ರಿಯೋ ಡಿ ಜೆನೈರೊ: ನೈಜೀರಿಯಾ ಫುಟ್ಬಾಲ್ ಸಂಸ್ಥೆಗೆ ಅಲ್ಲಿನ ಸರ್ಕಾರ ಮಧ್ಯಪ್ರವೇಶಿಸಿ ಆಡಳಿತ ಅಧಿಕಾರಿಯನ್ನು ನೇಮಿಸಿದ ಹಿನ್ನೆಲೆಯಲ್ಲಿ ಫಿಫಾ ನೈಜೀರಿಯಾ ಫುಟ್ಬಾಲ್ ಸಂಸ್ಥೆಗೆ ಎಚ್ಚರಿಕೆ ನೀಡಿದೆ ಶುಕ್ರವಾರ ನೈಜೀರಿಯಾ ಸರ್ಕಾರಕ್ಕೆ ಪತ್ರ ಬರೆದ ಫಿಫಾ, ರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ನ ವಿಚಾರದಲ್ಲಿ ತಲೆ ಹಾಕದಿರುವಂತೆ ತಿಳಿಸಿದೆ. ಫಿಫಾದ ಎಲ್ಲಾ ಸದಸ್ಯ ಸಂಸ್ಥೆಗಳು ತನ್ನ ನಿಯಮಾವಳಿಯ 13, 1 ಮತ್ತು 17ರ ಪ್ರಕಾರ ಯಾವುದೇ ಸಂಸ್ಥೆ ತನ್ನ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ನೀಡದೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಎನ್ಎಫ್ಎಫ್ಗೆ ತಿಳಿಸಿದೆ.