ಹೈದರಾಬಾದ್: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಜೊತೆ ತಮ್ಮ ಪಕ್ಷ ಸ್ನೇಹದಿಂದ ಇರುವುದಾಗಿ ಟಿಆರ್‌ಎಸ್ ಮುಖಂಡ ಕೆ.ಟಿ. ರಾಮರಾವ್ ತಿಳಿಸಿದ್ದಾರೆ. ನೂತನ ರಾಜ್ಯ ತೆಲಂಗಾಣದಲ್ಲಿ ಟಿಆರ್‌ಎಸ್ ಅಧಿಕಾರ ಗದ್ದುಗೆ ಹಿಡಿಯಲಿದ್ದು, ಪಕ್ಷದ ಅಧ್ಯಕ್ಷ ಚಂದ್ರಶೇಖರ್ ರಾವ್ ಮಗನಾದ ರಾಮರಾವ್, ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ತಮ್ಮ ನೇತೃತ್ವದ ಹೊಸ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಹೊಂದಲಿದೆ. ಅಂತೆಯೇ, ಕೇಂದ್ರ ಸರ್ಕಾರದಿಂದ ತಮ್ಮ ಸರ್ಕಾರ ಉತ್ತಮ ಬೆಂಬಲ ನಿರೀಕ್ಷಿಸುತ್ತದೆ ಎಂದರು.
ಚಂದ್ರಬಾಬು ಜತೆ ಸಂಘರ್ಷವಿಲ್ಲ: ಸೀಮಾಂಧ್ರದಲ್ಲಿ ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿರುವ ಚಂದ್ರಬಾಬು ನಾಯ್ಡು ನೇತೃತ್ವದ ಹೊಸ ಸರ್ಕಾರದೊಂದಿಗೆ ಯಾವುದೇ ಸಂಘರ್ಷ ಮಾಡುವುದಿಲ್ಲ ಎಂದು ರಾಮರಾವ್ ಹೇಳಿದರು.
Advertisement