ಗ್ಯಾಂಗ್ಟಕ್: ಸತತ ಐದನೇ ಬಾರಿ ಚುನಾವಣೆ ಗೆದ್ದಿರುವ ಪವನ್ ಚಾಮ್ಲಿಂಗ್, ಸಿಕ್ಕಿಂನ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಿರುವ ಪವನ್, ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್‌ನ 22 ಶಾಸಕರು ಒಮ್ಮತದಿಂದ ಪವನ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. 1994ರ ಡಿ.12ರಿಂದ ಅಧಿಕಾರಕ್ಕೆ ಬಂದ ಪವನ್ ಎರಡು ದಶಕಗಳ ಕಾಲ ಅಡ್ಡಿಯಿಲ್ಲದೆ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.
Advertisement