ಮಂಡ್ಯ: ಚುನಾವಣೋತ್ತರ ಸಮೀಕ್ಷೆ ವರದಿ ನಂತರ ಬೆಟ್ಟಿಂಗ್ ನಲ್ಲೂ ಬದಲಾವಣೆ

ಲೋಕಸಭಾ ಚುನಾವಣೆ ಆರಂಭದಿಂದಲೂ ರಾಷ್ಟ್ರಮಟ್ಟದಲ್ಲಿ ತೀವ್ರ ಸುದ್ದಿಯಾಗುತ್ತಿದ್ದ ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ ತಾರಕಕ್ಕೇರಿದೆ.
ಸುಮಲತಾ ಅಂಬರೀಷ್, ನಿಖಿಲ್ ಕುಮಾರಸ್ವಾಮಿ
ಸುಮಲತಾ ಅಂಬರೀಷ್, ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಲೋಕಸಭಾ ಚುನಾವಣೆ ಆರಂಭದಿಂದಲೂ ರಾಷ್ಟ್ರಮಟ್ಟದಲ್ಲಿ ತೀವ್ರ ಸುದ್ದಿಯಾಗುತ್ತಿದ್ದ ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ ತಾರಕಕ್ಕೇರಿದೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ  ಈ ಕ್ಷೇತ್ರದಲ್ಲಿ ನೇರಾ ಹಣಾಹಣಿ ಏರ್ಪಟ್ಟಿದ್ದರಿಂದ ಬೆಟ್ಟಿಂಗ್  ಕೂಡಾ ಜೋರಾಗಿ ನಡೆಯುತ್ತಿದೆ. ಚುನಾವಣೆ ನಂತರ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್ ನಡೆಸುತ್ತಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ನಂತರ ಬೆಟ್ಟಿಂಗ್ ನಲ್ಲೂ ಬದಲಾವಣೆಯಾಗಿದೆ. ಚುನಾವಣೆ ನಂತರ 3 ಸಾವಿರದಿಂದ 30 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಕೆಲವರು ತಮ್ಮ ಕೃಷಿ ಭೂಮಿ, ಪ್ಲಾಟ್, ಮನೆ, ದ್ವಿಚಕ್ರವಾಹನ, ಕಾರುಗಳ ಮೇಲೆಯೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಆರಂಭದಲ್ಲಿ ಕೆಲವರು  ಸುಮಲತಾ ಪರ 1 ಲಕ್ಷ ಕಟ್ಟುತ್ತಿದ್ದರೆ ನಿಖಿಲ್ ಪರ 80, 70 ಸಾವಿರ ಕಟ್ಟುತ್ತಿದ್ದರು. ಈಗ ಬೆಟ್ಟಿಂಗ್ ನಲ್ಲೂ ಬದಲಾವಣೆಯಾಗಿದೆ.  ಸುಮಲತಾ ಪರ 1 ಲಕ್ಷ ಕಟ್ಟಿದ್ದರೆ, ನಿಖಿಲ್ ಪರವಾಗಿ 1 ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.  

ಬೆಟ್ಟಿಂಗ್ ಮಾಡದಂತೆ ಸುಮಲತಾ ಅಂಬರೀಷ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಆದರೂ , ಬೆಟ್ಟಿಂಗ್ ಮಾತ್ರ ನಿಂತಿಲ್ಲ . ತಮ್ಮ ನೆಚ್ಚಿನ ನಾಯಕರ ಗೆಲುವಿಗಾಗಿ ಪ್ರಾರ್ಥಿಸಿ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಶ್ರೀರಂಗಪಟ್ಟದಲ್ಲಿ ನಿನ್ನೆ ಸುಮಲತಾ ಅಂಬರೀಷ್ ಪರ ಅಭಿಮಾನಿಗಳು ಪೂಜೆ ಸಲ್ಲಿಸಿದ್ದರು. ಇಂದು ನಿಖಿಲ್ ಪರ ಅಭಿಮಾನಿಗಳು  ಮದ್ದೂರಿನ ಉಕ್ಕಡ  ಅಹಲ್ಯಾದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com