ಪಂದ್ಯ ಆರಂಭವಾದ ಕೇವಲ ನಾಲ್ಕನೇ ನಿಮಿಷದಲ್ಲೇ ಬೆಲ್ಜಿಯಂ ತಂಡ ಗೋಲು ಭಾರಿಸುವ ಮೂಲಕ ಶುಭಾರಂಭ ಮಾಡಿತು. ಬೆಲ್ಜಿಯಂ ತಂಡದ ಥಾಮಸ್ ಮ್ಯುನಿಯರ್ 4ನೇ ನಿಮಿಷದಲ್ಲಿ ಗೋಲು ದಾಖಲಿಸಿದರು, ಆ ಬಳಿಕ ಪಂದ್ಯದ 82 ನೇ ನಿಮಿಷದಲ್ಲಿ ಮತ್ತೆ ಬೆಲ್ಜಿಯಂ ತಂಡ ಈಡೆನ್ ಹೆಜಾರ್ಡ್ ಗೋಲು ದಾಖಲಿಸುವ ಮೂಲಕ ಬೆಲ್ಜಿಯಂ ತಂಡದ ಗೆಲುವನ್ನು ಖಚಿತ ಪಡಿಸಿದರು. ಆಂತಿಮವಾಗಿ ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ ಬೆಲ್ಜಿಯಂ ತಂಡ 2-0 ಅಂತರದ ಭರ್ಜರಿ ಜಯ ಸಾಧಿಸಿತು.