ಕನ್ನಡ ಶೋ ಉದ್ದಿಮೆಯಲ್ಲಿ ಅಪ್ಪ ಮುಗಿಲಗಲ, ಮಗ ಜಗದಗಲ

ನೂಲಿನಂತೆ ಸೀರೆ ಅಮ್ಮನಂತೆ ಮಗಳು ಎಂಬ ನಾನ್ನುಡಿಯಂತೆ ಅಪ್ಪ ಮಕ್ಕಳ ಸಂಬಂಧ-ಬಾಂಧವ್ಯ ಗಳನ್ನು ಸಾರುವ ಗಾದೆಗಳು...
ಕನ್ನಡ ಶೋ ಉದ್ದಿಮೆಯಲ್ಲಿ ಅಪ್ಪ ಮುಗಿಲಗಲ, ಮಗ ಜಗದಗಲ
Updated on

ನೂಲಿನಂತೆ ಸೀರೆ ಅಮ್ಮನಂತೆ ಮಗಳು ಎಂಬ ನಾಣ್ನುಡಿಯಂತೆ ಅಪ್ಪ ಮಕ್ಕಳ ಸಂಬಂಧ-ಬಾಂಧವ್ಯಗಳನ್ನು ಸಾರುವ ಗಾದೆಗಳು ಇರುವುದು ಅತಿ ಕಡಿಮೆ ಅಲ್ಲವೇ? ಅಪ್ಪನಂತೆ ಅಥವಾ ಅಪ್ಪನಿಗಿಂತ ಎತ್ತರಕ್ಕೆ ಮಗ-ಮಗಳು ಏರಲು ಅಸಾಧ್ಯವೇ? ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಕೆ? ಎಂಬಂತೆ ಅಪ್ಪನ ಪ್ರಭಾವಳಿಯನ್ನು ಮೀರಿ ಮಕ್ಕಳಿಗೆಬೆಳೆಯಲು ಸಾಧ್ಯವೇ?

ಧೀರುಭಾಯಿ ಅಂಬಾನಿ ಉದ್ಯಮ ಲೋಕದ ದಿಗ್ಗಜ. ಸಾವಿರಾರು ಕೋಟಿಗಳ ಉದ್ದಿಮೆಯನ್ನು ಸ್ಥಾಪಿಸಿದ
ಧೀರುಭಾಯಿ ಅಂಬಾನಿಯ ಕುಡಿಗಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಬೀದಿಯಲ್ಲಿ ಕಿತ್ತಾಡಿದರೂ ಅಪ್ಪನ ಆಸ್ತಿ ಮತ್ತು ಉದ್ದಿಮೆಯನ್ನು ಮುಗಿಲೆತ್ತರಕ್ಕೆ ಬೆಳೆಸಿದವರು. ಇನ್ನುಹಿರಿಯ ಪುತ್ರನಂತೂ ಮುಗಿಲೆತ್ತರಕ್ಕೆ ಮನೆಯನ್ನು ಕಟ್ಟಿದ್ದು ಈಗ ಇತಿಹಾಸ. ಅಪ್ಪನನ್ನು ಮೀರಿಸಿದಮಕ್ಕಳಿಗೆ ಇವರು ಉತ್ತಮ ಉದಾಹರಣೆಗಳಾಗಬಹುದೇನೋ! ಹೀಗೆಯೇ ರಾಜಕಾರಣದಲ್ಲೂ ಅಪ್ಪನನ್ನು ಮೀರಿಸಿಬೆಳೆದ ಪುತ್ರರ ಮತ್ತು ಪುತ್ರಿಯರ ಉದಾಹರಣೆಗಳಿಗೂ ಕಮ್ಮಿಯೇನಿಲ್ಲ. ಜವಾಹಾರ್ ಲಾಲ್ ನೆಹರೂಅವರಿಗಿಂತಲು ಇಂದಿರಾ ಗಾಂಧಿಯವರೇ ಹೆಚ್ಚು ಜನಪ್ರಿಯ ಎಂದರೆ ತಪ್ಪಾಗಲಾರದೇನೋ! ಆದರೆ ನಮ್ಮ ಕನ್ನಡಚಿತ್ರರಂಗದಲ್ಲಿ ಈ ವಿದ್ಯಮಾನ ಅಷ್ಟೇನೂ ಯಶಸ್ವಿಯಾಗಿಲ್ಲ. ಅಂದರೆ ನಮ್ಮ ಚಿತ್ರರಂಗದ ಮಕ್ಕಳುತಮ್ಮ ಅಪ್ಪಂದಿರನ್ನು ಮೀರಿಸಿ ಪ್ರಖ್ಯಾತರಾಗಲೋ
,
ಅಥವಾ ಅವರನ್ನು ಮೀರಿಸಿದ ನಟನೆಯನ್ನು ನೀಡಲೋ
,
ತಮ್ಮ ಹೆತ್ತವನನ್ನು ಮೀರಿದ ಚಿತ್ರವೊಂದನ್ನು ನೀಡಲೋ ಸಾಧ್ಯವಾಗಿರುವುದು ಅತ್ಯಲ್ಪ ಅಥವಾಇಲ್ಲವೇ ಇಲ್ಲ ಎನ್ನಬಹುದು.
'
ಅಪ್ಪನ ದಿನಕ್ಕೆ
'
ಈ ಕಿರು ಅವಲೋಕನ!

ಕನ್ನಡ ಚಿತ್ರರಂಗದಲ್ಲಿ ಅಪ್ಪಾಜಿಯೆಂದೇ ಖ್ಯಾತಿ ಡಾ. ರಾಜಕುಮಾರ್. ಇವರ ಪ್ರಖ್ಯಾತಿ ಎಷ್ಟುಮಟ್ಟಿಗೆಂದರೆ ಇವರು ತೀರಿ ಹೋಗಿ ಒಂದು ದಶಕ ಕಳೆದ ಮೇಲೆ ಹುಟ್ಟಿದ ಮಕ್ಕಳ ಮಧ್ಯೆಯೂ ರಾಜಕುಮಾರ್ಪ್ರತೀತಿಯಲ್ಲಿದ್ದಾರೆ. ನಟನೆಯ ಯಾವ ಪ್ರಾಕಾರದಲ್ಲೂ ಮೇಲುಗೈ ಸಾಧಿಸಿದ್ದ ರಾಜಣ್ಣ ಹಿನ್ನಲೆಗಾಯಕರಾಗಿಯೂ ರಾಷ್ಟ್ರಪ್ರಶಸ್ತಿ ವಿಜೇತರು. ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾಫಾಲ್ಕೆ ಪ್ರಶಸ್ತಿ ವಿಜೇತರು ಕೂಡ. ಇವರ ಪ್ರಶಸ್ತಿಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲವಾದೀತು.ಇನ್ನು ಈ ಮೇರು ವರನಟ ಗೋಕಾಕ್ ಹೋರಾಟ ಚಳುವಳಿಗೆ ತಾರಾ ಮೆರುಗು ತಂದುಕೊಟ್ಟು ಜನರ ಮನೆಯಂಗಳಕ್ಕೆಕೊಂಡೊಯ್ದ ಶ್ರೇಯಸ್ಸಿಗು ಭಾಜನರಾದವರು. ಇಂತಹ ದೊಡ್ಡ ಆಲದ ಮರದ ನೆರಳಿನಲ್ಲಿ ಮಕ್ಕಳು ಎಷ್ಟೇಬೆಳೆದರು ಮುಸುಕಾಗುವುದು ಖಂಡಿತಾ. ತಮ್ಮ ಮೂವರೂ ಪುತ್ರರು ಚಿತ್ರರಂಗದಲ್ಲಿ ಎಷ್ಟೇ ಉನ್ನತ ಸ್ಥಾನಗಳಿಸಿದರೂ ಮೂವರ ಪ್ರಖ್ಯಾತತೆಯನ್ನು ಒಟ್ಟಿಗೆ ಸೇರಿಸಿದರೂ ಬಹುಷಃ ಅದು ರಾಜಕುಮಾರ ಪ್ರಖ್ಯಾತತೆಗೆಸರಿದೂಗುವುದಿಲ್ಲ. ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಮೂವರನ್ನೂ ಒಟ್ಟಿಗೆ ಸೇರಿಸಿದರೆಈಗಾಗಲೇ ಸುಮಾರು ೧೪೦ ಕ್ಕಿಂತಲೂ ಹೆಚ್ಚಿನ ಸಿನೆಮಾಗಳಲ್ಲಿ ನಟಿಸಿದ್ದರು ಕೂಡ, ನಟನಾ ಕೌಶಲತೆಯಲ್ಲಾಗಲೀ, ಹಿನ್ನಲೆ ಗಾಯನದಲ್ಲಾಗಲೀ, ತಮ್ಮ ಚಲನಚಿತ್ರಗಳ ವಿಷಯಗಳ ಆಯ್ಕೆಯಲ್ಲಾಗಲೀ ತಮ್ಮ 'ಅಪ್ಪ'ನಿಗೆ ಸರಿಸಾಟಿಯಾಗಲೇ ಇಲ್ಲ ಅಲ್ಲವೇ?

ಕನ್ನಡದ ಖ್ಯಾತ ನಟರನ್ನು ನೆನಪಿಸಿಕೊಂಡರೆ ಥಟ್ಟನೆ ನೆನಪಿಗೆ ಬರುವವರಲ್ಲಿ ಕಂಚಿನ ಕಂಠದಲೋಕೇಶ್ ಕೂಡ ಒಬ್ಬರು. 'ಕಾಡು', 'ಭೂತಯ್ಯನ ಮಗ ಅಯ್ಯು' ಸಂಕ್ರಾಂತಿ ಸಿನೆಮಾಗಳಲ್ಲಿನ ಲೋಕೇಶ್ ಅವರ ನಟನೆ ಅವರನ್ನು ಕನ್ನಡದ ಖ್ಯಾತ ನಟರ ಸಾಲಿಗೆಸೇರಿಸಿಬಿಟ್ಟಿದೆ. ವಿ ರವಿಚಂದ್ರನ್ ಅವರ 'ರಣಧೀರ'ನಾಗಲೀ, 'ರಾಮಾಚಾರಿ'ಯಾಗಲೀ, 'ಪ್ರೇಮಲೋಕ'ವಾಗಲೀ ಲೋಕೇಶ್ ಅವರನ್ನು ಹೊರತುಪಡಿಸಿಊಹಿಸಿಕೊಳ್ಳುವುದಕ್ಕೂ ಕಷ್ಟ. ರಿಮೇಕ್ ಆದರೂ 'ಆಸೆಗೊಬ್ಬ ಮೀಸೆಗೊಬ್ಬ' ಸಿನೆಮಾದಲ್ಲಿನ ಲೋಕೇಶ್ಹಾಸ್ಯ ನಟನೆ ಎಷ್ಟು ಮುದ ನಿಡಿದೆ ಅಲ್ಲವೇ?. ಲೋಕೇಶ್ ತಮ್ಮ ತಂದೆ ಹಾಗೂ ಸ್ವತಃ  ಕನ್ನಡಚಲನಚಿತ್ರ ನಟ ಸುಬ್ಬಯ್ಯ ನಾಯ್ಡು ಅವರನ್ನು ಮೀರಿ ಬೆಳೆದರೂ ಇಂದಿಗೆ ಚಾಲ್ತಿಯಲ್ಲಿರುವ ನಟ ಸೃಜನ್ಲೋಕೇಶ್ ಅವರಿಗೆ ತಮ್ಮ ತಂದೆ ಲೋಕೇಶ್ ಅವರ ಖ್ಯಾತಿಯನ್ನು ಮೀರಿ ಬೆಳೆಯಲು ಸಾಧ್ಯವಾಗುತ್ತಿಲ್ಲ.ತಂದ ತಂದೆಯ ಹೆಸರಿನ ನಿರ್ಮಾಣ ಸಂಸ್ಥೆಯ ಅಡಿ, ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋ ಆಂಕರ್ ಆಗಿ ಒಂದು ಮಟ್ಟದಲ್ಲಿ ಸೃಜನ್ ಜನಪ್ರಿಯತೆಪಡೆದಿದ್ದರೂ, ನಟನೆಯಲ್ಲಾಗಲೀ, ಜನಪ್ರಿಯತೆಯಲ್ಲಾಗಲೀ ತಮ್ಮ ತಂದೆಯನ್ನು ಮೀರುವುದಕ್ಕೆ ಈಜನ್ಮ ಸಾಲದೇ ಹೋಗಬಹುದೇನೋ!

ಕನ್ನಡದ ಖ್ಯಾತ ಖಳನಟರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ತೂಗುದೀಪ್ ಶ್ರೀನಿವಾಸ್.ಕನ್ನಡದ ಮನೆಮಾತಾಗಿರುವ ಚಲನಚಿತ್ರ 'ಗಂಧದ ಗುಡಿ'ಯಲ್ಲಿ ಡಾ. ರಾಜಕುಮಾರ್ ಅವರದ್ದು ಒಂದು ತೂಕವಾದರೆತೂಗುದೀಪ್ ಅವರದ್ದು ಮತ್ತೊಂದು ತೂಕವೆಂದೇ ಹೇಳಬೇಕು. ಪ್ರೇಕ್ಷಕನ ಎದೆಯಲ್ಲಿ ನಡುಕ ಹುಟ್ಟಿಸಿದವರಲ್ಲಿವಜ್ರುಮನಿ ಅವರನ್ನು ಹೊರತುಪಡಿಸಿದರೆ ಬಹುಷಃ ತೂಗುದೀಪ್ ಅವರೊಬ್ಬರೇ ಇರಬೇಕು. ಸುಮಾರು ೪೫ ಕ್ಕೂಹೆಚ್ಚು ಸಿನೆಮಾಗಳಲ್ಲಿ ನಟಿಸಿದ ತೂಗುದೀಪ್ ಅವರ ಪುತ್ರ ದರ್ಶನ್ ಕೂಡ ಇಂದಿನ ಜನಪ್ರಿಯ ನಾಯಕ ನಟ.ಆದರೆ ನಟನೆಗಿಂತಲೂ ಬೇರೆ ವಿವಾದಗಳಿಗೆ ದರ್ಶನ್ ಹೆಚ್ಚು ಪ್ರಖ್ಯಾತ. ನಾಯಕ ನಟನಾಗಿ ಸುಮಾರು ೩೦ಚಲನಚಿತ್ರಗಳ ಸಾಧನೆಯನ್ನು ಮಾಡಿರುವ  ದರ್ಶನ ತಮ್ಮತಂದೆ ತೂಗುದೀಪ್ ಶ್ರೀನಿವಾಸ್ ಜನಮಾನಸದಲ್ಲಿ ನೆಲೆಸಿರುವ ಹಾಗೆ ಸಾಧನೆ ಮಾಡುವ ಕಾಲ ಬಹಳದೂರವಿದೆ!

ನರಸಿಂಹರಾಜ್, ಬಾಲಕೃಷ್ಣ ನಂತರಾದಿನಗಳಖ್ಯಾತ ಹಾಸ್ಯನಟನ್ಯಾರು ಎಂದರೆ ದ್ವಾರಕೀಶ್ ಹೆಸರು ಉದುರುವುದು ಸಹಜ. ಕನ್ನಡ ಚಿತ್ರರಂಗದ ಕುಳ್ಳಎಂದೇ ಜನಪ್ರಿಯರಾದ ಈ ನಟ ಕನ್ನಡದ ಸಿನೆಮಾ ಪ್ರೇಕ್ಷಕರನ್ನು ಒಂದು ಕಾಲಘಟ್ಟದಲ್ಲಿ ನಗೆಗಡಲಿಗೆತಳ್ಳಿರುವುದಂತೂ ಸತ್ಯ. ಇವರ ನಟನೆಯ 'ಗುರು ಶಿಷ್ಯರು' ಇಂದಿನ ಪೀಳಿಗೆಯ ಮಕ್ಕಳ ಮಧ್ಯೆಯೂ ಜನಪ್ರಿಯ. ತಮ್ಮಮಕ್ಕಳಾದ ಗಿರಿ ದ್ವಾರಕೀಶ್ ಮತ್ತು ಯೋಗೇಶ್ ದ್ವಾರಕೀಶ್ ಅವರನ್ನು ಸಿನೆಮಾರಂಗದ ಮುಂಚೂಣಿಗೆ ತರಲುಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಮಾತ್ರ ನೀರ ಮೇಲಿನ ಗುಳ್ಳೆಯಂತಾಗಿದೆ.

ಇನ್ನು ಅಪ್ಪ ಮಕ್ಕಳ ಜೋಡಿಗಳಾದ ದೇವರಾಜ್-ಪ್ರಜ್ವಲ್ ದೇವರಾಜ್, ಟೈಗರ್ ಪ್ರಭಾಕರ್-ವಿನೋದ್ ಪ್ರಭಾಕರ್ ಮತ್ತು ಇನ್ನಿತರ ಹಲವಾರು ಅಪ್ಪ-ಮಗ ಜೋಡಿ ನಟರನ್ನು  ಅವಲೋಕಿಸಿದಾಗಅಪ್ಪ ಮುಗಿಲಗಲ ಬೆಳೆದಾಗ ಮಗ ಜಗದಗಲದ ಖ್ಯಾತಿಗೆ ಸೀಮಿತರಾಗಿರುವುದು ಕನ್ನಡ ಚಿತ್ರರಂಗದಇಂದಿನ ಸತ್ಯಸಾದೃಶ್ಯ! ಇದು ಮೀರಲಿ ಎಂಬುದು ನಮ್ಮ ಆಶಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com