
ರಾಂಪುರ: 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಗೆಲವಿಗೆ ಮುಸ್ಲಿಮರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಮೂಲಕ ಮುಸ್ಲಿಮರು ತಮ್ಮದು 'ಜಾತ್ಯತೀತ' ಸಮುದಾಯ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ. ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಲು ಮುಸ್ಲಿಂ ಯೋಧರು ಕಾರಣ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಎಸ್ಪಿ ನಾಯಕ ಅಜಂ ಖಾನ್. ಚುನಾವಣೆಯ ಸಮಯದಲ್ಲಿ ಮೋದಿ ವಿರುದ್ಧ ಅನೇಕ ಬಾರಿ ತಲೆಹರಟೆ, ಪ್ರಚೋದನಕಾರಿ ಮಾತುಗಳನ್ನಾಡಿ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ಅಜಂ ಖಾನ್‌ಗೆ ಫಲಿತಾಂಶ ಬಂದ ನಂತರ ಒಮ್ಮಿಂದೊಮ್ಮೆಲೇ 'ಜ್ಞಾನೋದಯ'ವಾಗಿದೆ.
ಸೋಮವಾರ ಉತ್ತರಪ್ರದೇಶದಲ್ಲಿ ಮಾತನಾಡಿದ ಖಾನ್, ಚುನಾವಣೆಯಲ್ಲಿ ನರೇಂದ್ರ ಮೋದಿಯವರ ವಿಜಯವು ಭಾರತೀಯ ಮುಸ್ಲಿಮರು ಜಾತ್ಯತೀತವಾದಿಗಳು ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.
Advertisement