ಸಿಎಂ ಕುಮಾರಸ್ವಾಮಿ ರೈತರಿಗೆ ಸುಳ್ಳು ಭರವಸೆ ನೀಡಿದ್ದಾರೆ, ಅವರಿಗೆ ಕರ್ನಾಟಕ ಭ್ರಷ್ಟಾಚಾರದ ಎಟಿಎಂ: ಅಮಿತ್ ಶಾ ಟೀಕೆ

ಸಿಎಂ ಕುಮಾರಸ್ವಾಮಿ ರಾಜ್ಯದ ರೈತರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ...

Published: 16th April 2019 12:00 PM  |   Last Updated: 16th April 2019 02:36 AM   |  A+A-


Amit Shah

ಅಮಿತ್ ಶಾ

Posted By : SUD SUD
Source : Online Desk
ದಾವಣಗೆರೆ: ಸಿಎಂ ಕುಮಾರಸ್ವಾಮಿ ರಾಜ್ಯದ ರೈತರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ, ರೈತರ ಸಾಲಗಳನ್ನು ಅವರು ಮನ್ನಾ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕರ್ನಾಟಕ ಭ್ರಷ್ಟಾಚಾರ ನಡೆಸಲು ಎಟಿಎಂ ಇದ್ದಂತೆ ಎಂದು ಕೂಡ ಟೀಕಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಆಳುವವರು ಯಾರು ಎಂಬ ಆಯ್ಕೆ ನಿಮ್ಮ ಮುಂದಿದೆ. ಅಭಿವೃದ್ಧಿಯ ಮಾನದಂಡ ಹೊಂದಿರುವ ಎನ್​ಡಿಎ ಒಂದೆಡೆಯಾದರೆ, ಮತ್ತೊಂದೆಡೆ ರಾಹುಲ್ ಅಂಡ್ ಟೀಮ್ ಇದೆ. ಯಾರಾಗಬೇಕೆಂದು ನೀವೇ ನಿರ್ಧರಿಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಅವರು ಇಂದು ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಮ್. ಸಿದ್ದೇಶ್ ಪರ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಭಾಷಣ ಮಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು, ಕಳೆದ ಹಲವು ವರ್ಷಗಳಿಂದ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಾಬಾ ರಾಹುಲ್ ಅಂಡ್ ಟೀಮ್ ಅನ್ನು ಪ್ರಶ್ನೆ ಮಾಡುತ್ತಲೇ ಇದ್ಧೇನೆ. ಆದರೆ, ಅವರು ಈವರೆಗೆ ಅದಕ್ಕೆ ಉತ್ತರ ನೀಡಿಲ್ಲ. ಆದರೆ ನಿಮ್ಮ ಪ್ರಧಾನಿ ಯಾರಾಗಬೇಕು ಎಂಬ ಆಯ್ಕೆ ನಿಮ್ಮ ಮುಂದಿದೆ ಅದನ್ನು ನೀವೆ ನಿರ್ಧರಿಸಿ ಎಂದು ಹೇಳಿದರು.

ಕಳೆದ 4 ವರ್ಷಗಳಿಂದ ಇಡೀ ದೇಶ ಸುತ್ತಿ ಇಲ್ಲಿಗೆ ಬಂದಿದ್ದೇನೆ. ನಾನು ಹೋದಲ್ಲೆಲ್ಲ ಮೋದಿ ಮೋದಿ ಎಂಬ ಘೊಷಣೆ ಮೊಳಗುತ್ತಿದೆ. ಮೋದಿ ದೇಶದ ನಾಯಕರು ಆದರೆ, ನಾಯಕರೆ ಇಲ್ಲದವರು ಇಂದು ದೇಶ ಮುನ್ನಡೆಸಲು ಬರುತ್ತಿದ್ದಾರೆ. ಇಂತವರಿಗೆ ಅವಕಾಶ ಮಾಡಿಕೊಡದೆ ಬಿಜೆಪಿಗೆ ಮತ ನೀಡಿ ಎಂದು ಕೇಳಿಕೊಂಡರು.

ಅಲ್ಲಿಂದ ಅಮಿತ್ ಶಾ ತುಮಕೂರಿಗೆ ಆಗಮಿಸಿದ್ದು ಸಿದ್ದಗಂಗಾ ಮಠಕ್ಕೆ ರಾಜ್ಯದ ಹಲವು ನಾಯಕರೊಂದಿಗೆ ಭೇಟಿ ನೀಡಿದ್ದಾರೆ. ತುಮಕೂರಿನಲ್ಲೂ ರೋಡ್ ಶೋ ನಡೆಸಲಿದ್ದಾರೆ.
Stay up to date on all the latest ಕರ್ನಾಟಕ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp