ಕ್ರಿಸ್ಟಿಯಾನೋ ರೊನಾಲ್ಡೊ
ಕ್ರಿಸ್ಟಿಯಾನೋ ರೊನಾಲ್ಡೊ

ಬರೋಬ್ಬರಿ 16 ಲಕ್ಷ ರೂ. ಟಿಪ್ ಕೊಟ್ಟ ಕ್ರಿಸ್ಟಿಯಾನೋ ರೊನಾಲ್ಡೊ

ರಿಯಲ್ ಮ್ಯಾಡ್ರಿಡ್ ನ ಮಾಜಿ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಬರೋಬ್ಬರಿ 16 ಲಕ್ಷ ರುಪಾಯಿ ಟಿಪ್ ನೀಡಿ ಸುದ್ದಿಯಾಗಿದ್ದಾರೆ...
ರಿಯಲ್ ಮ್ಯಾಡ್ರಿಡ್ ನ ಮಾಜಿ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಬರೋಬ್ಬರಿ 16 ಲಕ್ಷ ರುಪಾಯಿ ಟಿಪ್ ನೀಡಿ ಸುದ್ದಿಯಾಗಿದ್ದಾರೆ. 
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಪೋರ್ಚುಗಲ್ ಪರ ಕ್ರಿಸ್ಟಿಯಾನೋ ರೊನಾಲ್ಡೊ ಆಡಿದ್ದು ಉರುಗ್ವೆ ವಿರುದ್ಧ ಸೋತು ತಂಡ ಟೂರ್ನಿಯಿಂದ ಹೊರಬಂದಿತ್ತು. ಟೂರ್ನಿ ಬಳಿಕ ಕುಟುಂಬಸ್ಥರ ಜೊತೆ ಗ್ರೀಸ್ ಗೆ ಪ್ರವಾಸಕ್ಕೆ ತೆರಳಿದ್ದರು. 
ತಾವು ತಂಗಿದ್ದ ಕೋಸ್ಟಾ ನವರಿನೋ ಹೋಟೆಲ್ ನಿಂದ ಚೆಕ್ ಔಟ್ ಮಾಡುವಾಗ ಸಿಬ್ಬಂದಿಗೆ 16 ಲಕ್ಷ ರುಪಾಯಿ ಟಿಪ್ ನೀಡಿದ್ದಾರೆ. 
ರಿಯಲ್ ಮ್ಯಾಡ್ರಿಡ್ ತೊರೆದಿರುವ ಕ್ರಿಸ್ಟಿಯಾನೋ ರೊನಾಲ್ಡೊ ದಾಖಲೆ ಮೊತ್ತ 100 ಮಿಲಿಯನ್ ಯೂರೋದೊಂದಿಗೆ ಜುವೆಂಟಸ್ ಕ್ಲಬ್ ಸೇರಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com