ನಮ್ಮ ಕುಟುಂಬ ಯಾರನ್ನೂ ಟಾರ್ಗೆಟ್ ಮಾಡ್ತಿಲ್ಲ, ಸಿಎಂಗೆ ಬೇರೆ ಸಾಕಷ್ಟು ಕೆಲಸಗಳಿವೆ: ನಿಖಿಲ್ ಕುಮಾರಸ್ವಾಮಿ

ತೀವ್ರ ಜಿದ್ದಾಜಿದ್ದಿನ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದ ನಂತರ ಕಾಂಗ್ರೆಸ್-ಜೆಡಿಎಸ್ ...
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
ಮಂಡ್ಯ: ತೀವ್ರ ಜಿದ್ದಾಜಿದ್ದಿನ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದ ನಂತರ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಬೆಂಬಲದಿಂದ ಚುನಾವಣೆ ಎದುರಿಸಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದರು. ಸುಮಲತಾ ಬೆಂಬಲಿಗರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್‌, ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ನಮ್ಮ ಕುಟುಂಬದ ರಾಜಕೀಯದ ಇತಿಹಾಸದಲ್ಲಿ ದ್ವೇಷದ ರಾಜಕಾರಣ ನಮ್ಮ ಕುಟುಂಬ ಮಾಡಿಲ್ಲ. ಇಷ್ಟು ಬಿಟ್ಟು ಅವರ ಮಾತಿಗೆ ಹಿಂದೆಯೂ ಪ್ರತಿಕ್ರಿಯಿಸಿಲ್ಲ. ಮುಂದೆಯೂ ಪ್ರತಿಕ್ರಿಯಿಸಲ್ಲ. ನಮ್ಮ ತಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಅವರಿಗೆ ಬೇರೆ ಸಾಕಷ್ಟು ಕೆಲಸಗಳಿವೆ. ಒಬ್ಬರ ಮೇಲೆ ಟಾರ್ಗೆಟ್ ಮಾಡಿ ಕುಳಿತುಕೊಳ್ಳಲು ಅವರಿಗೆ ಸಮಯವಿಲ್ಲ. ನಾನು ಗೆದ್ದರೂ, ಸೋತರೂ ಮಂಡ್ಯದಲ್ಲಿಯೇ ಇರುತ್ತೇನೆ, ಇಲ್ಲಿಯೇ ಜಮೀನು ಖರೀದಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ವ್ಯಾಪಕವಾಗಿ ಬೆಟ್ಟಿಂಗ್ ನಡೆಯುತ್ತಿದೆ ಎಂದಾಗ, ಬೆಟ್ಟಿಂಗ್ ಒಳ್ಳೆಯ ಬೆಳವಣಿಗೆಯಲ್ಲ. ಯಾರೂ ಸಹ ಬೆಟ್ಟಿಂಗ್ ಕಟ್ಟಬಾರದು. ತಮ್ಮನ್ನ ಬೆಂಬಲಿಸದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಕ್ರಮದ ವಿಚಾರದ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ನಿಖಿಲ್‌ ತಿಳಿಸಿದರು.
ಎಚ್​.ಡಿ. ದೇವೇಗೌಡ ಮತ್ತು ಎಚ್​.ಡಿ. ಕುಮಾರಸ್ವಾಮಿಯವರ ಹೋರಾಟದ ಬಗ್ಗೆ ಜನರಿಗೆ ಗೊತ್ತಿದೆ. ಆದ್ದರಿಂದ ನಾನು ಗೆಲ್ಲುತ್ತೇನೆಂಬ ವಿಶ್ವಾಸ ನನಗಿದೆ. ಚುನಾವಣೆಯಲ್ಲಿ ಒಂದಷ್ಟು ಗೊಂದಲವಿದ್ದಿದ್ದು ನಿಜ. ನಾವು ಎಲ್ಲರೊಂದಿಗೂ ಸೇರಿ ಕೆಲಸ ಮಾಡಿದ್ದೇವೆ. ಮೇ 23ರ ಬಳಿಕ ಸರ್ಕಾರ ಉರುಳಲಿದೆ ಎಂಬುದೆಲ್ಲ ಸುಳ್ಳು. ಈ ಚುನಾವಣೆ ನನಗೆ ದೊಡ್ಡ ಅನುಭವವನ್ನು ತಂದುಕೊಟ್ಟಿದೆ ಎಂದಿದ್ದಾರೆ.
ಸ್ವಾಭಿಮಾನ ಅಂತ ಹೇಳ್ತಾರೆ. ನಾನು ನಾಮಪತ್ರ ಸಲ್ಲಿಸೋ ದಿನ ಲಕ್ಷಕ್ಕಿಂತಲೂ ಅಧಿಕ ಜನರಿದ್ದರು. ನನಗೆ ಸೇರಿದ್ದ ಜನರಿಗೆ ಹಣ ಕೊಟ್ಟು ಕರೆಸಿದ್ದಾರೆ ಎನ್ನುತ್ತಾರೆ. ಸ್ವಾಭಿಮಾನಕ್ಕೆ ಮತ ಹಾಕಿ ಅಂತಾರೆ. ವ್ಯಕ್ತಿ ಯಾವಾಗ್ಲೂ ಒಂದಕ್ಕೆ ಸ್ಟಿಕಾನ್ ಆಗಿರಬೇಕು ಎಂದು ಸುಮಲತಾ ಹಾಗೂ ಅವರ ಬೆಂಬಲಿಗರಿಗೆ ನಿಖಿಲ್‌ ಕುಮಾರಸ್ವಾಮಿ ಟಾಂಗ್‌ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com