ಗುಲ್ಬರ್ಗದಿಂದ ಬಿ.ಜಿ. ಜವಳಿ, ರಾಯಚೂರಿನಿಂದ ವೆಂಕಟೇಶ್ ನಾಯ್ಕ್, ಕೊಪ್ಪಳದಿಂದ ಬಸವರಾಜ್‌ಪಾಟೀಲ್ ಅನ್ವರಿ, ಬಳ್ಳಾರಿಯಿಂದ ಬಸವರಾಜೇಶ್ವರಿ, ದಾವಣಗೆರೆಯಿಂದ ಚನ್ನಯ್ಯ ಒಡೆಯರ್, ಚಿತ್ರದುರ್ಗದಿಂದ ಸಿ.ಪಿ. ಮೂಡಲಗಿರಿಯಪ್ಪ, ಚಿಕ್ಕಬಳ್ಳಾಪುರದಿಂದ ವಿ. ಕೃಷ್ಣರಾವ್, ಕೋಲಾರದಿಂದ (ಎಸ್‌ಸಿ) ಕೆ.ಎಚ್. ಮುನಿಯಪ್ಪ, ಕನಕಪುರದಿಂದ ಎಂ.ವಿ.ಚಂದ್ರಶೇಖರ ಮೂರ್ತಿ, ಬೆಂಗಳೂರು ಉತ್ತರದಿಂದ ಸಿ.ಕೆ. ಜಾಫರ್ ಷರೀಫ್, ಮಂಡ್ಯದಿಂದ ಜಿ. ಮಾದೇಗೌಡ, ಚಾಮರಾಜನಗರದಿಂದ (ಎಸ್‌ಸಿ) ವಿ. ಶ್ರೀನಿವಾಸ ಪ್ರಸಾದ್, ಮೈಸೂರಿನಿಂದ ಚಂದ್ರಪ್ರಭಾ ಅರಸ್, ಉಡುಪಿಯಿಂದ ಆಸ್ಕರ್ ಫರ್ನಾಂಡೀಸ್, ಚಿಕ್ಕಮಗಳೂರಿನಿಂದ ಡಿ.ಕೆ. ತಾರಾದೇವಿ, ಶಿವಮೊಗ್ಗದಿಂದ ಕೆ.ಜಿ. ಶಿವಪ್ಪ, ಕೆನರಾದಿಂದ ದೇವರಾಯ ನಾಯ್ಕ್, ಧಾರವಾಡ ದಕ್ಷಿಣದಿಂದ ಬಿ.ಎಂ. ಮುಜಾಹಿದ್, ಧಾರವಾಡ ಉತ್ತರದಿಂದ ಡಿ.ಕೆ. ನಾಯ್ಕರ್, ಬೆಳಗಾವಿಯಿಂದ ಷಣ್ಮುಖಪ್ಪ ಬಸಪ್ಪ ಸಿದ್ನಾಳ್, ಚಿಕ್ಕೋಡಿಯಿಂದ (ಎಸ್‌ಸಿ) ಬಿ. ಶಂಕರಾನಂದ, ಬಾಗಲಕೋಟೆಯಿಂದ ಭೀಮಪ್ಪ ನ್ಯಾಮಗೌಡರ್, ಬಿಜಾಪುರದಿಂದ ಬಸಗೊಂಡಪ್ಪ ಕಡಪ್ಪ ಅವರು ಕಾಂಗ್ರೆಸ್‌ನಿಂದ ಗೆಲವು ಸಾಧಿಸಿದ್ದರು. ವೆಂಕಟೇಶ್‌ನಾಯಕ್ 1,22,458, ಬಿ. ಶಂಕರಾನಂದ್ 1,12,616, ವಿ. ಕೃಷ್ಣರಾವ್ 1,03,371 ಮತಗಳ ಅಂತರದ ಜಯವೇ ಈ ಚುನಾವಣೆಯಲ್ಲಿ ಅಧಿಕ. ಚಿಕ್ಕಬಳ್ಳಾಪುರದಲ್ಲಿ ವಿ. ಕೃಷ್ಣರಾವ್, ಚಿತ್ರದುರ್ಗದಲ್ಲಿ ಮೂಡಲಗಿರಿಯಪ್ಪ ಅವರು ಮಾತ್ರ ಮೂರು ಲಕ್ಷಕ್ಕೂ ಅಧಿಕ ಮತ ಪಡೆದಿದ್ದರು.