ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ಬೆಂಗಳೂರಿನ 10 ವರ್ಷದ ಬಾಲಕ ರಿಷಿ ತೇಜ್

ಫಿಫಾ ವಿಶ್ವಕಪ್ 2018ರಲ್ಲಿ ಬೆಂಗಳೂರಿನ 10 ವರ್ಷದ ಬಾಲಕನೊಬ್ಬ ಇತಿಹಾಸ ನಿರ್ಮಿಸಿದ್ದಾನೆ...
ಫಿಫಾ ವಿಶ್ವಕಪ್ 2018: ಇತಿಹಾಸ ಸೃಷ್ಟಿಸಿದ ಬೆಂಗಳೂರಿನ 10 ವರ್ಷದ ಬಾಲಕ
ಫಿಫಾ ವಿಶ್ವಕಪ್ 2018: ಇತಿಹಾಸ ಸೃಷ್ಟಿಸಿದ ಬೆಂಗಳೂರಿನ 10 ವರ್ಷದ ಬಾಲಕ
Updated on
ಸೋಚಿ: ಫಿಫಾ ವಿಶ್ವಕಪ್ 2018ರಲ್ಲಿ ಬೆಂಗಳೂರಿನ 10 ವರ್ಷದ ಬಾಲಕನೊಬ್ಬ ಇತಿಹಾಸ ನಿರ್ಮಿಸಿದ್ದಾನೆ. 
ಬೆಂಗಳೂರಿನ ಬಾಲಕ ಬೆಲ್ಜಿಯಂ-ಪನಾಮ ನಡುವಿನ ಪಂದ್ಯದ ಅಧಿಕೃತ ಚೆಂಡನ್ನು ಹಿಡಿಯುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿದ್ದು, ಈ ಮೂಲಕ ಇತಿಹಾಸವನ್ನು ಬರೆದಿದ್ದಾನೆ. 
ಸೋಚಿಯಲ್ಲಿ ನಡೆದ ಬೆಲ್ಜಿಯಂ-ಪನಾಮ ನಡುವಿನ ಪಂದ್ಯದಲ್ಲಿ ನಗರದ 10 ವರ್ಷದ ಬಾಲಕ ರಿಷಿ ತೇಜ್ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆಯುವ ಗೌರವವನ್ನು ಸ್ವೀಕರಿಸಿದ್ದಾರೆ. 
ಚೆಂಡು ಹಿಡಿಯುವ ಸಂದರ್ಭದಲ್ಲಿ ನಾನು ಬಹಳಷ್ಟು ಉತ್ಸುಕನಾಗಿದ್ದೆ. ಆ ಸಂತಸವನ್ನು ಲೆಕ್ಕಿಸಲಾಗದು. ಈಗಲೂ ನಾನು ರಷ್ಯಾದಲ್ಲಿ ಕನಸು ಕಾಣುತ್ತಿದ್ದೇನೆಂದೆನಿಸುತ್ತಿದೆ. ಪಂದ್ಯದ ಪ್ರತೀ ಕ್ಷಣವನ್ನು ಆಹ್ಲಾದಿಸಬೇಕು. ಕೇವಲ ನೋಡಿ ಸಂತಸ ಪಡುವುದಷ್ಟೇ ಅಲ್ಲ, ಹೇಗೆ ಆಡುತ್ತಾರೆಂಬುದನ್ನೂ ನೋಡಬೇಕು ಎಂದು ರಿಷಿ ತೇಜ್ ಅವರು ಹೇಳಿದ್ದಾರೆ. 
ಫಿಫಾ ವಿಶ್ವಕಪ್'ನ ಪ್ರತೀ ಪಂದ್ಯದ ಆರಂಭಕ್ಕೂ ಮುನ್ನ ಇದೇ ರೀತಿ ಒಬ್ಬೊಬ್ಬ ಚಿಣ್ಣರು ಅಂಪೈರ್ ಗಳ ಕೈಗೆ ಚೆಂಡನ್ನು ಹಸ್ತಾಂತರಿಸುತ್ತಾರೆ. ಇದಕ್ಕಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಶ್ವದೆಲ್ಲೆಡೆಯಿಂದ ಒಟ್ಟು 1600 ಮಕ್ಕಳು ಆಯ್ಕೆಗೊಂಡಿದ್ದರು. ಅಂತಿಮವಾಗಿ 64 ಮಕ್ಕಳನ್ನು ಅಂತಿಮಗೊಳಿಸಲಾಗಿತ್ತು. ಕಳೆದ ತಿಂಗಳು ಸುನಿಲ್ ಚೆಟ್ರಿ ನೇತೃತ್ವದಲ್ಲಿ ಗುರುಗ್ರಾಮದಲ್ಲಿ ನಡೆದ ಅಂತಿಮ ಹಂತದ ಆಯ್ಕೆ ಟ್ರಯಲ್ಸ್ ನಲ್ಲಿ ಬೆಂಗಳೂರಿನ ರಿಷಿ ತೇಜ್ ಅವರು ಆಯ್ಕೆಯಾಗಿದ್ದರು. 
ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಚೆಂಡು ಹಂಸ್ತಾಂತರಿಸುವವರನ್ನು 'ಅಫಿಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್' (ಒಎಂಬಿಸಿ) ಎಂದು ಕರೆಯಲಾಗುತ್ತದೆ. ಫಿಫಾದ ಆಟೋಮೊಟಿವ್ ಪಾಲುದಾರ 'ಕಿಯಾ ಮೋಟಾರ್ಸ್ ಇಂಡಿಯಾ' 10 ರಿಂದ 14 ವರ್ಷದೊಳಗಿನ ಭಾರತೀಯ ಫುಟ್ಬಾಲ್ ಆಟಗಾರರಿಗೆ ಇಂತಹ ಅದ್ಬುತ ಅವಕಾಶವನ್ನು ಕಲ್ಪಿಸಿದೆ. 
ನಿನ್ನೆಯಷ್ಟೇ ಚೊಚ್ಚಲ ವಿಶ್ವಕಪ್ ಪಂದ್ಯವಾಡಿದ ಪನಾಮ, ಬೆಲ್ಚಿಯಂ ಅಬ್ಬರಕ್ಕೆ ತಬ್ಬಿಬ್ಬಾಯಿತು. ವಿಶ್ವ ನಂ.3 ಬೆಲ್ಜಿಯಂ 3-0 ಗೋಲುಗಳ ಗೆಲವು ಸಾಧಿಸಿದ್ದು, ಈ ಮೂಲಕ 'ಜಿ' ಗುಂಪಿನಲ್ಲಿ ಗೆಲವು ಸಾಧಿಸಿದ ಮೊದಲ ತಂಡ ಎನಿಸಿಕೊಂಡಿತು. 
ಮೊದಲಾರ್ಧದಲ್ಲಿ ಬೆಲ್ಜಿಯಂ ಗೋಲು ಬಾರಿಸಿದಂತೆ ನಿಯಂತ್ರಿಸಿದ ಪನಾಮ, ದ್ವಿತೀಯಾರ್ಧದಲ್ಲಿ ಮಂಕಾಯಿತು. ತನ್ನ ಅನುಭವ ಬಳಸಿ, ಎದುರಾಳಿಯ ಭದ್ರಕೋಟೆಗೆ ನುಗ್ಗಿದ ಬೆಲ್ಜಿಯಂನ ತಾರಾ ಆಟಗಾರರು ಸುಲಭವಾಗಿ ಗೋಲು ಗಳಿಸಿದರು. 
47ನೇ ನಿಮಿಷಯದಲ್ಲಿ ಡ್ರೈಸ್ ಮರ್ಟೆನ್ಸ್ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಫುಟ್ಬಾಲ್ ಜಗತ್ತಿನ ಖ್ಯಾತ ಸ್ಟ್ರೈಕರ್ ಗಳಲ್ಲಿ ಒಬ್ಬರಾಗಿರುವ ರೊಮೆಲು ಲುಕಾಕು 6 ನಿಮಿಷಗಳ ಅಂತರದಲ್ಲಿ 2 ಗೋಲು ಗಳಿಸಿದರು. ಆಕರ್ಷಕ ಹೆಡ್ಡರ್ ಮೂಲಕ 69ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ಲುಕಾಕು, ನಾಯಕ ಏಡನ್ ಹಜಾರ್ಜ್ ಸಹಾಯದೊಂದಿಗೆ 75ನೇ ನಿಮಿಷದಲ್ಲಿ 2ನೇ ಬಾರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com