ಫಿಫಾ ವಿಶ್ವಕಪ್: ದ. ಕೊರಿಯಾ ವಿರುದ್ಧ ಮೆಕ್ಸಿಕೋಗೆ 2-1 ಅಂತರದ ಜಯ

ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೋ, ದಕ್ಷಿಣ ಕೊರಿಯಾವನ್ನು ಮಣಿಸಿದೆ.
ಫಿಫಾ ವಿಶ್ವಕಪ್: ದ. ಕೊರಿಯಾ ವಿರುದ್ಧ ಮೆಕ್ಸಿಕೋಗೆ 2-1 ಅಂತರದ ಜಯ
ಫಿಫಾ ವಿಶ್ವಕಪ್: ದ. ಕೊರಿಯಾ ವಿರುದ್ಧ ಮೆಕ್ಸಿಕೋಗೆ 2-1 ಅಂತರದ ಜಯ
Updated on: 
ರೊಸ್ಟೋವ್ ಅರೇನಾ (ರಷ್ಯಾ): ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೋ, ದಕ್ಷಿಣ ಕೊರಿಯಾವನ್ನು ಮಣಿಸಿದೆ.
ದಕ್ಷಿಣ ಕೊರಿಯಾ ವಿರುದ್ಧ ಮೆಕ್ಸಿಕೋ 2-1 ಗೋಲುಗಳಿಂದ ಜಯ ಸಾಧಿಸಿದೆ.ಮೆಕ್ಸಿಕೋದ ಜೇವಿಯರ್ ಹೆರ್ನಾಂಡೆಜ್ 50 ನೇ ಗೋಲು ಗಳಿಸಿ ದಾಖಲೆ ನಿರ್ಮಾಣ ಮಾಡಿರುವುದು ವಿಶೇಷವಾಗಿತ್ತು.
ಮೆಕ್ಸಿಕೋ ಪರವಾಗಿ ಕಾರ್ಲೋಸ್ ವೇಲಾ (26ನೇ ನಿಮಿಷ), ಜೇವಿಯರ್ ಹೆರ್ನಾಂಡೆಜ್ (66ನೇ ನಿಮಿಷ) ಗೋಲು ಗಳಿಸಿದರು.
ಕೊರಿಯಾ ಪರ 90+3ನೇ ನಿಮಿಷದಲ್ಲಿ ಸನ್ ಹೆಂಗ್-ಮಿನಿ ಏಕಕಿಕ ಗೋಲು ಗಳಿಸಿ ತಂಡ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಸಹಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com