ನವದೆಹಲಿ: ತಮ್ಮ ಪ್ರತಿಸ್ಪರ್ಧಿಗೆ ವಿರುದ್ಧವಾಗಿ ಸಮಾನ ನಾಮಧಾರಿ(ಪ್ರತಿಸ್ಪರ್ಧಿಯ ಹೆಸರನ್ನೇ ಹೊಂದಿರುವವರು)ಗಳನ್ನು ಕಣಕ್ಕಿಳಿಸುವುದು ರಾಜಕೀಯದ ಹಳೆಯ ತಂತ್ರಗಾರಿಕೆ. ಇದು ಪ್ರತಿಸ್ಪರ್ಧಿಯ ಮತ ಹಂಚಿಕೆಯನ್ನು ಕಡಿಮೆಗೊಳಿಸುವುದಂತೂ ಸತ್ಯ. ಈ ಬಾರಿ ಇಂತಹ ತಂತ್ರಕ್ಕೆ ಬಲಿಯಾದವರು ಮಹಾಸಮುಂದ್‌ನ ಬಿಜೆಪಿ ಅಭ್ಯರ್ಥಿ ಚಂದೂಲಾಲ್ ಸಾಹು. ಆದರೆ, ಅದೃಷ್ಟವಶಾತ್ ಈ ಸಮಾನ ನಾಮಧಾರಿಗಳ ನಡುವೆಯೂ ಚಂದೂಲಾಲ್ ಗೆಲವಿನ ನಗೆ ಬೀರಿದ್ದಾರೆ.
10 ಮಂದಿಗೆ ಒಂದೇ ಹೆಸರು: ಕಾಂಗ್ರೆಸ್ ಅಭ್ಯರ್ಥಿ ಅಜಿತ್ ಜೋಗಿ ವಿರುದ್ಧ ಬಿಜೆಪಿಯಿಂದ ಚಂದೂಲಾಲ್ ಕಣಕ್ಕಿಳಿದಿದ್ದರು. ಆದರೆ, ಅವರಿಗೆ ಆಘಾತ ಕಾದಿತ್ತು. ಏಕೆಂದರೆ, ತನ್ನದೇ ಹೆಸರಿನ 10 ಮಂದಿ ಕಣದಲ್ಲಿದ್ದರು. ಇದು ಕಾಕತಾಳೀಯವಾಗಿರಲು ಸಾಧ್ಯವೇ ಇಲ್ಲ. ಆದರೂ, ಕೊನೆಗೆ ಜೋಗಿ ವಿರುದ್ಧ ಕೇವಲ 1,217 ಮತಗಳ ಅಂತರದಿಂದ ಗೆದ್ದರು.
ಉಳಿದ 9 ಮಂದಿ ಚಂದೂಲಾಲ್‌ಗಳಿಂದಾಗಿ ಬಿಜೆಪಿ ಅಭ್ಯರ್ಥಿ ಚಂದೂಲಾಲ್ ಗೆಲವಿನ ಅಂತರ ಕಡಿಮೆಯಾಯಿತು. ಎಲ್ಲ 9 ಮಂದಿ ಚಂದೂಲಾಲ್‌ಗಳಿಗೆ ಸಿಕ್ಕ ಒಟ್ಟು ಮತ 70 ಸಾವಿರ. ಏನೇ ಆಗಲಿ, ತಮಗೊಲಿಯಬೇಕಾಗಿದ್ದ ವಿಜಯಲಕ್ಷ್ಮಿಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಸಮಾಧಾನಪಟ್ಟುಕೊಂಡರು.
ಚಂದೂಲಾಲ್‌ಗಳ ಫಲಿತಾಂಶ ನೋಡಿ
- ಚಂದೂಲಾಲ್ ಸಾಹು (ಬಿಜೆಪಿ)- 5,03,514
- ಚಂದೂಲಾಲ್ ಸಾಹು (ಪಕ್ಷೇತರ)- 20255
- ಚಂದೂಲಾಲ್ ಸಾಹು (ಪಕ್ಷೇತರ)- 12,308
- ಚಂದೂಲಾಲ್ ಸಾಹು (ಪಕ್ಷೇತರ)- 10,797
- ಚಂದೂಲಾಲ್ ಸಾಹು (ಪಕ್ಷೇತರ)- 7,091
- ಚಂದೂಲಾಲ್ ಸಾಹು (ಪಕ್ಷೇತರ)- 5,497
- ಚಂದೂರಾಮ್ ಸಾಹು (ಪಕ್ಷೇತರ)- 3,732
- ಚಂದೂಲಾಲ್ ಸಾಹು (ಪಕ್ಷೇತರ)- 2,268
- ಚಂದೂರಾಮ್ ಸಾಹು (ಪಕ್ಷೇತರ)- 2,167
- ಚಂದೂರಾಮ್ ಸಾಹು (ಪಕ್ಷೇತರ)- 1,628
Advertisement