ಜುವೆಂಟಸ್ ತಂಡಕ್ಕೆ ಕ್ರಿಸ್ಟಿಯಾನೋ ರೊನಾಲ್ಡೋ ಸೇರ್ಪಡೆ: ರಿಯಲ್ ಮ್ಯಾಡ್ರಿಡ್ ಅಧಿಕೃತ ಘೋಷಣೆ

ಫುಟ್ಬಾಲ್ ಲೋಕದ ದಂತಕಥೆ, ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗಿದ್ಜಾರೆ ಎಂದು ಸ್ವತಃ ರಿಯಲ್ ಮ್ಯಾಡ್ರಿಡ್ ತಂಡ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಫುಟ್ಬಾಲ್ ಲೋಕದ ದಂತಕಥೆ, ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗಿದ್ಜಾರೆ ಎಂದು ಸ್ವತಃ ರಿಯಲ್ ಮ್ಯಾಡ್ರಿಡ್ ತಂಡ ಘೋಷಣೆ ಮಾಡಿದೆ.
ಈ ಹಿಂದೆಯೇ ಈ ಕುರಿತ ಸುದ್ದಿ ಫುಟ್ಬಾಲ್ ಲೋಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತಾದರೂ ರಿಯಲ್ ಮ್ಯಾಡ್ರಿಡ್ ಮಾತ್ರ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಆ ತಂಡವೇ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಮಾರಾಟ ಮಾಡಲಾಗಿದೆ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ದಾಖಲೆ ಬರೆದ ಫುಟ್ಬಾಲ್ ಸೂಪರ್ ಸ್ಟಾರ್
ಇನ್ನು ಫುಟ್ಬಾಲ್ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಹಣ ನೀಡಿ ಆಟಗಾರನೋರ್ವನನ್ನು ಕೊಂಡುಕೊಳ್ಳುತ್ತಿದ್ದು, ಜುವೆಂಟಸ್ ತಂಡ ಬರೊಬ್ಬರಿ 100 ಮಿಲಿಯನ್ ಯೂರೋಗಳನ್ನು ರಿಯಲ್ ಮ್ಯಾಡ್ರಿಡ್ ತಂಡಕ್ಕೆ ನೀಡಿ ರೊನಾಲ್ಡೋ ಅವರನ್ನು ಖರೀದಿ ಮಾಡಿದೆ ಎನ್ನಲಾಗಿದೆ. ಅಲ್ಲದೆ ರೊನಾಲ್ಡೋಗೆ ಪ್ರತೀ ಟೂರ್ನಿಗೆ ಸುಮಾರು 30 ಮಿಲಿಯನ್ ಯೂರೋಗಳನ್ನು ನೀಡುವ ಕುರಿತು ಜುವೆಂಟಸ್ ತಂಡ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.
ಒಟ್ಟಾರೆ ಫುಟ್ಬಾಲ್ ಲೋಕದಲ್ಲಿ ದಾಖಲೆಯೊಂದು ನಿರ್ಮಾಣವಾಗಿದ್ದು, ಗರಿಷ್ಠ ಹಣಕ್ಕೆ ಆಟಗಾರನೋರ್ವನನ್ನು ಖರೀದಿಸಿ ಇಟಲಿ ಮೂಲದ ಜುವೆಂಟಸ್ ತಂಡ ಇತಿಹಾಸದ ಪುಟ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com