ಮೋದಿಯವರಿಗಿಂತ ದೇವೇಗೌಡರೇ ಹೆಚ್ಚು ಉತ್ತಮ ಪ್ರಧಾನಿಯಾಗಿದ್ದರು: ಹೆಚ್ ಡಿ ಕುಮಾರಸ್ವಾಮಿ

ಆಂತರಿಕ ಭದ್ರತೆ ವಿಚಾರದಲ್ಲಿ ತಮ್ಮ ತಂದೆ ಹೆಚ್ ಡಿ ದೇವೇಗೌಡರ 10 ತಿಂಗಳ ಆಡಳಿತ ಪ್ರಧಾನಿ ...
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
ಹುಬ್ಬಳ್ಳಿ: ಆಂತರಿಕ ಭದ್ರತೆ ವಿಚಾರದಲ್ಲಿ ತಮ್ಮ ತಂದೆ ಹೆಚ್ ಡಿ ದೇವೇಗೌಡರ 10 ತಿಂಗಳ ಆಡಳಿತ ಪ್ರಧಾನಿ ಮೋದಿಯವರ 5 ವರ್ಷಗಳ ಅವಧಿಯ ಆಡಳಿತಕ್ಕಿಂತ ಹೆಚ್ಚು ಉತ್ತಮವಾಗಿತ್ತು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಿನ್ನೆ ಹುಬ್ಬಳ್ಳಿಯಲ್ಲಿ ಅವರು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ದೇಶ ಶಾಂತಿಯುತವಾಗಿತ್ತು, ಅವರ ಅವಧಿಯಲ್ಲಿ ಒಂದೇ ಒಂದು ದಾಳಿ ಕೂಡ ಆಗಿರಲಿಲ್ಲ ಎಂದರು.
ಜೆಡಿಎಸ್ ವರಿಷ್ಠ ದೇವೇಗೌಡರು 1996 ಜೂನ್ 1ರಿಂದ 1997 ಏಪ್ರಿಲ್ 21ರವರೆಗೆ ಪ್ರಧಾನ ಮಂತ್ರಿಯಾಗಿದ್ದರು.
 ತಮ್ಮ ತಂದೆಯವರ 10 ತಿಂಗಳ ಪ್ರಧಾನ ಮಂತ್ರಿ ಆಡಳಿತ ಪ್ರಧಾನಿ ಮೋದಿಯವರ 5 ವರ್ಷಗಳ ಅವಧಿಯ ಆಡಳಿತಕ್ಕಿಂತ ಹೆಚ್ಚು ಉತ್ತಮವಾಗಿತ್ತು ಎಂದು ನಿಮಗೆ ಏಕೆ ಅನ್ನಿಸಿದೆ ಎಂದು ಕೇಳಿದಾಗ ಖಂಡಿತಾ, ದೇವೇಗೌಡರು 10 ತಿಂಗಳ ಪ್ರಧಾನ ಮಂತ್ರಿಗಳಾಗಿದ್ದಾಗ ಮತ್ತು ಪ್ರಧಾನಿ ಮೋದಿಯವರ ಏನೇನು ಮಾಡಿದ್ದರು ಎಂದು ನೀವು ದಾಖಲೆಗಳನ್ನು ನೋಡಬಹುದು. ತಮ್ಮ ತಂದೆಯವರ 10 ತಿಂಗಳ ಅಧಿಕಾರಾವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ನನ್ನ ತಂದೆ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಯಾವುದಾದರೂ ಭಯೋತ್ಪಾದಕ ಕೃತ್ಯ ನಡೆದಿವೆಯೇ, ಇಡೀ ದೇಶ ಶಾಂತವಾಗಿತ್ತು ಎಂದು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com