ಸಂಪುಟ ಸಭೆಯಲ್ಲಿ ಅಜಿತ್ ಪವಾರ್ ಪಕ್ಕದಲ್ಲಿ ಕೂತರೆ ವಾಂತಿ ಬರುವಂತಾಗುತ್ತದೆ: ಶಿವಸೇನೆ ಸಚಿವ ತಾನಾಜಿ ಸಾವಂತ್

ಎನ್ ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ಶಾರೀರಿಕ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು
ತಾನಾಜಿ ಸಾವಂತ್
ತಾನಾಜಿ ಸಾವಂತ್
Updated on

ಮುಂಬಯಿ: ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿವೆ, ಆದರೆ ಮಹಾಮೈತ್ರಿಕೂಟದಲ್ಲಿನ ಬಿರುಕು ಪದೇ ಪದೇ ಗೋಚರಿಸುತ್ತಿದೆ. ಇದಕ್ಕೆ ಬೆಂಬಲ ನೀಡುವಂತೆ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ,

ಎನ್ ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ಶಾರೀರಿಕ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು ಎಂದು ಸಾವಂತ್ ಹೇಳಿದ್ದಾರೆ. ಜೀವನದಲ್ಲಿ ನಾನೆಂದೂ ಎನ್ ಸಿಪಿ ಜತೆಗೆ ಇರಲಿಲ್ಲ. ನಾವು ಅಕ್ಕಪಕ್ಕ ಕುಳಿತೆವು. ಆದರೆ ಹೊರಬಂದ ಬಳಿಕ ವಾಂತಿ ಬರುವಂತಾಯಿತು ಎಂದು ವಿವರಿಸಿದ್ದಾರೆ. ನಾನು ಕಟ್ಟಾ ಶಿವಸೇನೆಯ ಸೈನಿಕ. ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ನಾನು ಜೀವನದಲ್ಲಿ ಎಂದೂ ಸನಿಹದಲ್ಲಿ ಇರಲಿಲ್ಲ. ವಿದ್ಯಾರ್ಥಿ ಜೀವನದಿಂದಲೂ ಅಂಥ ಪರಿಸ್ಥಿತಿ ಬರಲಿಲ್ಲ. ಇದು ವಾಸ್ತವ. ಇಂದು ಕೂಡಾ ಸಂಪುಟ ಸಭೆಯಲ್ಲಿ ನಾನು ಅವರ ಪಕ್ಕ ಕುಳಿತರೆ ಹೊರಬಂದ ಬಳಿಕ ವಾಂತಿ ಮಾಡಿಕೊಳ್ಳುವಂತಾಗುತ್ತದೆ. ಈ ಹೇಳಿಕೆಗೆ ನಾನು ಬದ್ಧ ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು.

ಆದರೆ ಎನ್ ಸಿಪಿ ನಾಯಕರು ಇದಕ್ಕೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ತಾನಾಜಿ ಸಾವಂತ್ ಅವರ ವಾಂತಿಗೆ ಕಾರಣ ಏನು ಗೊತ್ತಿಲ್ಲ. ತಾನಾಜಿ ಸಾವಂತ್ ಆರೋಗ್ಯ ಸಚಿವರು. ಬಹುಶಃ ಆರೋಗ್ಯ ಪರಿಸ್ಥಿತಿ ಅದಕ್ಕೆ ಕಾರಣವಾಗಿರಬೇಕು. ಆದರೆ ಮಹಾಯುತಿಯಲ್ಲಿ ಇದ್ದುಕೊಂಡು, ಅವರು ವಾಂತಿ ಮಾಡಿಕೊಳ್ಳುತ್ತಾರೆ ಎಂದಾದರೆ, ಅದಕ್ಕೆ ಕಾರಣ ಏನು ಎಂದು ಏಕನಾಥ್ ಶಿಂಧೆಯವರೇ ಹೇಳಬೇಕು" ಎಂದು ಎನ್ ಸಿಪಿ ಶಾಸಕ ಅಮೋಲ್ ಮಿಟ್ಕರಿ ಹೇಳಿದ್ದಾರೆ.

ತಾನಾಜಿ ಸಾವಂತ್
ಮಹಾರಾಷ್ಟ್ರ MLC ಚುನಾವಣೆ: BJP ಅಭ್ಯರ್ಥಿಯನ್ನು ಸೋಲಿಸಿದ ಉದ್ಧವ್ ಬಣದ ಶಿವಸೇನೆ ನಾಯಕ ಅನಿಲ್ ಪರಬ್!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com