ಅಭಿಮಾನಿಯ ಭೇಟಿಯಾದ ರೊನಾಲ್ಡೋ
ಫೀಫಾ ವಿಶ್ವ ಕಪ್ 2018
'ಅಭಿಮಾನಿಯ ಅಭಿಮಾನಿ': ಹತ್ತಿದ್ದ ಬಸ್ ಇಳಿದು ವಿಶೇಷ ಅಭಿಮಾನಿಯ ಭೇಟಿಯಾದ ರೊನಾಲ್ಡೋ
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದು, ಭೇಟಿಯಾಗಲು ಆಗಮಿಸಿ ಅಳುತ್ತಾ ನಿಂತಿದ್ದ ಅಭಿಮಾನಿಯನ್ನು ನೋಡಲು ಪೋರ್ಚಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಾವೇ ಬಸ್ ಇಳಿದು ಬಂದ ಘಟನೆ ನಡೆದಿದೆ.
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದು, ಭೇಟಿಯಾಗಲು ಆಗಮಿಸಿ ಅಳುತ್ತಾ ನಿಂತಿದ್ದ ಅಭಿಮಾನಿಯನ್ನು ನೋಡಲು ಪೋರ್ಚಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಾವೇ ಬಸ್ ಇಳಿದು ಬಂದ ಘಟನೆ ನಡೆದಿದೆ.
ಇದೇ ಜೂನ್ 11ರಂದು ಈ ಘಟನೆ ನಡೆದಿದ್ದು, ಪಂದ್ಯದ ನಿಮಿತ್ತ ತಾವು ತಂಗಿದ್ದ ಹೊಟೆಲ್ ನಿಂದ ರೊನಾಲ್ಡೋ ತಂಡದ ಸಹ ಆಟಗಾರರೊಂದಿಗೆ ಹೊರಡಲು ಬಸ್ ಏರಿ ಕುಳಿತಿದ್ದರು. ಈ ವೇಳೆ ಪುಟ್ಟ ಪೋರನೊಬ್ಬ ತನ್ನ ತಾಯಿಯೊಂದಿಗೆ ಅದೇ ಹೊಟೆಲ್ ಗೆ ಆಗಮಿಸಿದ್ದ. ಅಷ್ಟು ಹೊತ್ತಿಗಾಗಲೇ ರೊನಾಲ್ಡೋ ಬಸ್ ಹತ್ತಿ ಕುಳಿತಿದ್ದರು. ಈ ವೇಳೆ ಅಲ್ಲಿದ್ದ ಭದ್ರತಾ ಅಧಿಕಾರಿಗಳನ್ನು ಆ ಪುಟ್ಟ ಪೋರ ಮತ್ತು ಆತನ ತಾಯಿ ರೊನಾಲ್ಡೋ ನೋಡಬೇಕು ಎಂದು ಕೇಳಿದ್ದಾರೆ.
ಆದರೆ ಅಧಿಕಾರಿ ಅದು ಸಾಧ್ಯವಿಲ್ಲ. ಭದ್ರತಾ ಲೋಪಲಾಗುತ್ತದೆ ಎಂದು ಹೇಳಿ ನಿರಾಕರಿಸಿದ್ದಾರೆ. ಈ ವೇಳೆ ಭಾವುಕನಾದ ಬಾಲಕ ಅಲ್ಲೇ ಅಧಿಕಾರಿಯ ರೊನಾಲ್ಡೋ ಭೇಟಿಗಾಗಿ ಗೋಗರೆದಿದ್ದಾನೆ, ಜೋರಾಗಿ ಅತ್ತಿದ್ದಾನೆ. ಈ ಘಟನೆಯನ್ನು ಬಸ್ ನಿಂದ ವೀಕ್ಷಿಸಿದ ರೊನಾಲ್ಡೋ ಶಿಷ್ಟಾಚಾರವನ್ನೂ ಬದಿಗೊತ್ತಿ ಕೂಡಲೇ ಬಸ್ ನಿಂದ ಇಳಿದು ತಮ್ಮ ಅಭಿಮಾನಿಗೆ ದರ್ಶನ ನೀಡಿದ್ದಾರೆ. ಅಲ್ಲದೆ ಆತನ ಕಣ್ಣೀರು ಒರೆಸಿ ಸಮಾಧಾನ ಪಡಿಸಿ ಕಳುಹಿಸಿದ್ದಾರೆ.
ಇದೇ ವೇಳೆ ಬಾಲಕ ತಮ್ಮ ನೆಚ್ಚಿನ ಫುಟ್ ಬಾಲ್ ತಾರೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾನೆ. ರೊನಾಲ್ಡೋರನ್ನು ಕಂಡ ಬಾಲಕ ಅದೇ ಸಂತಸದಲ್ಲಿ ವಾಪಸ್ ಆಗಿದ್ದಾನೆ. ಇವಿಷ್ಟೂ ಘಟನೆಯನ್ನು ಸ್ಥಳೀಯ ಪತ್ರಕರ್ತರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
Cristiano Ronaldo gets off the Portugal bus to hug, take a picture, and sign a young fan’s shirt. Respect
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ