ಲೈವ್ ನೀಡುತ್ತಿದ್ದ ಪತ್ರಕರ್ತೆಗೆ ಮುತ್ತು: ಕ್ಷಮೆಯಾಚಿಸಿದ ರಷ್ಯಾ ಅಭಿಮಾನಿ

ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ವೇಳೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ...
ಪತ್ರಕರ್ತೆಗೆ ಮುತ್ತು ನೀಡಿದ ವ್ಯಕ್ತಿ
ಪತ್ರಕರ್ತೆಗೆ ಮುತ್ತು ನೀಡಿದ ವ್ಯಕ್ತಿ
ಬರ್ಲಿನ್: ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ವೇಳೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಜರ್ಮನ್ ಟಿವಿ ವರದಿಗಾರ್ತಿಯನ್ನು ತಬ್ಬಿಕೊಂಡು ಮುತ್ತು ನೀಡಿದ್ದ ರಷ್ಯಾದ ಫುಟ್ಬಾಲ್ ಅಭಿಮಾನಿ ಶುಕ್ರವಾರ ಕ್ಷಮೆಯಾಚಿಸಿದ್ದಾನೆ.
ಹೆಸರು ಹೇಳಲು ಇಚ್ಚಿಸಿದ ಫುಟ್ಬಾಲ್ ಅಭಿಮಾನಿ ಇಂದು ಕೊಲಂಬಿಯಾ ಮೂಲದ ಪತ್ರಕರ್ತೆ ಜುಲಿಯೆತ್‌ ಗೊಂಝಾಲೆಜ್‌ ಅವರಿಗೆ ವಿಡಿಯೋ ಕಾಲ್ ಮಾಡಿ 'ನಾನು ನಿಮಗೆ ಅತಿ ಹೆಚ್ಚು ಕ್ಷಮೆಯಾಚಿಸುತ್ತೇನೆ' ಎಂದು ಹೇಳಿದ್ದಾನೆ.
ನಾನು ತುಂಬಾ ಅಜಾಗರೂಕತೆಯಿಂದ ನಡೆದುಕೊಂಡೆ. ಇದರಿಂದ ನಿಮಗೆ ಗೊಂದಲ ಮತ್ತು ಆಘಾತ ಉಂಟುಮಾಡಬಹುದೆಂದು ಭಾವಿಸಲಿಲ್ಲ ಎಂದು ರಷ್ಯಾ ಅಭಿಮಾನಿ ತಪ್ಪೊಪ್ಪಿಕೊಂಡಿದ್ದಾನೆ.
ಜುಲಿಯೆತ್‌ ಅವರು ಕರ್ತವ್ಯದಲ್ಲಿ ನಿರತರಾಗಿದ್ದಾಗ ಕ್ಯಾಮೆರಾಗೆ ಅಡ್ಡ ಬಂದ ವ್ಯಕ್ತಿ ಏಕಾಏಕಿ ಪತ್ರಕರ್ತೆಯನ್ನು ತಬ್ಬಿಕೊಂಡು ಮುತ್ತು ನೀಡಿ ಪರಾರಿಯಾಗಿದ್ದ. ಈ ಬಗ್ಗೆ ಪತ್ರಕರ್ತೆ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಪರಿಸ್ಥಿತಿ ತೋಡಿಕೊಂಡಿದ್ದರು.
ಇನ್ನುವ್ಯಕ್ತಿಯ ಹೇಯ ವರ್ತನೆಯ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಕರ್ತೆ ವಿಚಲಿತರಾಗದೆ ವರದಿ ಮುಂದುವರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com