

ಫುಟ್ಬಾಲ್ ಆಟಗಾರರು ತಮ್ಮ ಆಟದಷ್ಟೇ ತಮ್ಮ ಮೈಮೇಲಿನ ಟ್ಯಾಟೂಗಳಿಂದ ಖ್ಯಾತಿ ಪಡೆಯುತ್ತಾರೆ. ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಯೋನಲ್ ಮೆಸ್ಸಿ ಸಹ ತಮ್ಮ ಎಡಗಾಲಿನ ಮೀನಖಂಡದಲ್ಲಿ ಎರಡು ಕೈಗಳ ಟ್ಯಾಟೂ ಹೊಂದಿದ್ದು, ಅದರ ಮೇಲೆ ಸಾಕಷ್ಟು ಊಹಾಪೋಹಗಳು ಮೂಡಿದ್ದವು. ಮೆಸ್ಸಿ ಅವರ ಟ್ಯಾಟೂ ಡಿಗೊ ಮರಡೋನಾ ಅವರ ಹ್ಯಾಂಡ್ ಗೋಲು ಸೂಚಿಸುತ್ತದೆ ಎಂದು ಬಹುತೇಖ ಮಂದಿ ಸೂಚಿಸಿದ್ದರು. ಆದರೆ ಆ ಎರಡು ಕೈಗಳು ಮೆಸ್ಸಿ ಮಗ 'ಥಿಯಾಗೊ' ಅವರದು. ಈಗ ಆ ಎರಡು ಕೈಗಳ ಮಧ್ಯೆ ಥಿಯಾಗೊ ಎಂದು ಮಗನ ಹೆಸರಿನ ಟ್ಯಾಟೂ ಹಾಕಿಸಿಕೊಂಡ ನಂತರ ಎಲ್ಲಾ ವದಂತಿಗಳಿಗೂ ತಪ್ಪು ಕಲ್ಪನೆಗಳಿಗೂ ತೆರೆ ಬಿದ್ದಿದೆ.