ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್

ಮೇ 29ರಂದು ನಟ, ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಅಂದು ಮಂಡ್ಯದಲ್ಲಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸ್ವಾಭಿಮಾನದ ವಿಜಯೋತ್ಸವ ಆಚರಿಸಲಾಗುವುದು ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

Published: 24th May 2019 12:00 PM  |   Last Updated: 24th May 2019 03:50 AM   |  A+A-


Sumalatha Ambareesh

ಸುಮಲತಾ ಅಂಬರೀಷ್

Posted By : ABN ABN
Source : UNI
ಬೆಂಗಳೂರು: ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲಿಯೇ ಸಂಸತ್ ಮೆಟ್ಟಿಲೇರುತ್ತಿರುವ ನಟಿ ಸುಮಲತಾ, “ಸ್ವತಂತ್ರ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮಂಡ್ಯದ ಜನತೆ ಸ್ವಾಭಿಮಾನಕ್ಕೆ ತಲೆಬಾಗಿದ್ದಾರೆ. ಇತಿಹಾಸ ನಿರ್ಮಿಸಿರುವುದು ಕ್ಷೇತ್ರದ ಜನರೇ ಹೊರತು ನಾನಲ್ಲ” ಎಂದು ಹೇಳಿದ್ದಾರೆ.

ಮಾಜಿ ಸಚಿವ ದಿವಂಗತ ಅಂಬರೀಶ್ ಅವರ 6ನೇ ಪುಣ್ಯತಿಥಿ ಅಂಗವಾಗಿ ಕಂಠೀರಣ ಸ್ಟುಡಿಯೋದಲ್ಲಿನ ಅವರ ಸಮಾಧಿಯ ದರ್ಶನ ಪಡೆದ ಸುಮಲತಾ,ಲೋಕಸಭಾ ಕ್ಷೇತ್ರದ ಗೆಲುವಿನ ಪ್ರಮಾಣ ಪತ್ರವನ್ನು ಸಮಾಧಿಗೆ ಅರ್ಪಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
 
ರಾಜ್ಯ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದು ಇತಿಹಾಸ ನಿರ್ಮಿಸಿದ ಮೊದಲ ಮಹಿಳೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಇತಿಹಾಸ ನಿರ್ಮಿಸಿದ್ದು ಆತ್ಮಾಭಿಮಾನ ಹಾಗೂ ಸ್ವಾಭಿಮಾನಕ್ಕೆ ತಲೆಬಾಗಿದ ಮಂಡ್ಯದ ಜನರೇ ಹೊರತು ನಾನಲ್ಲ.ಅವರ ಪ್ರೀತಿ, ವಿಶ್ವಾಸದ ಋಣ ತೀರಿಸುವ ಜವಾಬ್ದಾರಿ ಹಾಗೂ ಕ್ಷೇತ್ರದ ಪ್ರಗತಿಗೆ ಶ್ರಮಿಸಬೇಕಾದ ಹೊಣೆ ನನ್ನ ಮೇಲಿದೆ” ಎಂದು ಹೇಳಿದರು.
 
“ಜೆಡಿಎಸ್ ನಾಯಕರು ನನ್ನನ್ನು ಮನಬಂದಂತೆ ಹಂಗಿಸಿದರು.  ಕಾಂಗ್ರೆಸ್ ‘ಕೈ’ ಹಿಡಿಯಲಿಲ್ಲ. ಆದಾಗ್ಯೂ ಮಂಡ್ಯ ಜನರ ಮೇಲೆ ನನಗೆ ಅದಮ್ಯ ವಿಶ್ವಾಸವಿತ್ತು.  ಅಂದುಕೊಂಡಂತೆಯೇ ಫಲಿತಾಂಶ ಲಭ್ಯವಾಗಿದೆ. ಜಿಲ್ಲೆಯಾದ್ಯಂತ ಶೇ 50ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ ಎಂಬ ಅಂಕಿ ಅಂಶ ತಿಳಿದಾಗಲೇ ಗೆಲವು ಖಚಿತವಾಗಿತ್ತು” ಎಂದು ಹೇಳಿದರು.

ಮೇ 29ರಂದು ನಟ, ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ.  ಅಂದು ಮಂಡ್ಯದಲ್ಲಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸ್ವಾಭಿಮಾನದ ವಿಜಯೋತ್ಸವ ಆಚರಿಸಲಾಗುವುದು. ನಟ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ತಮ್ಮನ್ನು ಬೆಂಬಲಿಸಿದ ಎಲ್ಲರೂ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ  ಎಂದು ಸುಮಲತಾ ಅಂಬರೀಶ್ ತಿಳಿಸಿದರು.
 
ಯಾವ ಪಕ್ಷಕ್ಕೆ ತಮ್ಮ ಬೆಂಬಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು, ಮಂಡ್ಯದಲ್ಲಿ ಸುಮಲತಾ ಗೆದ್ದರೆ ರಾಜ್ಯ ಸರ್ಕಾರದ ಪತನ ಖಚಿತ ಎಂಬ ಮಾತು ಕೇಳಿಬರುತ್ತಿತ್ತಲ್ಲ ಎಂಬ ಪ್ರಶ್ನೆಗೆ “ಸರ್ಕಾರ ಬೀಳಲು ಮಂಡ್ಯ ಫಲಿತಾಂಶ ಕಾರಣ ಎಂಬ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸರ್ಕಾರದ ಪತನ ಕುರಿತಾದ ಮಾತುಗಳು ಚುನಾವಣೆಗೂ ಮುನ್ನವೇ ಕೇಳಿಬಂದಿತ್ತು.  ಹೀಗಾಗಿ ನನಗೂ ಅದಕ್ಕೂ ಸಂಬಂಧವಿಲ್ಲ” ಎಂದರು.
Stay up to date on all the latest ಕರ್ನಾಟಕ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp