ನವದೆಹಲಿ: ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪಾಕಿಸ್ತಾನ ಸದಾ ಸಿದ್ಧವಿರುತ್ತದೆ ಎಂದು ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ. ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಭಾರತದ ನಿಯೋಜಿತ ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಮಂತ್ರಣ ನೀಡಿದ್ದಾರೆ ಎಂದ ಬಾಸಿತ್, 'ಎರಡೂ ದೇಶಗಳ ನಡುವಿನ ವಿವಾದಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೋ ಅಥವಾ ಯುದ್ಧದ ಮೂಲಕ ಕೊನೆಗಾಣಿಸಬೇಕೋ' ಎನ್ನುವುದನ್ನು ಉಭಯ ದೇಶಗಳ ಸರ್ಕಾರಗಳು ಯೋಚಿಸಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
Advertisement