ಸ್ಪೇನ್ ಆಟಗಾರರು
ಫೀಫಾ ವಿಶ್ವ ಕಪ್ 2018
ಫಿಫಾ ವಿಶ್ವಕಪ್ 2018: ಇಂದು ಸ್ಪೇನ್-ಪೋರ್ಚುಗಲ್ ಕದನ
21ನೇ ಫಿಫಾ ಫುಟ್ಬಾಲ್ ವಿಶ್ವಕಪ್'ಗೆ ರಷ್ಯಾದಲ್ಲಿ ಗುರುವಾರ ಅದ್ದೂರಿ ಆರಂಭಗೊಂಡಿದ್ದು, 2018ರ ಫಿಫಾ ವಿಶ್ವಕಪ್'ನ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯ ಸಹ ಕೂಡ ಒಂದಾಗಿದೆ...
ಸೋಚಿ: 21ನೇ ಫಿಫಾ ಫುಟ್ಬಾಲ್ ವಿಶ್ವಕಪ್'ಗೆ ರಷ್ಯಾದಲ್ಲಿ ಗುರುವಾರ ಅದ್ದೂರಿ ಆರಂಭಗೊಂಡಿದ್ದು, 2018ರ ಫಿಫಾ ವಿಶ್ವಕಪ್'ನ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯ ಸಹ ಕೂಡ ಒಂದಾಗಿದೆ.
ಬಿ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಉಭಯ ತಂಡಗಳು ಇಲ್ಲಿನ ಫಿಷ್ಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
2010ರ ವಿಶ್ವಕಪ್ ನಲ್ಲಿ ಈ ಎರಡೂ ತಂಡಗಳು ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಸ್ನೇನ್ 1-0 ಅಂತರದಲ್ಲಿ ಗೆದ್ದು, ಕ್ವಾರ್ಟರ್ ಗೇರಿತ್ತು. ಬಳಿಕ ತಂಡ ಚಾಂಪಿಯನ್ ಆಗಿತ್ತು.
ಎರಡು ತಂಡಗಳು ಒಟ್ಟು 35 ಪಂದ್ಯಗಳಲ್ಲು ಮುಖಾಮುಖಿಯಾಗಿದ್ದು, 16ರಲ್ಲಿ ಸ್ಪೇನ್ ಗೆದ್ದರೆ, 5ರಲ್ಲಿ ಪೋರ್ಚುಗಲ್ ಜಯ ಗಳಿಸಿದೆ. ರಷ್ಯಾಗೆ ಆಗಮಿಸುವ ಮುನ್ನ ಅತ್ಯಂತ ಕಠಿಣ ಅಭ್ಯಾಸ ನಡೆಸಿರುವ ಸ್ಪೇನ್ ಆತ್ಮವಿಶ್ವಾಸ ವೃದ್ಧಿಸಿಕೊಕಂಡಿದೆ.
ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರ ಸಮತೋಲನವಿದ್ದು, ಮಾನಸಿಕ ಮುನ್ನಡೆ ಸಾಧಿಸಿದೆ. ಆದರೆ, ಪೋರ್ಚುಗಲ್ ತಂಡವನ್ನು ವಿಶ್ವದ ನಂ.1 ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಮುನ್ನಡೆಸಲಿದ್ದು, ಏಕಾಂಗಿಯಾಗಿ ಪಂದ್ಯದ ಫಲಿತಾಂಶ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ