೆಂದು ನಿರೀಕ್ಷಿಸಲಾಗಿದೆ. ಈ ಮೋದಿ ಪ್ರಚಾರ ಸಮಾವೇಶದ ಕಾರಣ ಮಾಜಿ ಪ್ರಧಾನಿ ದೇವೇಗೌಡರ ಒಕ್ಕಲಿಗರ ಓಲೈಕೆ ವಿಫಲವಾಗಿ ಒಕ್ಕಲಿಗ ಸಮುದಾಯವು ಬಿಜೆಪಿ ಪರ ಮತಚಲಾಯಿಸಲಿದೆ ಎಂದು ಸ್ಥಳೀಯ ಬಿಜೆಪಿ ಮುಝ್ಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.ದೇವೇಗೌಡರು ಚಿತ್ರದುರ್ಗದ ನೆರೆಯ ಜಿಲ್ಲೆ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದು ಇದು ಚಿತ್ರದುರ್ಗದ ಕೆಲ ಒಕ್ಕಲಿಗ ಸಮುದಾಯವನ್ನು ಜೆಡಿಎಸ್ ಪರ ವಾಲುವಂತೆ ಮಾಡಲಿದೆ ಎನ್ನಲಾಗಿದೆ.
ಮುಖ್ಯ ವೇದಿಕೆ ಸಮೀಪ 45,000  ಆಸನ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗದ ಸಮಾವೇಶಕ್ಕೆ 2ರಿಂದ 3 ಲಕ್ಷ ಜನ ಸೇರಲು ನಿರೀಕ್ಷಿಸಲಾಗಿದೆ. ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದ್ದಾರೆ. ಮಧ್ಯಾಹ್ನ  1.50ಕ್ಕೆ ಜಿಲ್ಲೆಯ ಡಿಆರ್ ಡಿಒ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ  2.35ಕ್ಕೆ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಲ್ಲಿಂದ ಸಂಜೆ 4ಕ್ಕೆ ಮೈಸೂರಿಗೆ ಆಗಮಿಸುವ ಮೋದಿ ಮಹಾರಾಜ ಕಾಲೇಜು ಕ್ರೀಡಾಂಗಣದಲ್ಲಿನ ಬೃಹತ್ ವೇದಿಕೆಯಲ್ಲಿ ಪ್ರಚಾರ ರ್ಯಾಲಿ ನಡೆಸಲಿದ್ದಾರೆ.ಈ ರ್ಯಾಲಿಗೆ ಚಾಮರಾಜನಗರ, ಕೊಡಗು, ಮೈಸೂರು ಸುತ್ತಮುತ್ತಲ ಲಕ್ಷ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಸೇರಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com