ಫೀಫಾ ವಿಶ್ವಕಪ್ 2018 : ಅರ್ಜಿಂಟಿನಾವನ್ನು 4-3 ಗೋಲುಗಳಿಂದ ಸೋಲಿಸಿದ ಫ್ರಾನ್ಸ್ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16ರ ಘಟ್ಟದಲ್ಲಿ ಅರ್ಜಿಂಟಿನಾ ತಂಡವನ್ನು 4-3 ಗೋಲುಗಳಿಂದ ಬಗ್ಗುಬಡಿದ ಫ್ರಾನ್ಸ್ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.
ಮೈದಾನದಲ್ಲಿ ಫ್ರಾನ್ಸ್ ತಂಡದ ಆಟಗಾರರ ಸಂಭ್ರಮ
ಮೈದಾನದಲ್ಲಿ ಫ್ರಾನ್ಸ್ ತಂಡದ ಆಟಗಾರರ ಸಂಭ್ರಮ
Updated on

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ   16ರ ಘಟ್ಟದಲ್ಲಿ ಅರ್ಜಿಂಟಿನಾ  ತಂಡವನ್ನು  4-3 ಗೋಲುಗಳಿಂದ ಬಗ್ಗುಬಡಿದ ಫ್ರಾನ್ಸ್  ಕ್ವಾರ್ಟರ್ ಫೈನಲ್ಸ್ ಗೆ  ಲಗ್ಗೆ ಇಟ್ಟಿದೆ.

ಯುವ ಆಟಗಾರ ಕೈಲಿಯಾನ್ ಬಾಪೆಯ ಮನಮೋಹಕ  2 ಗೋಲುಗಳು  ಫ್ರಾನ್ಸ್ ಗೆಲುವಿಗೆ ವರದಾನವಾಯಿತು. ಪೆನಾಲ್ಟಿ ಅವಕಾಶದಿಂದಲೂ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಪ್ಲೋರಿಯಾನ್ ದವುಹೀನ್ ಬದಲಿ ಆಟಗಾರರಾಗಿ ಕಣದಲ್ಲಿ ಇಳಿದಿದ್ದ  ಕೈಲಿಯಾನ್  ಬಾಪೆ 11 ನೇ ನಿಮಿಷದ ನಂತರ  ಫ್ರಾನ್ಸ್ ತಂಡದ ಪರ ಮಿಂಚಿನ ಗೋಲು ಗಳಿಸುವ ಮೂಲಕ ತಂಡ ಗೆಲ್ಲಲು ಕಾರಣರಾದರು.   ಲಿಯೊನೆಲ್ ಮೆಸ್ಸಿ ಫ್ರೆಂಚ್ ಗೋಲನ್ನು ತಡೆಯುವಲ್ಲಿ ವಿಫಲರಾದರು.

ಪಂದ್ಯ ಆರಂಭಕ್ಕೂ ಮುನ್ನ ಅರ್ಜಿಂಟೀನಾದ ಲಿಯೊನೆಲ್ ಮೆಸ್ಸಿ ಬಗ್ಗೆ ಹೆಚ್ಟಿನ ಒಲವು ಹೊಂದಲಾಗಿತ್ತು. ಆದರೆ.  ಕೈಲಿಯಾನ್  ಬಾಪೆ  ಚಾಕಚಕ್ಯತೆಯಿಂದ ಗೋಲುಗಳಿಸಿ ಧೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಾದರು. ಪಿಲೆ ನಂತರ  ವಿಶ್ವ ಕಪ್ ನಲ್ಲಿ ಎರಡು ಗೋಲು ಗಳಿಸಿದ 19 ವರ್ಷದ ಯುವಕ ಎಂಬ ಖ್ಯಾತಿಗೆ  ಕೈಲಿಯಾನ್  ಬಾಪೆ ಪಾತ್ರರಾದರು. 1958ರ ಬ್ರೆಜಿಲ್ , ಸ್ವಿಡನ್ ನಡುವಣ ಫೈನಲ್  ಪಂದ್ಯದಲ್ಲಿ ಪಿಲೆ ಎರಡು ಗೋಲು ಗಳಿಸಿದ್ದರು.

ಪಂದ್ಯದ ಎರಡನೇ ಭಾಗದಲ್ಲಿ ಬಾಪೆ ಫ್ರಾನ್ಸ್ ಪರವಾಗಿ ಬದಲಾವಣೆ ಮಾಡಿದರು. ಅರ್ಜಿಂಟಿನಾ  ಮೆಸ್ಸಿ ಮುಂಚೂಣಿಯಲ್ಲಿ  ವಿಶ್ವ ಕಪ್ ಗೆಲ್ಲುವ ಅವಕಾಶವನ್ನು ಅವಕಾಶವನ್ನು ಬಾಪೆ ಕಿತ್ತುಕೊಂಡರು. ಪಂದ್ಯದ ಆರಂಭಗೊಂಡ 9 ನೇ ನಿಮಿಷದಲ್ಲಿ ಅಂಟೋನಿ ಗ್ರಿಜಿಮನ್ ಪೆನಾಲ್ಟಿ ಸ್ಥಳದಿಂದ ಆರಂಭಿಕ ಗೋಲು ತಂದುಕೊಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com