ರಿಯೋ ಡಿ ಜನೈರೋ: ಆತಿಥೇಯ ಬ್ರೆಜಿಲ್ ತಂಡ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದೇ ತಡ, ಅಲ್ಲಿನ ಬೀಚ್ಗಳಲ್ಲಿ ತವರಿನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಭಿಮಾನಿಗಳು ತಮ್ಮ ಕೈಯಲ್ಲಿದ್ದ ಬೀಯರ್ ಬಾಟಲ್ಗಳನ್ನು ತೂರಾಡುವ ಮೂಲಕ ಹರ್ಷದ್ಘಾರಗಳೊಂದಿಗೆ ಜಿಗಿದಾಡಿದ್ದು ನೋಡುವುದೇ ಒಂದು ಹಬ್ಬವಾಗಿತ್ತು. ಅಲ್ಲದೆ, ಸಮುದ್ರ ತಟದಲ್ಲಿ ಪಟಾಕಿಗಳ ಸದ್ದಿನೊಂದಿಗೆ, ಬ್ರೆಜಿಲ್ ಫುಟ್ಬಾಲ್ ವಿಶ್ವಕಪ್ ಗೆಲ್ಲಲಿ ಎಂಬ ಘೋಷಣೆಗಳೂ ಕೇಳಿಬಂದಿತು.