ಸೂಪರ್ ಸ್ಟಾರ್ ಡೆಲೆ ಅಲಿ, ಹ್ಯಾರಿ ಮ್ಯಾಜಿಕ್; ಸ್ವೀಡನ್ ಮಣಿಸಿದ ಇಂಗ್ಲೆಂಡ್ ಸೆಮಿಫೈನಲ್ ಗೆ

ಸ್ವೀಡನ್ ತಂಡಕ್ಕೆ ಇಂಗ್ಲೆಂಡ್ ತಂಡದ ಸೂಪರ್ ಸ್ಟಾರ್ ಡೆಲೆ ಅಲಿ, ಹ್ಯಾರಿ ಶಾಕ್ ನೀಡಿದ್ದಾರೆ. ಸ್ವೀಡನ್ ವಿರುದ್ಧ ಇಂಗ್ಲೆಂಡ್ 2-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮಹದಾಸೆ ಹೊಂದಿದ್ದ ಸ್ವೀಡನ್ ತಂಡಕ್ಕೆ ಇಂಗ್ಲೆಂಡ್ ತಂಡದ ಸೂಪರ್ ಸ್ಟಾರ್ ಡೆಲೆ ಅಲಿ, ಹ್ಯಾರಿ ಶಾಕ್ ನೀಡಿದ್ದಾರೆ. ಸ್ವೀಡನ್ ವಿರುದ್ಧ ಇಂಗ್ಲೆಂಡ್ 2-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಪಂದ್ಯದ 30ನೇ ನಿಮಷದಲ್ಲೇ ಇಂಗ್ಲೆಂಡ್ ತಂಡದ ಸ್ಟ್ರೈಕರ್ ಹ್ಯಾರಿ ಮ್ಯಾಗೈರ್ ಗೋಲು ಗಳಿಸುವ ಮೂಲಕ ಭರ್ಜರಿ ಆರಂಭ ನೀಡಿದರು. ಇಂಗ್ಲೆಂಡ್ ಮತ್ತೋರ್ವ ಸ್ಚ್ರೈಕರ್ ಆ್ಯಷ್ಲೆ ಯಂಗ್ ಪೆನಾಲ್ಟಿ ಕಾರ್ನರ್ ನಲ್ಲಿ ಸಿಕ್ಕ ಚೆಂಡನ್ನು ಅತ್ಯುತ್ತಮವಾಗಿ ಗೋಲ್ ಬಾಕ್ಸ್ ಬಳಿ ಇದ್ದ ಹ್ಯಾರಿ ಮ್ಯಾಗೈರ್ ಗೆ ಪಾಸ್ ಮಾಡಿದರು. ಚೆಂಡು ತಮ್ಮತ್ತ ಬರುತ್ತಲೇ ಕೊಂಚವೂ ತಡ ಮಾಡದ ಹ್ಯಾರ್ ಹೆಡ್ ಮಾಡಿ ಚೆಂಡನ್ನು ಗೋಲ್ ಬಾಕ್ಸ್ ನತ್ತ ತಳ್ಳಿದರು.
ಹ್ಯಾರಿ ತಳ್ಳಿದ ಚೆಂಡನ್ನು ಸ್ವೀಡನ್ ಗೋಲ್ ಕೀಪರ್ ರಾಬಿನ್ ಒಲ್ಸೆನ್ ತಡೆಯುವಲ್ಲಿ ವಿಫಲರಾದರು. ಪರಿಣಾಮ ಇಂಗ್ಲೆಂಡ್ ಭರ್ಜರಿ ಮುನ್ನಡೆ ಪಡೆಯಿತು. 
ಬಳಿಕ ಸ್ವೀಡನ್ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತಾದರೂ ಫಲ ಸಿಗಲಿಲ್ಲ. ಸಾಕಷ್ಟು ಬಾರಿ ಗೋಲು  ಬಾರಿಸುವ ಅವಕಾಶವನ್ನು ಸ್ವೀಡನ್ ಆಟಗಾರರು ತಾವೇ ಮಾಡಿಕೊಂಡ ಯಡವಟ್ಟಿನಿಂದ ಕೈ ಚೆಲ್ಲಿದರು. ಬಳಿಕ ಪಂದ್ಯದ 59ನೇ ನಿಮಿಷದಲ್ಲಿ ಮತ್ತೆ ಇಂಗ್ಲೆಂಡ್ ಗೋಲು ಬಾರಿಸುವ ಮೂಲಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು. 
ಇಂಗ್ಲೆಂಡ್ ತಂಡದ ಸೂಪರ್ ಸ್ಟಾರ್ ಡೆಲೆ ಅಲಿ ಮತ್ತೆ ತಮ್ಮ ಫೇವರಿಟ್ ಹೆಡ್ ಶಾಟ್ ನಿಂದ ಗೋಲು ಬಾರಿಸಿ ಇಂಗ್ಲೆಂಡ್ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವಂತೆ ಮಾಡಿದರು. ತಂಡದ ಜೆಸ್ಸೆ ಲಿಂಗಾರ್ಡ್ ನೀಡಿದ ಪಾಸ್ ಅನ್ನು ಪಡೆದ ಡೆಲೆ ಅಲಿ ಗೋಲ್ ಪೋಸ್ಟ್ ನಿಂದ ದೂರ ಇದ್ದರೂ ತಮ್ಮ ಫೇವರಿಟ್ ಹೆಡ್ ಶಾಟ್ ನಿಂದ ಚೆಂಡನ್ನು ಯಶಸ್ವಿಯಾಗಿ ಗೋಲ್ ಬಾಕ್ಸ್ ಸೇರಿಸಿದರು. ಡೆಲೆ ಅಲಿ ನೀಡಿದ ಮರ್ಮಾಘಾತದಿಂದ ಚೇತರಿಸಿಕೊಳ್ಳಲಾಗದ ಸ್ವೀಡನ್ ಗೋಲು ಗಳಿಸಲು ಪರದಾಡಿತು. ಆದರೆ ಅಂತಿಮವಾಗಿ ಪಂದ್ಯದ ಅವಧಿ ಮುಕ್ತಾಯ ವೇಳೆಗೆ ಇಂಗ್ಲೆಂಡ್ ತಂಡ 2-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಪಂದ್ಯಕ್ಕೆ ಹೆಚ್ಚುವರಿಯಾಗಿ 5 ನಿಮಿಷ ಇಂಜುರಿ ಸಮಯ ನೀಡಿದರೂ ಅದನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ಸ್ವೀಡನ್ ವಿಫಲವಾಯಿತು.
ಇನ್ನು ಟೂರ್ನಿಯಲ್ಲಿ ಈಗಾಗಲೇ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸೆಮಿಫೈನಲ್ ಹಂತಕ್ಕೇರಿದ್ದು, ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ. ಇನ್ನು ಇಂಗ್ಲೆಂಡ್ ತಂಡ ಕೂಡ ಸೆಮಿಫೈನಲ್ ಗೇರಿದ್ದು, ಇಂದು ಕ್ರೊವೇಷಿಯಾ ಮತ್ತು ರಷ್ಯಾ ತಂಡಗಳು ಸೆಣಸಾಡಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಇಂಗ್ಲೆಂಡ್ ನೊಂದಿಗೆ ಸೆಮಿಫೈನಲ್ ನಲ್ಲಿ ಹೋರಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com