
ನವದೆಹಲಿ: ಎನ್‌ಡಿಎ ಸರ್ಕಾರ ರಚಿಸುವುದಾಗಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಸರ್ಕಾರ ರಚನೆಗೆ ಆಮಂತ್ರಣ ನೀಡುವಾಗ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪರಿಗಣಿಸಿರುವುದು ಬಿಜೆಪಿಯ ಸಂಖ್ಯಾಬಲವನ್ನು ಮಾತ್ರ. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸದಸ್ಯರ ಅಗತ್ಯವಿದ್ದು, ಬಿಜೆಪಿ 282 ಸದಸ್ಯರನ್ನು ಹೊಂದಿದೆ. ಹೀಗಾಗಿ ರಾಷ್ಟ್ರಪತಿಗಳು ಬಿಜೆಪಿ ಸಂಖ್ಯಾಬಲವನ್ನು ಮಾತ್ರ ಪರಿಗಣಿಸಿದ್ದಾರೆ.
ಮಧ್ಯಾಹ್ನ 3.15ಕ್ಕೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದ ನರೇಂದ್ರ ಮೋದಿ ಅವರಿಗೆ ಪ್ರಣಬ್ ಸರ್ಕಾರ ರಚನೆಗೆ ಆಹ್ವಾನ ನೀಡುವ ಪತ್ರ ಹಸ್ತಾಂತರಿಸಿದರು. ಅದರಲ್ಲಿ 'ಬಿಜೆಪಿ ಸಂಸದೀಯ ಪಕ್ಷದ ನಾಯಕ' ಎಂದೇ ನಮೂದಿಸಲಾಗಿದೆ.
ಪ್ರಣಬ್ ಪತ್ರದಲ್ಲೇನಿದೆ?
'ಶ್ರೀ ನರೇಂದ್ರ ಮೋದಿಜಿ, ಹಾರ್ದಿಕ ಅಭಿನಂದನೆಗಳು. ನಿಮ್ಮನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಲಿಖಿತವಾಗಿ ತಿಳಿಸಿದ್ದಾರೆ. ಹೀಗಾಗಿ ಭಾರತೀಯ ಸಂವಿಧಾನದ 75ನೇ ವಿಧಿಯ ಉಪವಿಧಿ 1ರ ಪ್ರಕಾರ ನಿಮ್ಮನ್ನು ಭಾರತದ ಪ್ರಧಾನಿಯಾಗಿ ನೇಮಕ ಮಾಡಿದ್ದೇನೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಸಚಿವ ಸಂಪುಟದ ಇತರ ಸದಸ್ಯರ ಯಾದಿಯನ್ನು ನನಗೆ ನೀಡುವಂತೆ ಸಲಹೆ ಮಾಡುತ್ತೇನೆ'.
Advertisement