28 ವರ್ಷದ ಕಾನೂನು ಪದವೀಧರ ತೇಜಸ್ವಿ ಸೂರ್ಯ ಬಿಜೆಪಿಯ ಹೊಸ ಅಭ್ಯರ್ಥಿಯಾಗಿದ್ದು ಹೇಗೆ?

28 ವರ್ಷದ ಯುವ ಬಿಜೆಪಿ ಕಾರ್ಯಕರ್ತ, ಕಾನೂನು ಪದವೀಧರ ತೇಜಸ್ವಿ ಸೂರ್ಯ ಅವರನ್ನು ...
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
ಬೆಂಗಳೂರು: 28 ವರ್ಷದ ಯುವ ಬಿಜೆಪಿ ಕಾರ್ಯಕರ್ತ, ಕಾನೂನು ಪದವೀಧರ ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಮೂಲಕ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿತು.
1991ರಿಂದ ಈ ಕ್ಷೇತ್ರ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಕೈಯಲ್ಲಿತ್ತು. 6 ಬಾರಿ ಅವರು ಸಂಸದರಾಗಿದ್ದರು. ಈ ಬಾರಿ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೇ ಸಿಗುತ್ತದೆ ಎಂದು ಹೇಳಲಾಗಿತ್ತು. ರಾಜ್ಯ ಬಿಜೆಪಿ ಅವರ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿತ್ತು ಕೂಡ. ಆದರೆ ಕೊನೆ ವೇಳೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿದರು.
ತೇಜಸ್ವಿ ಸೂರ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರ ಎದುರು ಸೆಣಸಬೇಕಿದೆ. ಬಿ ಕೆ ಹರಿಪ್ರಸಾದ್ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 1996ರಲ್ಲಿ ಅನಂತ್ ಕುಮಾರ್ ಎದುರು ಸ್ಪರ್ಧಿಸಿ ಸೋತಿದ್ದರು.
ತೇಜಸ್ವಿನಿ ಅನಂತ್ ಕುಮಾರ್ ಅವರ ಅಭ್ಯರ್ಥಿಯನ್ನಾಗಿ ಆರಿಸಲು ಕೇಂದ್ರ ನಾಯಕರ ಮನವೊಲಿಸುವಲ್ಲಿ ರಾಜ್ಯದ ಬಿಜೆಪಿ ಮುಖಂಡರು ವಿಫಲವಾದದ್ದು.
ತೇಜಸ್ವಿ ಸೂರ್ಯ ಅವರ ವಾಕ್ಚಾತುರ್ಯ ಮತ್ತು ತೀವ್ರ ಬಲಪಂಥೀಯವಾದ ಬಿಜೆಪಿಯ ಕೇಂದ್ರ ನಾಯಕತ್ವವನ್ನು ಜನತೆಯ ಮುಂದೆ ಸಮರ್ಥವಾಗಿ ಇಡಲು ಅಮಿತ್ ಶಾ ಅವರು ವೈಯಕ್ತಿಕವಾಗಿ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿಕೊಂಡಿರಬಹುದು.
ತೇಜಸ್ವಿನಿ ಅನಂತ್ ಕುಮಾರ್ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆ ಕೆಲಸದಲ್ಲಿ ಅವರಿಗೆ ಖುಷಿಯಿದೆ, ತೃಪ್ತಿಯಿದೆ, ಹೀಗಾಗಿ ರಾಜಕೀಯಕ್ಕೆ ಬರುವ ಅನಿವಾರ್ಯತೆಯೇನು ಅವರಿಗಿಲ್ಲ. ಹೀಗಾಗಿ ಅವರಿಗೆ ರಾಜಕೀಯ ಹೊಂದಿಕೆಯಾಗುತ್ತದೆಯೇ ಎಂಬುದು ಇನ್ನೊಂದು ಕಾರಣ ಕೂಡ ಅವರಿಗೆ ಟಿಕೆಟ್ ಕೈತಪ್ಪಲು ಕಾರಣವಾಗಿರಬಹುದು ಎಂದು ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದವರಲ್ಲಿ ಇದ್ದ ಬಿಜೆಪಿ ಪದಾಧಿಕಾರಿಯೊಬ್ಬರು ಹೇಳುತ್ತಾರೆ.
ಆದರೆ ಕುಟುಂಬ ರಾಜಕಾರಣ ಎಂಬ ಕೆಟ್ಟ ಹೆಸರು ಬರುವುದು ಬೇಡವೆಂದು ತೇಜಸ್ವಿನಿಯವರನ್ನು ಬಿಜೆಪಿ ಕೈಬಿಟ್ಟರಬಹುದು ಎಂದು ಹೇಳುವುಕ್ಕೆ ಅರ್ಥವಿಲ್ಲ, ಏಕೆಂದರೆ ತೇಜಸ್ವಿ ಸೂರ್ಯ ಬಸವನಗುಡಿ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸೋದರನ ಮಗ.
28 ವರ್ಷದ ತರುಣ ತೇಜಸ್ವಿ ಸೂರ್ಯ ಆಗಿರುವುದರಿಂದ ಅವರಲ್ಲಿ ಇನ್ನು ಮೂರು ದಶಕಗಳ ಕಾಲ ಬಿಜೆಪಿಯನ್ನು ಮುನ್ನಡೆಸುವ ಶಕ್ತಿಯನ್ನು ಬಿಜೆಪಿ ಹೈಕಮಾಂಡ್ ನೋಡಿರಬಹುದು.
ತೇಜಸ್ವಿ ಸೂರ್ಯಗೆ ಆರಂಭದಲ್ಲಿಯೇ ಸುರಕ್ಷಿತ ಕ್ಷೇತ್ರ ಸಿಕ್ಕಿದೆ ಎನ್ನಬಹುದು. ಬೆಂಗಳೂರು ದಕ್ಷಿಣ ಬಿಜೆಪಿಯ ಸುರಕ್ಷಿತ ಕ್ಷೇತ್ರ, ಇಲ್ಲಿ ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ನಿಂತುಕೊಂಡರೂ ಸಹ ನಿಶ್ಚಿತದ ಮತಗಳು ಬಂದೇ ಬರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com