

ಸಾವೊ ಪೌಲೊ: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಉಪಾಂತ್ಯದ ಸುತ್ತಿನಲ್ಲಿ ಪ್ರಬಲ ಅರ್ಜೆಂಟೀನಾ ತಂಡವನ್ನು ಎದುರಿಸಲಿರುವ ಹಾಲೆಂಡ್ ತಂಡದ ಆಟಗಾರ ರಾಬಿನ್ ವ್ಯಾನ್ ಪರ್ಸಿ, ನಾಕೌಟ್ ಸುತ್ತಿನಲ್ಲಿನ ವೈಫಲ್ಯದಿಂದ ಹೊರಬರಲು ಎದುರು ನೋಡುತ್ತಿದ್ದಾರೆ.
ಗುಂಪು ಹಂತದಲ್ಲಿ ಸ್ಪೇನ್ ವಿರುದ್ಧ ಫ್ಲೈಯಿಂಗ್ ಹೆಡ್ ಮೂಲಕ ಗೋಲು ದಾಖಲಿಸಿ ಎಲ್ಲರ ಗಮನ ಸೆಳೆದು ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ರಾಬಿನ್ ವ್ಯಾನ್ ಪರ್ಸಿ ನಾಕೌಟ್ ಸುತ್ತಿನಲ್ಲಿ ಇದುವರೆಗೂ ಗೋಲು ದಾಖಲಿಸಿಲ್ಲ.
ಹಾಗಾಗಿ ತಂಡದ ಪ್ರಮುಖ ಆಟಗಾರನಾಗಿರುವ ವ್ಯಾನ್ ಪರ್ಸಿ ತಮ್ಮ ವೈಫಲ್ಯದಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆಗ ಮಾತ್ರ ಹಾಲೆಂಡ್ ತಂಡ ಅರ್ಜೆಂಟೀನಾ ವಿರುದ್ಧ ಗೆಲವು ದಾಖಲಿಸಲು ಸಾಧ್ಯ.